ನೃತ್ಯದಲ್ಲಿ ನನಗೆ ಪ್ರಭುದೇವ ಸ್ಫೂರ್ತಿ: ರಾಜಾ ರಾಣಿ ರೋರರ್ ರಾಕೆಟ್ ನಟ ಭೂಷಣ್

ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ಸಂಯೋಜಕರಾದ ಭೂಷಣ್, ರಾಜಾ ರಾಣಿ ರೋರರ್ ರಾಕೆಟ್ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಭೂಷಣ್
ಭೂಷಣ್

ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ಸಂಯೋಜಕರಾದ ಭೂಷಣ್, ರಾಜಾ ರಾಣಿ ರೋರರ್ ರಾಕೆಟ್ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಶಿವರಾಜ್‌ಕುಮಾರ್, ದರ್ಶನ್, ಪುನೀತ್ ರಾಜ್‌ಕುಮಾರ್, ಗಣೇಶ್ ಮತ್ತು ಶರಣ್ ಅಭಿನಯದ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಭೂಷಣ್ ಈಗ ನಟನೆಗೆ ಧುಮುಕುತ್ತಿದ್ದಾರೆ. ವಾಸ್ತವವಾಗಿ, ಭೂಷಣ್ ನೃತ್ಯ ಸಂಯೋಜಕರಾಗುವ ಮೊದಲು ನಟನಾಗಬೇಕೆಂಬ ಬಯಕೆ ಹೊಂದಿದ್ದರು.

ಮಧ್ಯಮ ವರ್ಗದ ಕುಟುಂಬದಿಂದ ಬಂದ ನನ್ನ ಬಳಿ ಯಾವುದೇ ಬ್ಯಾಕಪ್ ಇರಲಿಲ್ಲ. ನಾನು ನಟನಾಗುವ ಗುರಿ ಹೊಂದಿದ್ದೆ, ಆದರೆ ನಾನು ನನ್ನ ವೃತ್ತಿಜೀವನದ ಪ್ಲಾನ್ ಮಾಡಿದ್ದೆ. ನಾನು ಕಾಲೇಜಿನಲ್ಲಿದ್ದಾಗ ನೃತ್ಯ ತರಬೇತಿ ಪಡೆದುಕೊಂಡೆ, ಗಣೇಶೋತ್ಸವದಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದೆ, ಚಲನಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರನಾಗಿ ಪ್ರವೇಶಿಸಿದೆ.

ನಾನು ಸುಮಾರು 15 ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದೇನೆ ಮತ್ತು ನೃತ್ಯ ಸಂಯೋಜಕ ಮತ್ತು ಸ್ಪರ್ಧಿಯಾಗಿ 10 ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಚಲನಚಿತ್ರ ನೃತ್ಯ ಸಂಯೋಜಕನಾಗಿ ನನ್ನ ಮೊದಲ ಹಾಡು ಚುಟು ಚುಟು, (Rambo 2), ಇದು ಸೆನ್ಸೇಷನಲ್ ಹಿಟ್ ಆಯಿತು. ಅದಾದ ನಂತರ ಅನೇಕ ಟಾಪ್ ಸ್ಟಾರ್‌ಗಳಿಗೆ ನೃತ್ಯ ಸಂಯೋಜನೆ ಮಾಡುವ ಅವಕಾಶವನ್ನು ಪಡೆದುಕೊಂಡೆ" ಎಂದು ಭೂಷಣ್  ವಿವರಿಸಿದ್ದಾರೆ.

<strong>ಭೂಷಣ್ ಮತ್ತು ಮಾನ್ಯ</strong>
ಭೂಷಣ್ ಮತ್ತು ಮಾನ್ಯ

ತಮ್ಮ ನೃತ್ಯ ಕೌಶಲ್ಯ ನನಗೆ ನಟಿಸಲು ಸಹಾಯ ಮಾಡಿತು, "ರಾಜ ರಾಣಿ ರೋರರ್ ರಾಕೆಟ್ ಅನ್ನು ಹಾಸ್ಯ-ಪ್ರಧಾನ ಸಿನಿಮಾವಾಗಿದೆ ಎಂದು ಭೂಷಣ್ ಹೇಳಿದ್ದಾರೆ. ಕೆಂಪೇಗೌಡ ಮಾಗಡಿ ನಿರ್ದೇಶನದ ಈ ಚಿತ್ರ ಗ್ರಾಮೀಣ ಹಿನ್ನಲೆ ಹೊಂದಿದೆ,  ಮಾನ್ಯ ನಾಯಕಿಯಾಗಿ ನಟಿಸಿದ್ದಾರೆ. ನಿಗದಿತ ಬಜೆಟ್‌ನಿಂದಾಗಿ ನಾನು ಸರಳವಾದ ಕಥೆಯೊಂದಿಗೆ ಹೋಗಬೇಕಾಗಿತ್ತು.  ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ಈ ಯೋಜನೆಗೆ ಸಹಿ ಹಾಕಲಾಗಿತ್ತು.  ಚಿತ್ರವು ಸೆಪ್ಟೆಂಬರ್ 23 ರಂದು ರಿಲೀಸ್ ಆಗುತ್ತಿದೆ ಎಂದು ಭೂಷಣ್ ತಿಳಿಸಿದ್ದಾರೆ.

ಪ್ರಭುದೇವ್ ನನಗೆ ಸ್ಫೂರ್ತಿ, ನಾನು ಪ್ರಭುದೇವ ಅವರ ಅಭಿಮಾನಿ, ಅವರನ್ನು ಅನುಸರಿಸಲು ಬಯಸುತ್ತೇನೆ. ನೃತ್ಯ ಸಂಯೋಜಕನಾಗಿ, ನಟನಾಗಿ ಯಶಸ್ವಿ ವೃತ್ತಿಜೀವನ ಬಯಸುತ್ತೇನೆ ಮತ್ತು ನಾನು ಒಂದು ದಿನ ಚಲನಚಿತ್ರವನ್ನು ನಿರ್ದೇಶಿಸುತ್ತೇನೆ" ಎಂದು ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com