ಥಾಯ್ಲೆಂಡ್​ನಲ್ಲಿ 777ಚಾರ್ಲಿ ಕ್ರೇಜ್! ಡಿಸೆಂಬರ್ 1 ಕ್ಕೆ ರಿಲೀಸ್ 

ರಕ್ಷಿತ್​ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ ‘777 ಚಾರ್ಲಿ’ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ಥಾಯ್​ ಭಾಷೆಗೆ ಡಬ್​ ಆಗಿದ್ದು, ಡಿ. 1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
777 ಚಾರ್ಲಿ ಸಿನಿಮಾ ಸ್ಟಿಲ್
777 ಚಾರ್ಲಿ ಸಿನಿಮಾ ಸ್ಟಿಲ್

ಬೆಂಗಳೂರು: ರಕ್ಷಿತ್​ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ ‘777 ಚಾರ್ಲಿ’ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ಥಾಯ್​ ಭಾಷೆಗೆ ಡಬ್​ ಆಗಿದ್ದು, ಡಿ. 1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮೂಲಕ ಕನ್ನಡ ಚಿತ್ರವೊಂದು ಥಾಯ್​ ಭಾಷೆಗೆ ಡಬ್​ ಆದ ಹೆಗ್ಗಳಿಕೆ ‘777 ಚಾರ್ಲಿ’ ಚಿತ್ರಕ್ಕೆ ಸಿಕ್ಕಿದೆ.

777 ಚಾರ್ಲಿ’ ಚಿತ್ರವು ಜೂನ್​ 10ರಂದು ಭಾರತದಾದ್ಯಂತ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.
ಈ ಸಂಬಂಧ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಿರ್ದೇಶಕ ಕಿರಣ್ ರಾಜ್ , ಥಾಯ್ಲೆಂಡ್‌ನಲ್ಲಿ ಬಿಡುಗಡೆಯಾದ ಆಯ್ದ ಚಿತ್ರಗಳ ಪಟ್ಟಿಗೆ 777 ಚಾರ್ಲಿ ಸೇರಿದೆ ಎಂದು ತಿಳಿದು ಸಂತೋಷವಾಗಿದೆ "ಥೈಲ್ಯಾಂಡ್ ಜನರು ಭಾವನಾತ್ಮಕ ನಾಟಕಗಳನ್ನು ಇಷ್ಟಪಡುತ್ತಾರೆ, ಸಾಕಷ್ಟು ಪ್ರಾಣಿ ಪ್ರೇಮಿಗಳು ಇರುವುದರಿಂದ, ನನ್ನ ಚಿತ್ರವು ಇದರಲ್ಲಿ ಸೇರಿದೆ ಎಂದು ಕಿರಣರಾಜ್ ಹೇಳುತ್ತಾರೆ, 777 ಚಾರ್ಲಿ ಜಪಾನ್ ಮತ್ತು ಚೀನಾದಲ್ಲಿ ಕೂಡ ಬಿಡುಗಡೆಯಾಗಬಹುದು ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಇತ್ತೀಚೆಗೆ, ಜಪಾನ್‌ನಲ್ಲಿ RRR ರಿಲೀಸ್ ಆಗಿತ್ತು. ನಾವು ಬಹುತೇಕ ಬಿಡುಗಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ರಿಲೀಸ್ ದಿನಾಂಕದ ಬಗ್ಗೆ ದೃಢೀಕರಣಕ್ಕಾಗಿ ಕಾಯುತ್ತಿದ್ದೇವೆ. ಇದರ ಹೊರತಾಗಿ, ರಷ್ಯಾದ ವಿತರಕರೊಂದಿಗೆ ಚರ್ಚೆಗಳು ನಡೆಯುತ್ತಿವೆ, ಅವರು ತಮ್ಮ ದೇಶದಲ್ಲಿ 777 ಚಾರ್ಲಿಯನ್ನು ಬಿಡುಗಡೆ ಮಾಡಲು ವಿಚಾರಿಸಿದ್ದಾರೆ.

ಯುಕೆ ಥಿಯೇಟರ್‌ಗಳಿಂದ ಚಿತ್ರವನ್ನು ಇಂಗ್ಲಿಷ್‌ನಲ್ಲಿ ಬಿಡುಗಡೆ ಮಾಡುವ ಪ್ರಸ್ತಾಪವಿದೆ. ಅಲ್ಲದೆ, ಚೀನಾದಲ್ಲಿ ಬಿಡುಗಡೆಯ ಯೋಜನೆಗಳು ಚರ್ಚೆಯ ಆರಂಭಿಕ ಸುತ್ತಿನಲ್ಲಿವೆ ಎಂದಿದ್ದಾರೆ. ಕಿರಣರಾಜ್ ಕೆ ಬರೆದು ನಿರ್ದೇಶಿಸಿದ ಹಾಸ್ಯ-ನಾಟಕ ಸಾಹಸದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್ ಮತ್ತು ಬಾಬಿ ಸಿಂಹ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com