'60 ಇನ್ನೊಂದು ದೊಡ್ಡ ಇನ್ನಿಂಗ್ಸ್': 61ನೇ ಹುಟ್ಟುಹಬ್ಬದ ಖುಷಿಯಲ್ಲಿ 'ಕ್ರೇಜಿಸ್ಟಾರ್ ರವಿಚಂದ್ರನ್'!

ಇಂದು ಮೇ 30ಕ್ಕೆ 61ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ವಿ ರವಿಚಂದ್ರನ್‌ಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ. ಈ ಸಂದರ್ಭವನ್ನು ಗುರುತಿಸಲು ರವಿಚಂದ್ರನ್ ಅವರ ಮುಂಬರುವ ಚಿತ್ರ ರವಿ ಬೋಪಣ್ಣನ ಪೋಸ್ಟರ್ 'ಕರ್ಮ ಈಸ್ ಕ್ರೇಜಿ' ಎಂಬ ಅಡಿಬರಹದೊಂದಿಗೆ ಬರುತ್ತಿದೆ.

Published: 30th May 2022 01:16 PM  |   Last Updated: 30th May 2022 01:30 PM   |  A+A-


poster of Ravi Bopanna

ರವಿ ಬೋಪಣ್ಣ ಚಿತ್ರದ ಪೋಸ್ಟರ್

The New Indian Express

ಇಂದು ಮೇ 30ಕ್ಕೆ 61ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ವಿ ರವಿಚಂದ್ರನ್‌ಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ. ಈ ಸಂದರ್ಭವನ್ನು ಗುರುತಿಸಲು ರವಿಚಂದ್ರನ್ ಅವರ ಮುಂಬರುವ ಚಿತ್ರ ರವಿ ಬೋಪಣ್ಣನ ಪೋಸ್ಟರ್ 'ಕರ್ಮ ಈಸ್ ಕ್ರೇಜಿ' ಎಂಬ ಅಡಿಬರಹದೊಂದಿಗೆ ಬರುತ್ತಿದೆ.

 '60 ಮತ್ತೊಂದು ದೊಡ್ಡ ಇನ್ನಿಂಗ್ಸ್' ಎಂದು ದೊಡ್ಡ ಅಕ್ಷರದಲ್ಲಿ ಬರೆದಿರುವ ಸಾಲು ಸೇರಿದಂತೆ ರವಿಚಂದ್ರನ್ ಅವರ ಎಲ್ಲಾ ಚಿತ್ರಗಳ ಶೀರ್ಷಿಕೆಗಳಿಂದ ವಿಶಿಷ್ಟವಾದ ಪೋಸ್ಟರ್ ನ್ನು ರಚಿಸಲಾಗಿದೆ. ಪ್ರೇಮಲೋಕ, ರಣಧೀರ, ಯುದ್ಧಕಾಂಡ, ಕಲಾವಿದ, ಶಾಂತಿ ಕ್ರಾಂತಿ, ಸಿಪಾಯಿ, ರಾಮಾಚಾರಿ ಮುಂತಾದ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಬಹುಮುಖಿ ಹಿರಿಯ ನಟ, ಪ್ರತಿ ಚಿತ್ರದಲ್ಲೂ ತನ್ನನ್ನು ತಾನು ಹೊಸಕಿ ಹಾಕಿಕೊಳ್ಳುವ ಹಂಬಲದಲ್ಲಿರುವ ಕಲಾವಿದ ರವಿಚಂದ್ರನ್.

ಸದ್ಯಕ್ಕೆ ತಮ್ಮ ಮುಂದಿನ ಚಿತ್ರದತ್ತ ಗಮನಹರಿಸಿರುವ ರವಿಚಂದ್ರನ್, ರವಿ ಬೋಪಣ್ಣ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರವನ್ನು ನಿರ್ದೇಶಿಸುತ್ತಿರುವ ಅವರು, ಅನೇಕ ದೃಶ್ಯಗಳನ್ನು ಮರುಹೊಂದಿಸಲು ಕೋವಿಡ್ ಸಾಂಕ್ರಾಮಿಕ ಒಂದು ಅವಕಾಶವಾಯಿತು ಎನ್ನುತ್ತಾರೆ. 

