ಮಗಳು ಏನು ನಿರ್ಧಾರ ತೆಗೆದುಕೊಳ್ಳುತ್ತಾಳೋ ಅದಕ್ಕೆ ನಾವು ಬದ್ಧ: ನಟಿ ವೈಷ್ಣವಿ ಪೋಷಕರು
ನನ್ನ ಮಗಳು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಒಳ್ಳೆಯ ಜೀವನ ಮಾಡಬೇಕು ಎಂದು ವೈಷ್ಣವಿ ಅಂದುಕೊಂಡಿದ್ದಾಳೆ. ನನ್ನ ಮಗಳು ತಪ್ಪುದಾರಿಗೆ ಹೋಗಲ್ಲ ಎಂಬ ಭರವಸೆ ನನಗಿದೆ.
Published: 26th November 2022 01:30 PM | Last Updated: 26th November 2022 01:56 PM | A+A A-

ವೈಷ್ಣವಿ ಗೌಡ
ಬೆಂಗಳೂರು: ನಟಿ ವೈಷ್ಣವಿ ಗೌಡ ಹಾಗೂ ನಟ, ಉದ್ಯಮಿ ವಿದ್ಯಾಭರಣ್ ಮದುವೆ ಮಾತುಕತೆ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಇವರಿಬ್ಬರು ಹಾರ ಹಾಕಿ ನಿಂತಿದ್ದರಿಂದ ವೈಷ್ಣವಿ ಎಂಗೇಜ್ಮೆಂಟ್ ನಡೆದಿದೆ ಎನ್ನಲಾಗಿತ್ತು. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿರುವ ವೈಷ್ಣವಿ ಪಾಲಕರಾದ ರವಿಕುಮಾರ್ ಹಾಗೂ ಭಾನು ರವಿಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ವಿದ್ಯಾಭರಣ್ ಭೇಟಿ ನಡೆದಿದ್ದು ಹೇಗೆ ಎಂಬ ಬಗ್ಗೆ ಭಾನು ರವಿಕುಮಾರ್ ಅವರು ಮಾಹಿತಿ ನೀಡಿದ್ದಾರೆ. ‘ಚಾಕೋಲೇಟ್ ಹೆಸರಿನ ಸಿನಿಮಾದಲ್ಲಿ ವಿದ್ಯಾಭರಣ್ ನಟಿಸುತ್ತಿದ್ದರು. ವೈಷ್ಣವಿ ಗೌಡ ಕೂಡ ಇದ್ದರು. 9 ದಿನ ಶೂಟಿಂಗ್ ನಡೆದಿತ್ತು. ನಂತರ ಸಿನಿಮಾ ಅರ್ಧಕ್ಕೆ ನಿಂತಿತು. ನಂತರ ಕಾಂಟ್ಯಾಕ್ಟ್ ತಪ್ಪಿತ್ತು. ಬಿಗ್ ಬಾಸ್ನಿಂದ ಹೊರ ಬಂದ ನಂತರದಲ್ಲಿ ಅವರ ಕುಟುಂಬದವರು ವಿಷ್ ಮಾಡಿದರು. ಅಲ್ಲಿಂದ ಮತ್ತೆ ಫ್ರೆಂಡ್ಶಿಪ್ ಬೆಳೆಯಿತು’ ಎಂದು ಮಾತು ಆರಂಭಿಸಿದ್ದಾರೆ.
ಇದು ನಿಶ್ಚಿತಾರ್ಥವಲ್ಲ, ಹೆಣ್ಣು ನೋಡುವ ಶಾಸ್ತ್ರ ಅಷ್ಟೇ. ಆಡಿಯೋ ಲೀಕ್ ಆದಮೇಲೆ ವಿದ್ಯಾಭರಣ್ ತಾಯಿಯವರು ನನಗೆ ವಾಯ್ಸ್‌ನೋಟ್ ಕಳಿಸಿದ್ದಾರೆ. "ನಾವು ಯಾರನ್ನೂ ಸೊಸೆ ಅಂತ ಹೇಳಿಲ್ಲ, ಆ ಹುಡುಗಿ ಯಾರು ಅಂತ ನಾವು ಚೆಕ್ ಮಾಡಿ ಹೇಳುತ್ತೇವೆ. ಆ ಹುಡುಗಿ ಹೇಳಿದಷ್ಟು ನನ್ನ ಮಗ ಕೆಟ್ಟವನಲ್ಲ" ಎಂದು ವಿದ್ಯಾಭರಣ್ ತಾಯಿ ನನಗೆ ಮೆಸೇಜ್ ಮಾಡಿದ್ದಾರೆ.
ಆ ಹುಡುಗಿಗೆ ನಮ್ಮ ಕುಟುಂಬದ ಮೇಲೆ ಕಾಳಜಿ ಇದ್ದರೆ ನಮಗೆ ಫೋನ್ ಮಾಡಿ ಹೇಳಬಹುದಿತ್ತು. ನಮಗೆ ಫೋನ್ ಮಾಡದೆ ಆ ಹುಡುಗಿ ಯಾಕೆ ಆಡಿಯೋ ಲೀಕ್ ಮಾಡಿದ್ದು ಅಂತ ಗೊತ್ತಾಗ್ತಿಲ್ಲ. ನನ್ನ ಮಗಳು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಒಳ್ಳೆಯ ಜೀವನ ಮಾಡಬೇಕು ಎಂದು ವೈಷ್ಣವಿ ಅಂದುಕೊಂಡಿದ್ದಾಳೆ. ನನ್ನ ಮಗಳು ತಪ್ಪುದಾರಿಗೆ ಹೋಗಲ್ಲ ಅಂತ ನಾನು ವೈಷ್ಣವಿ ಅಭಿಮಾನಿಗಳಿಗೆ ಭರವಸೆ ನೀಡುತ್ತೇನೆ.