ಸ್ಯಾಂಡಲ್ವುಡ್ ನಿರ್ದೇಶಕ, ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಎನ್. ಮೋಹನ್ ಕುಮಾರ್ ವಿಧಿವಶ
ಸ್ಯಾಂಡಲ್ವುಡ್ ನಿರ್ದೇಶಕ, ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಎನ್. ಮೋಹನ್ ಕುಮಾರ್(56) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
Published: 24th May 2022 10:43 AM | Last Updated: 24th May 2022 12:56 PM | A+A A-

ಕೆ.ಎನ್ ಮೋಹನ್ ಕುಮಾರ್
ಬೆಂಗಳೂರು: ಸ್ಯಾಂಡಲ್ವುಡ್ ನಿರ್ದೇಶಕ, ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಎನ್. ಮೋಹನ್ ಕುಮಾರ್(56) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಎನ್.ಆರ್.ಕಾಲೋನಿಯ ರಾಮಲೀಲಾ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ಮೋಹನ್ ಅವರು, ಸ್ನಾನದ ಕೋಣೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಸಮೀಪದ ರಂಗ ದೊರೈ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೃತ ಮೋಹನ್ ಕುಮಾರ್ ಅವರು ತಾಯಿ ಕಮಲಮ್ಮ, ಪತ್ನಿ ಹಾಗೂ ನಟಿ, ನಿರೂಪಕಿ ವತ್ಸಲಾ ಮೋಹನ್, ಪುತ್ರಿ ಮತ್ತು ನಟಿ ಅನನ್ಯಾ ಮೋಹನ್ ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ
ರಂಗಭೂಮಿ ಹಿನ್ನೆಲೆಯಿಂದ ಬಂದು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜಾನಪದ ಕಾರ್ಯಕ್ರಮದಲ್ಲಿ ನಿರೂಪಕರಾಗುವ ಮೂಲಕ ಕಿರುತೆರೆ ಪ್ರವೇಶಿಸಿದರು. ಎಂಜಿನಿಯರ್ ಪದವಿಧರರಾಗಿದ್ದ ಕೆ.ಎನ್.ಮೋಹನ್ ರಂಗಭೂಮಿ, ಧಾರವಾಹಿ, ಪತ್ರಿಕೋದ್ಯಮ ಹೀಗೆ ಹಲವರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ಸಹೋದ್ಯೋಗಿಗಳು, ಅಭಿಮಾನಿಗಳು, ಸ್ನೇಹಿತರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ.
ತಮ್ಮ ಪತ್ನಿ ವತ್ಸಲಾ ಮೋಹನ್ ಅವರ ಸಜ್ಜಾದನಾ ಗಣೇಶ ಕಾದಂಬರಿ ಆಧರಿಸಿ 2016ರಲ್ಲಿ ಬೊಂಬೆಯಾಟ ಎಂಬ ಮಕ್ಕಳ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿತ್ತು.