ಕಾರವಾರ: ಸಮುದ್ರದ ಅಲೆಗಳ ನಡುವೆ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ತೆಲುಗು ನಟನ ರಕ್ಷಣೆ!
ಗೋಕರ್ಣದ ಕೊಡ್ಲೇ ಬೀಚ್ನಲ್ಲಿ ಈಜಲು ಹೋಗಿ ಸಮುದ್ರ ಅಲೆಗೆ ಸಿಲುಕಿದ್ದ ಪ್ರವಾಸಿಗನೊಬ್ಬನನ್ನು ಗೋಕರ್ಣ ಅಡ್ವೇಂಚರ್ ಸಿಬ್ಬಂದಿ ರಕ್ಷಣೆ ಮಾಡಿದೆ.
Published: 21st October 2022 04:26 PM | Last Updated: 21st October 2022 04:26 PM | A+A A-

ಅಖಿಲ್ ರಾಜ್
ಕಾರವಾರ: ಗೋಕರ್ಣದ ಕೊಡ್ಲೇ ಬೀಚ್ನಲ್ಲಿ ಈಜಲು ಹೋಗಿ ಸಮುದ್ರ ಅಲೆಗೆ ಸಿಲುಕಿದ್ದ ಪ್ರವಾಸಿಗನೊಬ್ಬನನ್ನು ಗೋಕರ್ಣ ಅಡ್ವೇಂಚರ್ ಸಿಬ್ಬಂದಿ ರಕ್ಷಣೆ ಮಾಡಿದೆ.
ಕುಮಟಾ ತಾಲೂಕಿನ ಕೊಡ್ಲೇ ಬೀಚ್ನಲ್ಲಿ ಈ ಘಟನೆ ನಡೆದಿದೆ. ಈಜಲು ಹೋಗಿದ್ದ ಯುವಕ ಸಮುದ್ರದ ಅಲೆಗಳಿಗೆ ಸಿಲುಕಿ ಒದ್ದಾಡುತ್ತಿದ್ದುದ್ದನ್ನು ಗಮನಿಸಿದ ಗೋಕರ್ಣ ಅಡ್ವೇಂಚರ್ ಸಿಬ್ಬಂದಿ ಕೂಡಲೇ ಸರ್ಫಿಂಗ್ ಬೋಟ್ ಮೂಲಕ ರಕ್ಷಿಸಿದ್ದಾರೆ.
ಯುವನನ್ನು ಹೈದರಾಬಾದ್ ಮೂಲದ 26 ವರ್ಷದ ಅಖಿಲ್ ರಾಜ್ ಎಂದು ತಿಳಿದುಬಂದಿದೆ. ಅಖಿಲ್ ರಾಜ್ ವಿಂಧು ಬೋಜನಂ ಚಿತ್ರದಲ್ಲಿ ನಟಿಸಿದ್ದಾರೆ.