'ಸಾರಿ-ಕರ್ಮ ರಿಟರ್ನ್ಸ್' ರಾಗಿಣಿ ದ್ವಿವೇದಿಯ ಕಮ್ ಬ್ಯಾಕ್ ಚಿತ್ರ; ನಿರ್ದೇಶಕ ಬ್ರಹ್ಮಾನಂದ ರೆಡ್ಡಿ
ಡ್ರಗ್ ಕೇಸ್ ಕಹಿ ಘಟನೆ ಮರೆತು ರಾಗಿಣಿ ದ್ವಿವೇದಿ ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಸಾರಿ-ಕರ್ಮ ರಿಟರ್ನ್ಸ್ ಚಿತ್ರದ ಮೂಲಕ ರಾಣಿಯವರು ಸ್ಯಾಂಡಲ್'ವುಡ್ ವಾಪಸ್ ಆಗುತ್ತಿದ್ದಾರೆ.
Published: 25th May 2022 12:01 PM | Last Updated: 25th May 2022 01:07 PM | A+A A-

ರಾಗಿಣಿ ದ್ವಿವೇದಿ
ಬೆಂಗಳೂರು: ಡ್ರಗ್ ಕೇಸ್ ಕಹಿ ಘಟನೆ ಮರೆತು ರಾಗಿಣಿ ದ್ವಿವೇದಿ ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಸಾರಿ-ಕರ್ಮ ರಿಟರ್ನ್ಸ್ ಚಿತ್ರದ ಮೂಲಕ ರಾಣಿಯವರು ಸ್ಯಾಂಡಲ್'ವುಡ್ ವಾಪಸ್ ಆಗುತ್ತಿದ್ದಾರೆ.
ಮೇ.24 ರಾಗಿಣಿಯವರ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಚಿತ್ರದ ತಂಡ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ.
ಚಿತ್ರದ ಕುರಿತು ನಿರ್ದೇಶಕ ಬ್ರಹ್ಮಾನಂದ ರೆಡ್ಡಿಯವರು ಮಾತನಾಡಿದ್ದು, ಚಿತ್ರವು ರಾಣಿಯವರ ಕಮ್ ಬ್ಯಾಕ್ ಸಿನಿಮಾವಾಗಿದೆ. ಚಿತ್ರವು ವಿಶಿಷ್ಟ ಕಥೆಯನ್ನು ಹೊಂದಿದ್ದು, ಚಿತ್ರದಲ್ಲಿ ಮಾಟ-ಮಂತ್ರ, ಬ್ಲ್ಯಾಕ್ ಮ್ಯಾಜಿಕ್ ಏನೂ ಇಲ್ಲ. ಇದೊಂದು ಕ್ರೈಂ ಥ್ರಿಲ್ಲರ್. ಸೂಪರ್ ಹೀರೋ ಕಾನ್ಸೆಪ್ಟ್ನ ಚಿತ್ರವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡ-ತಮಿಳು ದ್ವಿಭಾಷಾ ಸಿನಿಮಾದಲ್ಲಿ ಸಂತಾನಂ ಜೊತೆ ತುಪ್ಪದ ಬೆಡಗಿ 'ರಾಗಿಣಿ ದ್ವಿವೇದಿ'
ಚಿತ್ರವನ್ನು ನವೀನ್ ಕುಮಾರ್, ಜೈ ಕೃಪ್ಲಾನಿ, ಜೈನ್ ಜಾರ್ಜ್ ನಿರ್ಮಿಸುತ್ತಿದ್ದು, ರಾಜು ಎಮಿಗ್ನೂರ್ ಸಂಗೀತ ಹಾಗೂ ಆಂಥೋನಿ ಪೈಯಾನೋ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ರಾಜೀವ್ ಗಣೇಶನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ರಾಗಿಣಿಯವರು ಕರ್ವ 3 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರಲ್ಲದೆ, ಕನ್ನಡ ಮತ್ತು ತೆಲುಗಿನ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.