ನಾವು ನಿಶ್ಚಿತಾರ್ಥ ಮುರಿದುಕೊಳ್ಳುತ್ತಿದ್ದೇವೆ, ಇದನ್ನು ಮತ್ತಷ್ಟು ಎಳೆಯಬೇಡಿ: ಸಂಬಂಧಕ್ಕೆ ಅಂತ್ಯವಾಡಿದ ವೈಷ್ಣವಿ ಗೌಡ
ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್ ಆದ ಬೆನ್ನಲ್ಲೇ ವೈಷ್ಣವಿ ಗೌಡ ನಿಶ್ಚಿತಾರ್ಥ ಮುರಿದುಕೊಂಡಿರುವುದಾಗಿ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಖಚಿತಪಡಿಸಿದ್ದಾರೆ.
Published: 25th November 2022 11:16 AM | Last Updated: 25th November 2022 01:39 PM | A+A A-

ವೈಷ್ಣವಿ ಗೌಡ ನಿಶ್ಚಿತಾರ್ಥ
ಬೆಂಗಳೂರು: ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್ ಆದ ಬೆನ್ನಲ್ಲೇ ವೈಷ್ಣವಿ ಗೌಡ ನಿಶ್ಚಿತಾರ್ಥ ಮುರಿದುಕೊಂಡಿರುವುದಾಗಿ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಖಚಿತಪಡಿಸಿದ್ದಾರೆ.
ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವ ವಿರಾಜ್ ಸಿನಿಮಾದ ನಟ ವಿದ್ಯಾಭರಣ್ ಸರಿಯಿಲ್ಲ ಎಂದು ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್ ಆದ ಬೆನ್ನಲ್ಲೇ ಮಾಧ್ಯಮಗಳಲ್ಲಿ ಆರೋಪ-ಪ್ರತ್ಯಾರೋಪ ಚರ್ಚೆಯಾಗುತ್ತಿದ್ದು, ಇದರಿಂದ ಮನನೊಂದಿರುವ ವೈಷ್ಣವಿ ಗೌಡ ಇನ್ಸ್ಟಾಗ್ರಾಂ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ನಾವು ಇದನ್ನು ಇಲ್ಲಿಗೆ ಕೈಬಿಡುತ್ತಿದ್ದೇವೆ. ಈ ವಿಷಯವನ್ನು ಮತ್ತೆ ಎಳೆಯಬೇಡಿ, ಇಲ್ಲಿಗೆ ಬಿಡಿ ಎಂದು ಎಲ್ಲರ ಬಳಿ ಮನವಿ ಮಾಡುತ್ತಿದ್ದೇನೆ. ಎಲ್ಲರ ಶುಭಹಾರೈಕೆಗೆ ಧನ್ಯವಾದಗಳು" ಎಂದು ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
ನಾನು, ವಿದ್ಯಾಭರಣ್ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಎರಡು ಕುಟುಂಬದವರು ಮಾತನಾಡಿಕೊಂಡಿದ್ದೆವು ಅಷ್ಟೇ. ಮದುವೆ ಬಗ್ಗೆ ನಾವಿನ್ನೂ ಯಾವ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಈಗಲೇ ಎಲ್ಲ ವಿಷಯ ತಿಳಿದಿದ್ದು ಗೊತ್ತಾಗಿದೆ. ಹಾಗಾಗಿ ನಾನು ಈ ಬಗ್ಗೆ ಮುಂದೆ ಹೆಜ್ಜೆ ಇಡೋದಿಲ್ಲ" ಎಂದು ವೈಷ್ಣವಿ ಗೌಡ ಅವರು ಮಾಧ್ಯಮದ ಜೊತೆ ಹೇಳಿಕೊಂಡಿದ್ದಾರೆ.