ಪುನೀತ್ ರಾಜ್‌ಕುಮಾರ್‌ರನ್ನು ಕಿರುತೆರೆಗೆ ಕರೆತಂದಿದ್ದ ಅನುಪ್ ಚಂದ್ರಶೇಖರನ್ ಈಗ ಸಿನಿಮಾ, ವೆಬ್ ಸೀರಿಸ್‌ನತ್ತ
ಟಿವಿ ಮನರಂಜನೆಯಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಹಾಗೂ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರನ್ನು ಕಿರುತೆರೆಗೆ ಕರೆತಂದ ಅನುಪ್ ಚಂದ್ರಶೇಖರನ್ ಇದೀಗ ಸಿನಿಮಾ ರಂಗದತ್ತ ಮುಖಮಾಡಿದ್ದಾರೆ.
Published: 15th November 2022 11:24 AM | Last Updated: 15th November 2022 11:24 AM | A+A A-

ಅನುಪ್ ಚಂದ್ರಶೇಖರನ್
ಟಿವಿ ಮನರಂಜನೆಯಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಹಾಗೂ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರನ್ನು ಕಿರುತೆರೆಗೆ ಕರೆತಂದ ಅನುಪ್ ಚಂದ್ರಶೇಖರನ್ ಇದೀಗ ಸಿನಿಮಾ ರಂಗದತ್ತ ಮುಖಮಾಡಿದ್ದಾರೆ.
ಹೌದು, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫುನಂತಹ ಜನಪ್ರಿಯ ರಿಯಾಲಿಟಿ ಶೋಗಳನ್ನು ಪರಿಚಯಿಸಿದ ಅನುಪ್ ಚಂದ್ರಶೇಖರನ್, In10Media ಮೂಲಕ ವೆಬ್ ಸೀರಿಸ್ ಮತ್ತು ಸಿನಿಮಾಗಳನ್ನು ಮಾಡುವ ಯೋಜನೆ ಹೊಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಅನುಪ್, 'ಅವರು ಎರಡು ತಮಿಳು ಚಲನಚಿತ್ರಗಳಲ್ಲಿ ತೊಡಗಿಕೊಂಡಿದ್ದು, ಅವು ಆರಂಭಿಕ ಹಂತಗಳಲ್ಲಿವೆ. ಈಗ ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಕೊಡುಗೆಗಳ ಮಹಾಪೂರವನ್ನು ಹೊಂದಿದೆ ಎನ್ನುವ ಅವರು, ಕನ್ನಡ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಒಂದು ಸಿನಿಮಾವು ಕೊನೆಯ ಹಂತದಲ್ಲಿದೆ. ಈ ಸಿನಿಮಾಗಾಗಿ ನಾವು ಉದ್ಯಮದಲ್ಲಿ ಹೆಸರಾಂತ ನಟರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಮತ್ತು ನಾವು ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರ ಅಧಿಕೃತ ಘೋಷಣೆ ಮಾಡಲಾಗುವುದು' ಎಂದು ಅವರು ಹೇಳುತ್ತಾರೆ.