ಲವ್ ಸ್ಟೋರಿಗಳನ್ನು ಒಳಗೊಂಡಿರುವ ಚಿತ್ರದ ಭಾಗವಾಗಲು ನನಗೆ ಇಷ್ಟ: ನಿಶ್ವಿಕಾ ನಾಯ್ಡು

ಡಾರ್ಲಿಂಗ್ ಕೃಷ್ಣ, ಮೇಘಾ ಶೆಟ್ಟಿ ಅಭಿನಯದ ದಿಲ್ ಪಸಂದ್ ಸಿನಿಮಾದಲ್ಲಿ ನಟಿ ನಿಶ್ವಿಕಾ ನಾಯ್ಡು ಕೂಡ ಅಭಿನಯಿಸಿದ್ದು, ಐಶ್ವರ್ಯಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತನ್ನ ನಟನೆಗೆ ಪ್ರೇಕ್ಷಕರಿಂದ ಲಭ್ಯವಾಗುವ ಪ್ರತಿಕ್ರಿಯೆಗೆ ಅವರು ಕಾಯುತ್ತಿದ್ದಾರೆ.
ನಿಶ್ವಿಕಾ ನಾಯ್ಡು
ನಿಶ್ವಿಕಾ ನಾಯ್ಡು

ಡಾರ್ಲಿಂಗ್ ಕೃಷ್ಣ, ಮೇಘಾ ಶೆಟ್ಟಿ ಅಭಿನಯದ ದಿಲ್ ಪಸಂದ್ ಸಿನಿಮಾದಲ್ಲಿ ನಟಿ ನಿಶ್ವಿಕಾ ನಾಯ್ಡು ಕೂಡ ಅಭಿನಯಿಸಿದ್ದು, ಐಶ್ವರ್ಯಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಶಿವ ತೇಜಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ನಟಿಸುತ್ತಿರುವ ನಟಿ, 'ದಿಲ್ ಪಸಂದ್‌ನಲ್ಲಿನ ಈ ಪಾತ್ರವು ತುಂಬಾ ಬೋಲ್ಡಡ್ ಮತ್ತು ನನ್ನ ನಿಜ ಜೀವನದ ವ್ಯಕ್ತಿತ್ವ್ಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ' ಎನ್ನುತ್ತಾರೆ.

ಶರಣ್ ಅಭಿನಯದ ಗುರು ಶಿಷ್ಯರು ಚಿತ್ರದಲ್ಲಿ ಸೂಜಿ ಪಾತ್ರಕ್ಕಿಂತ ಸಂಪೂರ್ಣ ಭಿನ್ನವಾದ ಈ ಪಾತ್ರವನ್ನು ತಾನು ಎಂಜಾಯ್ ಮಾಡಿದೆ ಎನ್ನುತ್ತಾರೆ ನಿಶ್ವಿಕಾ. 'ಇಲ್ಲಿಯವರೆಗಿನ ನನ್ನ ಎಲ್ಲಾ ಚಿತ್ರಗಳು ನನ್ನನ್ನು ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿವೆ ಮತ್ತು ನಾನು ಮೊದಲ ಬಾರಿಗೆ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಬಗ್ಗೆ ಜನರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲು ಕುತೂಹಲವಿದೆ. ಇದಲ್ಲದೆ, ನಾನು ಪ್ರೇಮಕಥೆಗಳ ಭಾಗವಾಗಲು ಇಷ್ಟಪಡುತ್ತೇನೆ. ಏಕೆಂದರೆ, ಅಂತಹ ಸ್ಕ್ರಿಪ್ಟ್‌ಗಳು ಹೆಚ್ಚಿನ ಸ್ಕ್ರೀನ್ ಶೇರಿಂಗ್ ಅವಕಾಶ, ನಿರ್ವಹಿಸಲು ಸ್ಕೋಪ್ ಮತ್ತು ಪಾತ್ರದೆಡೆಗೆ ಹೆಚ್ಚಿನ ಗಮನವನ್ನು ನೀಡುತ್ತವೆ' ಎಂದು ಹೇಳುತ್ತಾರೆ.

ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಪಾತ್ರಗಳು ಯಾವಾಗಲೂ ನಮ್ಮ ವ್ಯಕ್ತಿತ್ವಕ್ಕೆ ಸ್ಫೂರ್ತಿ ನೀಡುತ್ತವೆ ಎಂದು ನಂಬುವ ನಿಶ್ವಿಕಾ, ಚಿತ್ರದಲ್ಲಿ ಕಂಡುಬರುವ ಐಶ್ವರ್ಯಾ ಅವರಂತಹ ಜನರು ನಮ್ಮ ಸಮಾಜದಲ್ಲಿದ್ದಾರೆ. ಐಶ್ವರ್ಯಾ ಈ ರೀತಿಯಲ್ಲಿ ವರ್ತಿಸಲು ಒಂದು ಕಾರಣವಿದೆ ಮತ್ತು ಅದು ಆಕೆಯ ದೌರ್ಬಲ್ಯವನ್ನು ತೋರಿಸಲು ಬಯಸುವುದಿಲ್ಲ. ಉದ್ಧಟತನದಿಂದ ಮತ್ತು ದುರಹಂಕಾರದಿಂದ ವರ್ತಿಸುವ ಮೂಲಕ ಆಕೆ ತನ್ನ ಭಾವನೆಗಳನ್ನು ಮುಚ್ಚಿಕೊಳ್ಳುತ್ತಾಳೆ. ನಮ್ಮಲ್ಲಿ ಹೆಚ್ಚಿನವರು ಹೀಗೆಯೇ ಅಲ್ಲವೇ? ನಮ್ಮ ದೌರ್ಬಲ್ಯವು ಒಂದು ಮನೋಭಾವದಿಂದ ಮುಚ್ಚಲ್ಪಟ್ಟಿರುತ್ತದೆ ಮತ್ತು ಇತರರು ಅವರನ್ನು ವಿಭಿನ್ನ ದೃಷ್ಟಿಕೋನಗಳಲ್ಲಿ ನೋಡುತ್ತಾರೆ' ಎಂದು ಹೇಳುತ್ತಾರೆ.

ನಿರ್ದೇಶಕರೊಂದಿಗೆ ಚರ್ಚಿಸುವ ಮೂಲಕ ನನ್ನ ಪಾತ್ರವನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ ಮತ್ತು ನಟಿಸುತ್ತೇನೆ. ಇತರರನ್ನು ಅನುಸರಿಸಿ ಅಲ್ಲ. ದಿಲ್ ಪಸಂದ್ ಸಿನಿಮಾದಲ್ಲಿ ನಟಿಸುತ್ತಿರುವುದು ಸಂದ್‌ನಲ್ಲಿ ನಟಿಸುವುದು ಬರಿ ಪಾತ್ರವಷ್ಟೇ, 'ಈ ಚಿತ್ರದಲ್ಲಿ ನಾನು ನಿರೂಪಿಸುತ್ತಿರುವ ಪಾತ್ರವು ಯಾರ ಭಾವನೆಗಳನ್ನು ನೋಯಿಸುವುದಿಲ್ಲ ಮತ್ತು ತಪ್ಪೆಸಗುವುದಿಲ್ಲ ಎಂದು ನಾನು ಉತ್ಸುಕಳಾಗಿದ್ದೆ ಎನ್ನುತ್ತಾರೆ ನಿಶ್ವಿಕಾ.

ಈ ಚಿತ್ರದಲ್ಲಿ ಇಂತಹ ಪಾತ್ರದಲ್ಲಿ ನಟಿಸುತ್ತಿರುವುದು ನನಗೆ ಹೊಸ ಅನುಭವ. ಅದೃಷ್ಟವಶಾತ್, ತಂಡವು ನನ್ನನ್ನು ಪರಿಗಣಿಸಿದೆ. ಪಾತ್ರವನ್ನು ನನಗೆ ಸ್ಪಷ್ಟವಾಗಿ ವಿವರಿಸಲಾಗಿದೆ ಮತ್ತು ಅವರು ಕೆಲವೊಮ್ಮೆ ನನ್ನ ಅಭಿಪ್ರಾಯಗಳನ್ನು ಕೇಳಲು ಮುಕ್ತರಾಗಿದ್ದರು. ಅದು ನನಗೆ ಕಂಫರ್ಟ್ ಎನಿಸಿತು ಎನ್ನುವ ನಿಶ್ವಿಕಾ, ನವೆಂಬರ್ 11 ರಂದು ದಿಲ್ ಪಸಂದ್ ಬಿಡುಗಡೆಗೆ ಕಾಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com