ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ: ದಿ ರೈಸ್' ಡಿಸೆಂಬರ್ 8ಕ್ಕೆ ರಷ್ಯಾದಲ್ಲಿ ಬಿಡುಗಡೆ
ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ 'ಪುಷ್ಪ: ದಿ ರೈಸ್' ಡಿಸೆಂಬರ್ 8 ರಂದು ರಷ್ಯಾದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕರು ಸೋಮವಾರ ಘೋಷಿಸಿದ್ದಾರೆ.
Published: 28th November 2022 04:28 PM | Last Updated: 16th December 2022 12:17 PM | A+A A-

ಪುಷ್ಫ: ದಿ ರೈಸ್ ಸಿನಿಮಾ ಪೋಸ್ಟರ್
ಮುಂಬೈ: ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ 'ಪುಷ್ಪ: ದಿ ರೈಸ್' ಡಿಸೆಂಬರ್ 8 ರಂದು ರಷ್ಯಾದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕರು ಸೋಮವಾರ ಘೋಷಿಸಿದ್ದಾರೆ.
ಭಾರತೀಯ ಚಿತ್ರೋತ್ಸವದ ಭಾಗವಾಗಿ ಈ ಚಿತ್ರವು ಡಿಸೆಂಬರ್ 1 ಮತ್ತು ಡಿಸೆಂಬರ್ 3 ರಂದು ಮಾಸ್ಕೋ ಮತ್ತು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಕ್ರಮವಾಗಿ ರಷ್ಯಾದ ಭಾಷೆಯಲ್ಲಿ ಪ್ರದರ್ಶನ ಕಾಣಲಿದೆ.
ಮಾಸ್ಕೋದ ಓಷಿಯಾನಿಯಾ ಶಾಪಿಂಗ್ ಸೆಂಟರ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್ ಬಂಡ್ರೆಡ್ಡಿ ಮತ್ತು ನಿರ್ಮಾಪಕ ರವಿಶಂಕರ್ ಭಾಗವಹಿಸಲಿದ್ದಾರೆ.
Meet team #PushpaTheRise at the Russian language premieres