
ಚಿತ್ರದ ಸ್ಟಿಲ್
ಟಾಲಿವುಡ್ ನಟರಾದ ಜೂನಿಯರ್ ಜೂ.ಎನ್‌ಟಿಆರ್, ರಾಮ್ ಚರಣ್ ಅಭಿನಯದ ಮತ್ತು ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಬ್ಲಾಕ್ ಬಸ್ಟರ್ ಆಗಿತ್ತು.
RRRನ ದೊಡ್ಡ ಯಶಸ್ಸಿನ ನಂತರ ಆರ್‌ಆರ್‌ಆರ್ ಸೀಕ್ವೆಲ್ ಮಾಡುತ್ತಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಈ ಸಂಬಂಧ ಪ್ರತಿಕ್ರಿಯಿಸಿರುವ ಎಸ್ಎಸ್ ರಾಜಮೌಳಿ ಅಂತಿಮವಾಗಿ ಆರ್‌ಆರ್‌ಆರ್ ಸೀಕ್ವೆಲ್ ಅನ್ನು ಖಚಿತಪಡಿಸಿದ್ದಾರೆ.
ಚಿಕಾಗೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಎಸ್‌ಎಸ್ ರಾಜಮೌಳಿ ಆರ್‌ಆರ್‌ಆರ್ ಸೀಕ್ವೆಲ್ ಕುರಿತು ಖಚಿತಪಡಿಸಿದ್ದಾರೆ. ನನ್ನ ಎಲ್ಲಾ ಚಿತ್ರಗಳ ಕಥೆಗಾರ ನನ್ನ ತಂದೆ ವಿಜಯೇಂದ್ರ ಪ್ರಸಾದ್. ನಾವು 'RRR 2' ಬಗ್ಗೆ ಸ್ವಲ್ಪ ಚರ್ಚಿಸಿದ್ದೇವೆ. ತಂದೆ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಭಾರತವಲ್ಲದೆ ಜಪಾನ್‌ನ ಬಾಕ್ಸ್ ಆಫೀಸ್‌ನಲ್ಲಿಯೂ ಚಿತ್ರವು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.