ಚಿತ್ರದ ಪಾತ್ರಧಾರಿ ರವಿ ಬೋಪಣ್ಣ ಒಬ್ಬ ಮಾಂತ್ರಿಕ, ಸಂಗೀತ, ಪವಾಡ ರೀತಿಯಲ್ಲಿ ಮನರಂಜನೆ ನೀಡುವ ವ್ಯಕ್ತಿಯಾಗಿರುತ್ತಾರೆ. ನಾನು ಇದನ್ನು ಪ್ರೇಮಲೋಕದ ಪ್ರಬುದ್ಧ ಆವೃತ್ತಿ ಎಂದು ಕರೆಯುತ್ತೇನೆ ಎನ್ನುತ್ತಾರೆ ರವಿಚಂದ್ರನ್. ಈ ಚಿತ್ರ ಈಶ್ವರಿ ಪ್ರೊಡಕ್ಷನ್‌ನ 50 ನೇ ನಿರ್ಮಾಣವಾಗಿದೆ.

ಚಿತ್ರದ ನಿರೂಪಣಾ ಮಾದರಿಯು ರವಿ ಬೋಪಣ್ಣ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. “ಸಾಕಷ್ಟು ಅಚ್ಚರಿಯ ಅಂಶಗಳನ್ನು ಹೊಂದಿರುವ ಈ ಚಿತ್ರಕ್ಕೆ ತಡೆರಹಿತ ಸಂಗೀತವೂ ಇರಲಿದೆ. ಇದು ನನ್ನ ನಿರ್ದೇಶನದ ಚೊಚ್ಚಲ ಚಿತ್ರ ಪ್ರೇಮಲೋಕವನ್ನು ಹೆಚ್ಚು ಕಡಿಮೆ ನಿಮಗೆ ನೆನಪಿಸುತ್ತದೆ. ರವಿ ಬೋಪಣ್ಣ ಕೂಡ ಸಿನಿಮಾದಲ್ಲಿ ಒಂದಷ್ಟು ಸಿಂಪಲ್ ಫಿಲಾಸಫಿಗಳನ್ನು ಹೊಂದಿದ್ದು, ಜನರನ್ನೂ ಯೋಚಿಸುವಂತೆ ಮಾಡುತ್ತದೆ. ಪ್ರೇಕ್ಷಕರು ತಮ್ಮ ಹೃದಯ ತೆರೆದು ನೋಡಿದರೆ ಖಂಡಿತವಾಗಿಯೂ ಈ ಚಿತ್ರವನ್ನು ಹೊಸ ರೂಪದಲ್ಲಿ ಆನಂದಿಸುತ್ತಾರೆ ಎಂದರು.

ಜುಲೈಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿರುವ ರವಿಚಂದ್ರನ್, ಚಿತ್ರದ ಬಿಡುಗಡೆಯ ಸಮಯ ಮುಖ್ಯವಾಗಿದೆ. ಹಾಗಾಗಿ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೇನೆ. ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದ್ದು, ಜುಲೈನಲ್ಲಿ ಬರುವ ಭರವಸೆ ಇದೆ ಎನ್ನುತ್ತಾರೆ.


Stay up to date on all the latest ಸಿನಿಮಾ ಸುದ್ದಿ news
Poll
BS yediyurappa

ಬಿಜೆಪಿ ಸಂಸದೀಯ ಮಂಡಳಿಗೆ ಬಿ.ಎಸ್. ಯಡಿಯೂರಪ್ಪ ಸೇರ್ಪಡೆಯಿಂದ 2023 ರ ಕರ್ನಾಟಕ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp