ಅಡೆತಡೆಗಳನ್ನು ತೆಗೆದುಹಾಕಬೇಕು: ಬೆಂಗಳೂರು ಮೂಲದ ರಂಗಕರ್ಮಿ ಶರಣ್ಯ ರಾಮ್‌ಪ್ರಕಾಶ್!

ಬೆಂಗಳೂರಿನ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ರಂಗಶಂಕರ ನೀಡುವ ವಾರ್ಷಿಕ ಶಂಕರ್ ನಾಗ್ ಪ್ರಶಸ್ತಿಗೆ ಶರಣ್ಯ ರಾಮಪ್ರಕಾಶ್ ಭಾಜನರಾಗಿದ್ದಾರೆ. ಇಂದು ರಂಗಶಂಕರ ನಾಟಕೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಪುದುಚೇರಿಮೂಲದ ರಂಗಭೂಮಿ ಕಲಾವಿದೆ ನಿಮ್ಮಿ ರಾಫೆಲ್ ಅವರೊಂದಿಗೆ ಶರಣ್ಯಾ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಶರಣ್ಯ ರಾಮ್ ಪ್ರಕಾಶ್
ಶರಣ್ಯ ರಾಮ್ ಪ್ರಕಾಶ್

ಬೆಂಗಳೂರು: ಬೆಂಗಳೂರಿನ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ರಂಗಶಂಕರ ನೀಡುವ ವಾರ್ಷಿಕ ಶಂಕರ್ ನಾಗ್ ಪ್ರಶಸ್ತಿಗೆ ಶರಣ್ಯ ರಾಮಪ್ರಕಾಶ್ ಭಾಜನರಾಗಿದ್ದಾರೆ. ಇಂದು ರಂಗಶಂಕರ ನಾಟಕೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಪುದುಚೇರಿಮೂಲದ ರಂಗಭೂಮಿ ಕಲಾವಿದೆ ನಿಮ್ಮಿ ರಾಫೆಲ್ ಅವರೊಂದಿಗೆ ಶರಣ್ಯಾ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

 ಕಳೆದ ಏಳೆಂಟು ವರ್ಷಗಳಲ್ಲಿ ಕನ್ನಡದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ ಹೀಗಾಗಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಶಂಕರ್ ನಾಗ್ ಪ್ರಶಸ್ತಿ ಸ್ವೀಕರಿಸುತ್ತೇನೆ. ನಾನು ಚಿಕ್ಕವಳು ಇದ್ದಾಗಿನಿಂದಲೂ ಶಂಕರ್ ನಾಗರ್ ಕನ್ನಡ ಸಂಸ್ಕೃತಿಯ ಐಕಾನ್ ಆಗಿದ್ದಾರೆ. ಮುಖ್ಯವಾಹಿನಿ ಮತ್ತು ಪರ್ಯಾಯ ಸಿನಿಮಾಗಳ ನಡುವಿನ ವ್ಯತ್ಯಾಸವನ್ನು ಅವರು ಚೆನ್ನಾಗಿ ಅರಿತಿದ್ದರು. ಅವರು ಕನ್ನಡದಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಹಿಂದಿಯಲ್ಲಿ ಮಾಲ್ಗುಡಿ ಡೇಸ್ ಮಾಡಿದ್ದು, ಗಿರೀಶ್ ಕಾರ್ನಾಡ್ ಅವರಂತಹ ದೊಡ್ಡ ಸಾಹಿತಿ ಅವರೊಂದಿಗೂ ಕೆಲಸ ಮಾಡಿದ್ದಾರೆ. ಆದರೆ, ಮಾಸ್ ಜನರಿಗಾಗಿ ಆಟೋ ರಾಜದಂತಹ ಸಿನಿಮಾ ಕೂಡಾ ಮಾಡಿದ್ದಾರೆ. ಅವರು ಎರಡನ್ನೂ ಬೇರೆ ಬೇರೆಯಾಗಿ ನೋಡಿಲ್ಲ. ಬದಲಿಗೆ ಒಂದೇ ಕಲಾ ಪ್ರಕಾರವಾಗಿ ನೋಡಿದ್ದಾರೆ.  ನಮ್ಮ ಪರವಾಗಿರಿರುವ ಅವರ ನಿಲುವನ್ನು ನಾವು ನೆನಪಿಟ್ಟುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ನಗರ ಮೂಲದ ರಂಗಕರ್ಮಿ ತಿಳಿಸಿದರು.

