ಸಂಚಾರ ನಿಯಮ ಉಲ್ಲಂಘನೆ: ವೈರಲ್ ವಿಡಿಯೋ ನೋಡಿ ತಮಿಳು ನಟ ವಿಜಯ್‌ಗೆ ದಂಡ ವಿಧಿಸಿದ ಪೊಲೀಸರು
ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ತಮಿಳು ನಟ ವಿಜಯ್‌ಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ತನ್ನ ಕಾರಿನ ಮೇಲೆ ಕಪ್ಪು ಟಿಂಟೆಡ್ ಗ್ಲಾಸ್ ಅನ್ನು ಹೊಂದಿದ್ದಕ್ಕಾಗಿ ನಟನಿಗೆ 500 ರೂಪಾಯಿ ದಂಡ ವಿಧಿಸಲಾಗಿದೆ.
Published: 24th November 2022 05:13 PM | Last Updated: 24th November 2022 05:13 PM | A+A A-

ನಟ ವಿಜಯ್
ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ತಮಿಳು ನಟ ವಿಜಯ್‌ಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ತನ್ನ ಕಾರಿನ ಮೇಲೆ ಕಪ್ಪು ಟಿಂಟೆಡ್ ಗ್ಲಾಸ್ ಅನ್ನು ಹೊಂದಿದ್ದಕ್ಕಾಗಿ ನಟನಿಗೆ 500 ರೂಪಾಯಿ ದಂಡ ವಿಧಿಸಲಾಗಿದೆ.
ಇತ್ತೀಚೆಗೆ ಪನೈಯೂರಿನಲ್ಲಿ ನಡೆದ ಅಭಿಮಾನಿಗಳ ಸಭೆಯ ನಂತರ ನಟ ತನ್ನ ಕಾರಿಗೆ ಹತ್ತುತ್ತಿರುವ ವಿಡಿಯೋ ವೈರಲ್ ಆದ ನಂತರ ನಟ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಪೊಲೀಸರ ಗಮನ ಸೆಳೆಯಿತು. ಇದಕ್ಕಾಗಿ ಪೊಲೀಸರು ನಟ ವಿಜಯ್ ಅವರಿಗೆ ದಂಡ ವಿಧಿಸಿದ್ದಾರೆ.
ಇದಕ್ಕೂ ಮುನ್ನ ವಿಜಯ್, ತನ್ನ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಆಮದಿನ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಕಾನೂನು ಹೋರಾಟ ಮಾಡಿದ್ದನ್ನು ಗಮನಿಸಬಹುದು.
ಸದ್ಯ ವಿಜಯ್, ತಮ್ಮ ನಟನೆಯ ವಾರಿಸು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದು, ಈ ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸಿದ್ದಾರೆ. ಅವರು ಹರಿ ಮತ್ತು ಆಶಿಶೋರ್ ಸೊಲೊಮನ್ ಜೊತೆಗೆ ಚಿತ್ರಕ್ಕೆ ಕಥೆ ಬರೆದಿದ್ದಾರೆ. ವಿವೇಕ್ ಅವರು ಸಂಭಾಷಣೆಗಳನ್ನು ಬರೆದಿದ್ದು, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಷ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ವಿಜಯ್ ಅಭಿನಯದ 'ವಾರಿಸು' ಚಿತ್ರ ನಿರ್ಮಾಣ ಸಂಸ್ಥೆಗೆ ಸಂಕಷ್ಟ: ಶೋಕಾಸ್ ನೋಟಿಸ್ ನೀಡಿದ ಎಡಬ್ಲ್ಯೂಬಿಐ
ವಾರಿಸು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಪ್ರಭು, ಶರತ್ ಕುಮಾರ್, ಪ್ರಕಾಶ್ ರಾಜ್, ಜಯಸುಧಾ, ಶ್ರೀಕಾಂತ್, ಶಾಮ್, ಯೋಗಿ ಬಾಬು, ಸಂಗೀತ ಮತ್ತು ಸಂಯುಕ್ತ ಸೇರಿದಂತೆ ಬಹು ತಾರಾಗಣವನ್ನು ಚಿತ್ರ ಹೊಂದಿದೆ.