ರಾಜಮೌಳಿಯ ಮುಂದಿನ ಚಿತ್ರದಲ್ಲಿ ಮಹೇಶ್ ಬಾಬುಗೆ ದೀಪಿಕಾ ನಾಯಕಿ
'ಆರ್‌ಆರ್‌ಆರ್' ಚಿತ್ರದ ಅದ್ಭುತ ಯಶಸ್ಸಿನ ನಂತರ ಸ್ಟಾರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ತಮ್ಮ ಮುಂದಿನ ಚಿತ್ರವನ್ನು ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಮಾಡುವುದಾಗಿ ಘೋಷಿಸಿದ್ದಾರೆ.
Published: 18th October 2022 04:20 PM | Last Updated: 18th October 2022 06:34 PM | A+A A-

ಮಹೇಶ್ ಬಾಬು - ದೀಪಿಕಾ ಪಡುಕೋಣೆ
ಮುಂಬೈ: 'ಆರ್‌ಆರ್‌ಆರ್' ಚಿತ್ರದ ಅದ್ಭುತ ಯಶಸ್ಸಿನ ನಂತರ ಸ್ಟಾರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ತಮ್ಮ ಮುಂದಿನ ಚಿತ್ರವನ್ನು ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಮಾಡುವುದಾಗಿ ಘೋಷಿಸಿದ್ದಾರೆ.
ಈ ಚಿತ್ರಕ್ಕೆ ರಾಜಮೌಳಿ ಅವರ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆ ಬರೆದಿದ್ದು, ನಿಜ ಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತದೆ ಮತ್ತು ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗಿದೆ.
ಚಿತ್ರಕ್ಕೆ ತಾತ್ಕಾಲಿಕವಾಗಿ 'ಎಸ್ಎಸ್ಎಂಬಿ29' ಎಂಬ ಹೆಸರಿಡಲಾಗಿದ್ದು, ಇದು ಸಾಹಸಮಯ ಚಿತ್ರವಾಗಿದ್ದು 2023 ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ದೀಪಿಕಾ ಮತ್ತು ಮಹೇಶ್ ಬಾಬು ಒಟ್ಟಿಗೆ ಕೆಲಸ ಮಾಡುವುದು ಇದೇ ಮೊದಲು ಎಂದು ವರದಿಯಾಗಿದೆ.
ಇದನ್ನು ಓದಿ: ಬಾಕ್ಸ್ ಆಫೀಸ್ ನಲ್ಲಿ RRR' ಭರ್ಜರಿ ಕಲೆಕ್ಷನ್, ವಿಶ್ವದಾದ್ಯಂತ 611 ಕೋಟಿ ರೂ. ಸಂಗ್ರಹ!
ಏತನ್ಮಧ್ಯೆ, ದೀಪಿಕಾ ಪಡುಕೋಣೆ ಅವರು ಪ್ರಸ್ತುತ 'ಪ್ರಾಜೆಕ್ಟ್ ಕೆ' ಎಂಬ ಮತ್ತೊಂದು ಪ್ಯಾನ್-ಇಂಡಿಯಾ ಚಲನಚಿತ್ರದಲ್ಲಿ ನಿರತರಾಗಿದ್ದಾರೆ. ಅದರಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ಸುನೀಲ್ ಶೆಟ್ಟಿ ಅವರೊಂದಿಗೆ ದೀಪಿಕಾ ಅಭಿನಯಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷ ತಡವಾದ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ.