'2nd ಲೈಫ್' ಕರುಳಬಳ್ಳಿಯ ಮಹತ್ವವನ್ನು ತಿಳಿಸುತ್ತದೆ: ನಟ ಆದರ್ಶ್ ಗುಂಡೂರಾಜ್

ಈ ಹಿಂದೆ 'ಸ್ವಾರ್ಥ ರತ್ನ' ಎಂಬ ಸಿನಿಮಾದಲ್ಲಿ ಹೀರೋ ಆಗಿದ್ದ ಆದರ್ಶ್ ಗುಂಡುರಾಜ್, '2nd ಲೈಫ್' ಸಿನಿಮಾದಲ್ಲೂ ಹೀರೋ ಆಗಿ ನಟಿಸಿದ್ದು ಚಿತ್ರವು ಡಿ.2 ರಂದು ಬಿಡುಗಡೆಯಾಗುತ್ತಿದೆ.
ಆದರ್ಶ್ ಗುಂಡೂರಾಜ್
ಆದರ್ಶ್ ಗುಂಡೂರಾಜ್

ಈ ಹಿಂದೆ 'ಸ್ವಾರ್ಥ ರತ್ನ' ಎಂಬ ಸಿನಿಮಾದಲ್ಲಿ ಹೀರೋ ಆಗಿದ್ದ ಆದರ್ಶ್ ಗುಂಡುರಾಜ್, '2nd ಲೈಫ್' ಸಿನಿಮಾದಲ್ಲೂ ಹೀರೋ ಆಗಿ ನಟಿಸಿದ್ದು ಚಿತ್ರವು ಡಿ.2 ರಂದು ಬಿಡುಗಡೆಯಾಗುತ್ತಿದೆ.

ಚಿತ್ರವನ್ನು ರಾಜು ದೇವಸಂದ್ರ (ಗೋಸಿ ಗ್ಯಾಂಗ್ ಮತ್ತು ಕಹಳೆ ಕಾಡು) ನಿರ್ದೇಶಿಸಿದ್ದು, ಚಿತ್ರದಲ್ಲಿ ಸಿಂಧು ರಾವ್ ಮತ್ತು ಶಿವ ಪ್ರದೀಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಕುರಿತು ಮಾಹಿತಿ ನೀಡಿರುವ ಆದರ್ಶ್ ಗುಂಡೂರಾಜ್ ಅವರು, 2nd ಲೈಫ್ ಚಿತ್ರವು ಹೆರಿಗೆಯ ಸಮಯದಲ್ಲಿ ಶಿಶುಗಳ ಹೊಕ್ಕಳು ಬಳ್ಳಿ (ಕರುಳಬಳ್ಳಿ) ಶೇಖರಿಸಿಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಚಿತ್ರದಲ್ಲಿ ನನ್ನ ಪಾತ್ರವು ನನ್ನ ಮೊದಲ ಚಿತ್ರಕ್ಕಿಂತ ಸಂಪೂರ್ಣವಾಗಿ ವಿಭಿನ್ವವಾಗಿದೆ ಎಂದು ಹೇಳಿದ್ದಾರೆ.

ಕರುಳಬಳ್ಳಿ ಕುರಿತಾದ ಈ ಚಿತ್ರವು ಕೇವಲ ಒಂದು ವಿಶಿಷ್ಟವಾದ ಚಿಂತನೆಯಲ್ಲದೆ, ಸಾಮಾಜಿಕವಾಗಿ ಪ್ರಸ್ತುತವಾದ ವಿಷಯವನ್ನು ಒಳಗೊಂಡಿದೆ.

ನನ್ನ ಚಿತ್ರ ನೋಡಲು ಬರುವ ಪ್ರೇಕ್ಷಕರಿಗೆ ಸಂದೇಶವೊಂದು ಸಿಗಲಿದೆ ಎಂದು ನಾನು ಭಾವಿಸುತ್ತೇನೆಂದು ತಿಳಿಸಿದ್ದಾರೆ.

ಜಯಣ್ಣ ಫಿಲ್ಮ್ಸ್‌ ಹಾಗೂ ಶುಕ್ರ ಫಿಲ್ಮ್ಸ್‌ ಜಂಟಿಯಾಗಿ '2nd ಲೈಫ್' ಚಿತ್ರವನ್ನು ನಿರ್ಮಿಸಿದೆ. ಈ ಸಿನಿಮಾಗೆ ರಾಜು ದೇವಸಂದ್ರ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಿಂಧೂ ರಾವ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅವರಿಗೆ ಇಲ್ಲಿ ಅಂಧಳಾಗಿ ಕಾಣಿಸಿಕೊಂಡಿದ್ದಾರೆ. ಆರವ್ ರಿಷಿಕ್ ಅವರ ಸಂಗೀತ ಮತ್ತು ರಮೇಶ್ ಕೊಯಿರಾ ಅವರ ಛಾಯಾಗ್ರಹಣದೊಂದಿಗೆ 2nd ಲೈಫ್ ಸಿನಿಮಾ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಚಿತ್ರೀಕರಿಸಲ್ಪಟ್ಟಿದೆ. ಶಿವಪ್ರದೀಪ್ ಒಂದು ಮುಖ್ಯ ಪಾತ್ರ ಮಾಡಿದ್ದು, ರುದ್ರಮುನಿ ಚಿತ್ರದಲ್ಲಿ ನಟಿಸುವುದರ ಜೊತೆಗೆ ಸಹ ನಿರ್ಮಾಪಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com