
ಅಜಯ್ ರಾವ್
ಪವನ್ ಭಟ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಅಜಯ್ ರಾವ್ ನಟಿಸುತ್ತಿದ್ದು ಚಿತ್ರಕ್ಕೆ ಯುದ್ಧಕಾಂಡ ಎಂದು ಟೈಟಲ್ ಇಡಲಾಗಿದೆ.
ಶುಕ್ರವಾರ ಟೀಸರ್ ರಿಲೀಸ್ ಮಾಡಿದ ನಿರ್ದೇಶಕರು ಅಧಿಕೃತ ಟೈಟಲ್ ಘೋಷಣೆ ಮಾಡಿದ್ದಾರೆ. 1989 ರಲ್ಲಿ ರವಿಚಂದ್ರನ್ ಯುದ್ಧಕಾಂಡ ಎಂಬ ಚಿತ್ರದಲ್ಲಿ ನಟಿಸಿದ್ದರು, ಆ ಸಿನಿಮಾದಿಂದ ಟೈಟಲ್ ತೆಗೆದುಕೊಳ್ಳಲಾಗಿದೆ.
ಯುದ್ಧಕಾಂಡದಲ್ಲಿ ಅಜಯ್ ರಾವ್ ವಕೀಲನಾಗಿ ನಟಿಸಿದ್ದಾರೆ. ರವಿಚಂದ್ರನ್ ಅವರು ಹಿಂದಿನ ಚಲನಚಿತ್ರದಲ್ಲಿ ವಕೀಲರ ಪಾತ್ರವನ್ನು ಸಹ ಮಾಡಿದ್ದರು. ಆದರೆ, ಎರಡೂ ಚಿತ್ರಗಳಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನಿರ್ದೇಶಕ ಪವನ್ ಭಟ್ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ'ಗೆ ಅಜಯ್ ರಾವ್ ನಾಯಕ!
ವಿಮರ್ಶಕರ ಮೆಚ್ಚುಗೆ ಗಳಿಸಿದ ಕಟಿಂಗ್ ಶಾಪ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಪವನ್ ಭಟ್ ಅವರು ಯುದ್ಧಕಾಂಡದ ಕಥೆಯನ್ನು ಬರೆದಿದ್ದಾರೆ. ಚಿತ್ರಕ್ಕೆ ಕೆ ಬಿ ಪ್ರವೀಣ್ ಅವರ ಸಂಗೀತ ಮತ್ತು ಕಾರ್ತಿಕ್ ಶರ್ಮಾ ಅವರ ಛಾಯಾಗ್ರಹಣವಿದೆ.
ಪ್ರಿ-ಪ್ರೊಡಕ್ಷನ್ ಹಂತದಲ್ಲಿರುವ ಈ ಪ್ರಾಜೆಕ್ಟ್ ಡಿಸೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ನಾಯಕ ನಟ ಅಜಯ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೃಷ್ಣ ಲೀಲಾ ನಂತರ ಇದು ಅವರ ಎರಡನೇ ನಿರ್ಮಾಣ ಸಾಹಸವಾಗಿದೆ.