'ಡಿಆರ್ 56' ಸಿನಿಮಾದಲ್ಲಿ ಸಿಬಿಐ ಅಧಿಕಾರಿ ಪಾತ್ರದಲ್ಲಿ ನಟಿ ಪ್ರಿಯಾಮಣಿ

ಪ್ರಿಯಾಮಣಿ ನಟನೆಯ ಡಾ.56 ಸಿನಿಮಾ ಫರ್ಸ್ಟ್ ಲುಕ್ ರಿಲೀಸ್ ಆಗಿದ್ದು, ಸಿನಿಮಾ ಕನ್ನಡದಲ್ಲಿ ತಯಾರಾಗುತ್ತಿದ್ದು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್‌ ಆಗಿ ಏಕಕಾಲಕ್ಕೆ ತೆರೆ ಕಾಣುತ್ತಿದೆ.
ಪ್ರಿಯಾಮಣಿ
ಪ್ರಿಯಾಮಣಿ

ಪ್ರಿಯಾಮಣಿ ನಟನೆಯ ಡಾ.56 ಸಿನಿಮಾ ಫರ್ಸ್ಟ್ ಲುಕ್ ರಿಲೀಸ್ ಆಗಿದ್ದು, ಸಿನಿಮಾ ಕನ್ನಡದಲ್ಲಿ ತಯಾರಾಗುತ್ತಿದ್ದು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್‌ ಆಗಿ ಏಕಕಾಲಕ್ಕೆ ತೆರೆ ಕಾಣುತ್ತಿದೆ.

ಇತ್ತೀಚೆಗಷ್ಟೇ ಚಿತ್ರತಂಡವು ಪ್ರಿಯಾಮಣಿಯ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಕಾಲಿವುಡ್ ಸ್ಟಾರ್ ನಟ ವಿಜಯ್ ಸೇತುಪತಿ ಈ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಈ ಚಿತ್ರವು ವೈಜ್ಞಾನಿಕ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಮಿಶ್ರಣವಾಗಿದೆ ಮತ್ತು ಇದರಲ್ಲಿ ಪ್ರಿಯಾಮಣಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ದೀಪಕ್ ಶೆಟ್ಟಿ, ರಮೇಶ್ ಭಟ್ ಮತ್ತು ವೀಣಾ ಪೊನ್ನಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ರಾಜೇಶ್ ಅನಂತಲೀಲಾ ನಿರ್ದೇಶಿಸಿದ್ದಾರೆ. ಹರಿ ಹರ ಪಿಕ್ಚರ್ಸ್ ಮತ್ತು ಶ್ರೀ ಲಕ್ಷ್ಮೀ ಜ್ಯೋತಿ ಕ್ರಿಯೇಷನ್ಸ್ ನಿರ್ಮಾಣದ ಕಥೆಗೆ ಡಾ 56 ರ ನಿರ್ಮಾಪಕ ಪ್ರವೀಣ್ ರೆಡ್ಡಿ ಟಿ ಸಹ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.

ಕೊನೆಯದಾಗಿ ವಿರಾಟ ಪರ್ವಂನಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಮಣಿ, ಸೈನೈಡ್, ಕೊಟೇಶನ್ ಗ್ಯಾಂಗ್, ಖೈಮರ, ಮೈದಾನ್, ಜವಾನ್ ಮತ್ತು ವೆಂಕಟ್ ಪ್ರಭು ನಿರ್ದೇಶನದ ಎನ್‌ಸಿ 22 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com