ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣದ ಬಗ್ಗೆ ಗಮನ ಸೆಳೆದ ಕನ್ನಡ ಸಿನಿಮಾ 'ನಾನು ಕುಸುಮ'

ಕಠಿಣ ಕಾನೂನುಗಳ ಹೊರತಾಗಿಯೂ ಮಹಿಳೆಯರು ಹೇಗೆ ತಾರತಮ್ಯಕ್ಕೆ ಒಳಗಾಗುತ್ತಾರೆ ಎಂಬ ವಾಸ್ತವವನ್ನು ತೋರಿಸುವ ಕನ್ನಡ ಸಿನಿಮಾ 'ನಾನು ಕುಸುಮ' ವನ್ನು ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.
ನಾನು ಕುಸುಮಾ ಚಿತ್ರದ ಪೋಸ್ಟರ್
ನಾನು ಕುಸುಮಾ ಚಿತ್ರದ ಪೋಸ್ಟರ್

ಪಣಜಿ: ಕಠಿಣ ಕಾನೂನುಗಳ ಹೊರತಾಗಿಯೂ ಮಹಿಳೆಯರು ಹೇಗೆ ತಾರತಮ್ಯಕ್ಕೆ ಒಳಗಾಗುತ್ತಾರೆ ಎಂಬ ವಾಸ್ತವವನ್ನು ತೋರಿಸುವ ಕನ್ನಡ ಸಿನಿಮಾ 'ನಾನು ಕುಸುಮ' ವನ್ನು ಇಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.

ಮಂಗಳವಾರ ‘ಟೇಬಲ್ ಟಾಕ್’ ಕಾರ್ಯಕ್ರಮದ ವೇಳೆ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ನಿರ್ದೇಶಕ ಕೃಷ್ಣೇಗೌಡ, ‘ಕಠಿಣ ಕಾನೂನುಗಳಿದ್ದರೂ ಮಹಿಳೆಯರಿಗೆ ಅನ್ಯಾಯವಾಗುತ್ತಿರುವ ನಮ್ಮ ಪುರುಷಪ್ರಧಾನ ಸಮಾಜದ ವಾಸ್ತವಕ್ಕೆ ‘ನಾನು ಕುಸುಮ’ ಸಿನಿಮಾ ಕನ್ನಡಿ ಹಿಡಿಯುತ್ತದೆ ಎಂದರು.

ಈ ಚಲನಚಿತ್ರವು ಕನ್ನಡದ ಲೇಖಕ ಡಾ. ಬೆಸಗರಹಳ್ಳಿ ರಾಮಣ್ಣ ಅವರು ಬರೆದ ಸಣ್ಣ ಕಥೆಯನ್ನು ಆಧರಿಸಿದೆ. ಅವರು ನಿಜ ಜೀವನದ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಪುಸ್ತಕವನ್ನು ಬರೆದಿದ್ದಾರೆ. 'ಮಹಿಳಾ ಸಬಲೀಕರಣ ಮತ್ತು ಮಹಿಳಾ ಸುರಕ್ಷತೆ ಈ ಚಿತ್ರದ ತಿರುಳಾಗಿದೆ. ಸಮಾಜಕ್ಕೆ ಸಂದೇಶವನ್ನು ರವಾನಿಸುವ ವಿಷಯಗಳ ಮೇಲೆ ಚಲನಚಿತ್ರಗಳನ್ನು ನಿರ್ಮಿಸುವುದು ನನ್ನ ಒಲವು' ಎಂದು ಕೃಷ್ಣೇಗೌಡ ಹೇಳಿದ್ದಾರೆ.

'ನಾನು ಕುಸುಮ' ಸಿನಿಮಾವು ತನ್ನ ಮಗಳ ಬಗ್ಗೆ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಪ್ರೀತಿಯ ಮತ್ತು ಕಾಳಜಿಯುಳ್ಳಂತ ತಂದೆಯೊಬ್ಬರ ಮಗಳು ಕುಸುಮಾಳ ಕಥೆಯಾಗಿದೆ. ಆದರೆ, ಅವರ ಬದುಕಲ್ಲಿ ವಿಧಿಯು ಬೇರೆಯದ್ದೇ ಯೋಜನೆಗಳನ್ನು ಹೊಂದಿರುತ್ತದೆ ಮತ್ತು ಆಕೆಯ ತಂದೆ ಅಪಘಾತದಲ್ಲಿ ನಿಧನರಾದರು. ಆಕೆಯ ಜೀವನ ಗೊಂದಲದಲ್ಲಿ ಮುಳುಗುತ್ತದೆ.  ವೈದ್ಯೆಯಾಗಬೇಕೆಂಬ ಹಂಬಲ ಹೊಂದಿದ್ದ ಕುಸುಮಾ ಆರ್ಥಿಕ ಮುಗ್ಗಟ್ಟಿನಿಂದ ವೈದ್ಯಕೀಯ ಶಿಕ್ಷಣವನ್ನು ತ್ಯಜಿಸುತ್ತಾಳೆ. ತನ್ನ ತಂದೆಯ ಸರ್ಕಾರಿ ಕೆಲಸವನ್ನು ಪರಿಹಾರದ ಆಧಾರದ ಮೇಲೆ ಪಡೆಯುತ್ತಾಳೆ. ಆದರೆ, ಕುಸುಮಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ಜೀವನ ನಾಟಕೀಯ ತಿರುವು ಪಡೆಯುತ್ತದೆ.

ಕುಸುಮಾಳನ್ನು ಚಿತ್ರಿಸುವುದು ಎಷ್ಟೊಂದು ಕಷ್ಟದ ಕೆಲಸ ಎಂದು ಹೇಳಿದ ನಟಿ ಗ್ರೀಷ್ಮಾ ಶ್ರೀಧರ್, ನಿರಂತರವಾಗಿ ನಡೆಯುತ್ತಿರುವ ಈ ಪ್ರಕ್ರಿಯೆಯಿಂದ ಮನಸ್ಸು ಗೊಂದಲದ ಮತ್ತು ದಣಿದಿತ್ತು. ಇದು ನಿರಂತರವಾಗಿ ಮೂಲೆಗಳಿಗೆ ತಳ್ಳಲ್ಪಡುವ ಮತ್ತು ಯಾವುದೇ ತಪ್ಪು ಮಾಡದೆ ಸಮಸ್ಯೆಗಳಿಂದ ಸುತ್ತುವರೆದಿರುವ ಮಹಿಳೆಯರ ಕಥೆ' ಎಂದು ಹೇಳಿದರು.

ಭಾರತೀಯ ಪನೋರಮಾ ಫೀಚರ್ ಫಿಲ್ಮ್ಸ್ ವಿಭಾಗದ ಅಡಿಯಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com