ಚಾರ್ಲಿ ಚಾಪ್ಲಿನ್ ನ್ನು ಪ್ರಮುಖ ಪಾತ್ರದಲ್ಲಿ ತೋರಿಸಿರುವ ಕಿರಣ್ ರಾಜ್ ರ 777 ಚಾರ್ಲಿ ಸಿನಿಮಾ
777 ಚಾರ್ಲಿ ಸಿನಿಮಾದ ಟ್ರೈಲರ್ ಗೆ ಬಂದಿರುವ ಪ್ರತಿಕ್ರಿಯೆಗೆ ರಕ್ಷಿತ್ ಶೆಟ್ಟಿ ಹಾಗೂ ತಂಡದವರು ಅತ್ಯಂತ ಸಂತಸಗೊಂಡಿದ್ದು, 30 ಮಿಲಿಯನ್ ವೀಕ್ಷಣೆ ಪಡೆದಿದೆ.
Published: 24th May 2022 01:59 PM | Last Updated: 24th May 2022 02:25 PM | A+A A-

ಚಾರ್ಲಿ ಸಿನಿಮಾದ ದೃಶ್ಯ (ಸಂಗ್ರಹ ಚಿತ್ರ)
777 ಚಾರ್ಲಿ ಸಿನಿಮಾದ ಟ್ರೈಲರ್ ಗೆ ಬಂದಿರುವ ಪ್ರತಿಕ್ರಿಯೆಗೆ ರಕ್ಷಿತ್ ಶೆಟ್ಟಿ ಹಾಗೂ ತಂಡದವರು ಅತ್ಯಂತ ಸಂತಸಗೊಂಡಿದ್ದು, 30 ಮಿಲಿಯನ್ ವೀಕ್ಷಣೆ ಪಡೆದಿದೆ.
ನಿರ್ದೇಶಕ ಕಿರಣ್ ರಾಜ್ ಅವರ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಜೂ.10 ರಂದು ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರಕಥೆ ಧರ್ಮ (ರಕ್ಷಿತ್) ಹಾಗೂ ಚಾರ್ಲಿ ಹೆಸರಿನ ಅವರ ನಾಯಿ ಸುತ್ತ ಸುತ್ತುವ ಕಥೆಯಾಗಿದ್ದು, ಸಿನಿಮಾದ ಶೀರ್ಷಿಗೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಯಾಗಿದೆ.
"ನಾನು ಚಾರ್ಲಿ ಚಾಪ್ಲಿನ್ ನ ಕಟ್ಟಾ ಅಭಿಮಾನಿ, ಅವರ ಸಿನಿಮಾ ವೀಕ್ಷಣೆಯ ಮೂಲಕವೇ ನಾನು ಸಿನಿಮಾ ಎಂದರೆ ದೃಶ್ಯ ಆಕರ್ಷಣೆ ಎಂಬುದನ್ನು ಅರ್ಥ ಮಾಡಿಕೊಂಡೆ. ನನ್ನ ಈ ಹಿಂದಿನ 12 ನಿಮಿಷದ ಕಿರು ಚಿತ್ರ (ಕಬ್ಬಿನ ಹಾಲು) ಮೂಲಕ ನಾನು ಈ ಪ್ರಯೋಗವನ್ನು ಮಾಡಿದ್ದೆ. ಡೈಲಾಗ್ ಇಲ್ಲದೆಯೇ ವೀಕ್ಷಕರಿಗೆ ತಿಳಿಸಬೇಕಾದ್ದನ್ನು ತಿಳಿಸಲಾಗಿತ್ತು" ಎನ್ನುತ್ತಾರೆ ನಿರ್ದೇಶಕರು.
ಇದನ್ನೂ ಓದಿ: ಭಾರತದಾದ್ಯಂತ 21 ನಗರಗಳಲ್ಲಿ ನಟ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಪ್ರೀಮಿಯರ್ ಶೋ!
ಚಾರ್ಲಿಯ ಅಭಿಮಾನಿಯಾಗಿ, ನನ್ನ ಸಿನಿಮಾದಲ್ಲಿ ಅವರ ಹೆಸರು ಹಾಗೂ ಅವರ ಇರುವಿಕೆಯನ್ನು ಕಾಣಬಹುದಾಗಿದೆ ಎನ್ನುವ ಕಿರಣ್ ರಾಜ್ 777 ನಂಬರ್ ಬಗ್ಗೆಯೂ ಮಾತನಾಡಿದ್ದು, ಭಾರತೀಯ ಸಂಖ್ಯಾಶಾಸ್ತ್ರದಲ್ಲಿ 7 ಎಂಬುದು ಪ್ರೀತಿ, ಸ್ನೇಹ, ಬಾಂಧವ್ಯದ ಪ್ರತೀಕವಾಗಿದೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ 777 ದೇವತೆಗಳಿಗೆ ಸಂಬಂಧಿಸಿದ ನಂಬರ್ ಆಗಿದೆ.
ಸಿನಿಮಾದಲ್ಲಿ ಚಾರ್ಲಿಯ 7 ಅದ್ಭುತ ಕ್ಷಣಗಳನ್ನು ಹೊಂದಿದೆ. ಇದು ಸಾರ್ವತ್ರಿಕವಾಗಿದ್ದು ನನ್ನ ಅದೃಷ್ಟದ ಸಂಖ್ಯೆಯೂ ಆಗಿದೆ ಆದ್ದರಿಂದ ಈ ಸಿನಿಮಾಗೆ 777 ಚಾರ್ಲಿ ಎಂಬ ಶೀರ್ಷಿಕೆ ನೀಡಲಾಗಿದೆ ಎಂದು ಕಿರಣ್ ರಾಜ್ ಹೇಳಿದ್ದಾರೆ.