
ಶಮ್ನಾ ಕಾಸಿಮ್ ಹಾಗೂ ಅವರ ಪತಿ ಶನಿದ್ ಆಸಿಫ್ ಅಲಿ
ಸ್ಯಾಂಡಲ್'ವುಡ್'ನ ಜೋಶ್ ಸಿನಿಮಾ ಖ್ಯಾತಿಯ ನಟಿ ಪೂರ್ಣಾ ಅಲಿಯಾಸ್ ಶಮ್ನಾ ಕಾಸಿಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ದುಬೈ ಮೂಲದ ಉದ್ಯಮಿ ಶನಿದ್ ಆಸಿಫ್ ಅಲಿ ಜೊತೆ ಶಮ್ನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನವ ದಂಪತಿಗಳಿಗೆ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.
ಜೋಶ್’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪೂರ್ಣಾ ಕಾಲಿರಿಸಿದ್ದರು. ಚಿತ್ರದಲ್ಲಿ ಪೂರ್ಣಾ ಅವರು ಮೀನಾ ಎಂಬ ಪಾತ್ರ ಮಾಡಿ ಜನಪ್ರಿಯ ಗಳಿಸಿದ್ದರು.
ದುಬೈನಲ್ಲಿ ಪೂರ್ಣಾ ಅವರ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿದ್ದು. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿವಾಹಕ್ಕೆ ಕೇವಲ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು ಎಂದು ತಿಳಿದುಬಂದಿದೆ.