2008ರಲ್ಲಿ ರಂಗ ಕಲಾವಿದೆಯಾಗಿ ಪಯಾಣ ಆರಂಭಿಸಿದ ಶರಣ್ಯ, ಇತ್ತೀಚಿನ ವರ್ಷಗಳಲ್ಲಿ ನಗರ ಮತ್ತು ಲಿಂಗ ಸಮಸ್ಯೆಗಳನ್ನು ನಿಭಾಯಿಸುವ ಜೊತೆಗೆ ಕನ್ನಡ ರಂಗಭೂಮಿಯಲ್ಲಿ 'ಮಹಿಳೆಯರ ಅದೃಶ್ಯ' ಕುರಿತು ಅನ್ವೇಷಿಸುವ ಕೆಲಸ ಮಾಡಿದ್ದಾರೆ.  ಅವರ ಪ್ರಶಸ್ತಿ ವಿಜೇತ ನಾಟಕ ಅಕ್ಷಯಾಂಬರದಲ್ಲಿ - ಇದರ ವ್ಯಾಪಕವಾದ ಸಂಶೋಧನೆ ಮತ್ತು ಅವರ ಸ್ವಂತ ಅನುಭವಗಳನ್ನು ಹೇಳಿಕೊಂಡಿದ್ದಾರೆ.  ಪುರುಷ ಪ್ರಾಬಲ್ಯದ ಯಕ್ಷಗಾನದಲ್ಲೂ ಅವರು ಮಹಿಳಾ ಪ್ರಾತಿನಿಧಿತ್ವ ಕುರಿತು ಬೆಳಕು ಚೆಲ್ಲಿದ್ದಾರೆ. 

ಕನ್ನಡ ರಂಗಭೂಮಿಯಲ್ಲಿ ನಾಟಕ ಬರೆಯಲು ಶುರು ಮಾಡಿದಾಗ ಕೆಲವೇ ಕೆಲವ ಮಹಿಳಾ ಕಲಾವಿದರು, ನಿರ್ದೇಶಕರಿದ್ದರು. ಇದೀಗ ಮಹಿಳೆಯರು ಈ ಕ್ಷೇತ್ರಕ್ಕೆ  ಬರುತ್ತಿದ್ದು, ತಮ್ಮ ಸ್ವಂತಿಕೆಯನ್ನು ಪ್ರದರ್ಶಿಸುತ್ತಿದ್ದಾರೆ.  ರಂಗಭೂಮಿಯಲ್ಲಿ ನಮ್ಮದೇ ಸ್ವಂತ ಭವಿಷ್ಯ ಮತ್ತು ಸ್ವಂತ ಭಾಷೆಯನ್ನು ಗುರುತಿಸುತ್ತಿದ್ದೇವೆ ಎಂದು ಅವರು ವಿವರಿಸಿದರು. ನಾಟಕವನ್ನು ನಿರ್ದೇಶಿಸುವಾಗಲೂ ಅಭಿನಯದ ಅನುಭವದ ಮಾಹಿತಿಯನ್ನು ಪಡೆಯುತ್ತೇನೆ. ಹಾಗಾಗೀ ಈ ಪಾತ್ರಗಳು ಪರಸ್ಪರ ಬೇರೆ ಬೇರೆ ಅನ್ನಿಸಲ್ಲ ಎಂದರು. 

15 ವರ್ಷಗಳ ಅಭಿನಯದ ಅನುಭವದಲ್ಲಿ ಬೆಂಗಳೂರು ಹಾಗೂ ರಾಜ್ಯದ ರಂಗಭೂಮಿ ಸ್ವರೂಪ ತಿಳಿದಿದ್ದಾರೆ. ಆದರೆ, ಕೋವಿಡ್-19 ಪರಿಣಾಮಕಾರಿ ಪಾತ್ರ ಬೀರಿದೆ. ಈ ಹಿಂದೆ ರಂಗಭೂಮಿ ನಗರಕ್ಕೆ ಸಿಮೀತವಾಗಿತ್ತು, ಹೆಚ್ಚಾಗಿ ಇಂಗ್ಲೀಷ್ ಭಾಷೆಯಲ್ಲಿತ್ತು. ಇದು ಕೆಟ್ಟದಲ್ಲ ಆದರೆ, ಪ್ರಸ್ತುತಕ್ಕಿಂತ ಅದು ಅತ್ಯಂತ ಭಿನ್ನವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ  ಹೆಚ್ಚಿನ ಕನ್ನಡ ನಾಟಕಗಳು ಪ್ರದರ್ಶನವಾಗುತ್ತಿವೆ. ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com