ಸಿನಿ ಪ್ರಿಯರಿಗೆ ಗುಡ್ ನ್ಯೂಸ್: ಕೇವಲ 75 ರೂ.ಗೆ ನಿಮ್ಮ ಹತ್ತಿರದ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡುವ ಭಾಗ್ಯ!

ಸಿನಿಪ್ರೇಮಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್..ಸಿನಿ ಪ್ರಿಯರು ಕೇವಲ 75 ರೂ.ಗೆ ಸಿನಿಮಾ ವೀಕ್ಷಿಸಬಹುದು. ನಂಬೋದಕ್ಕೆ ಕಷ್ಟ ಆದ್ರೂ ಸಹ ಇದು ನಿಜ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿನಿಪ್ರೇಮಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್..ಸಿನಿ ಪ್ರಿಯರು ಕೇವಲ 75 ರೂ.ಗೆ ಸಿನಿಮಾ ವೀಕ್ಷಿಸಬಹುದು. ನಂಬೋದಕ್ಕೆ ಕಷ್ಟ ಆದ್ರೂ ಸಹ ಇದು ನಿಜ. ಇತ್ತೀಚಿಗೆ ಬಿಡುಗಡೆಯಾದ ಚಲನಚಿತ್ರ ಬ್ರಹ್ಮಾಸ್ತ್ರ, ಚುಪ್, ಧೋಕಾ ಟಿಕೆಟ್‌ಗಳು ಕೇವಲ 75 ರೂಗಳಿಗೆ ಲಭ್ಯವಿವೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಸೆಪ್ಟೆಂಬರ್ 23, 2022 ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ  PVR, INOX, Cinepolis, Carnival ಮತ್ತು Delite ಸೇರಿದಂತೆ ಭಾರತದಾದ್ಯಂತದ ಮಲ್ಟಿಪ್ಲೆಕ್ಸ್ ಗಳಲ್ಲಿ 4,000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಇಂದು  ಕೇವಲ 75 ರೂ.ಗೆ ಸಿನಿಮಾ ವೀಕ್ಷಿಸಬಹುದು.

ಈಗಾಗಲೇ ಹಲವು ಮಲ್ಟಿಪ್ಲೆಕ್ಸ್ ಗಳು ಟಿಕೆಟ್ ಗಳು ಮಾರಾಟವಾಗಿವೆ. ಆದಾಗ್ಯೂ, ದಕ್ಷಿಣದ ಅನೇಕ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯ ಸರ್ಕಾರದ ನಿಯಮಗಳ ಕಾರಣದಿಂದ ಇಲ್ಲಿ ಸಿನಿ ವೀಕ್ಷಣೆ ಸಾಧ್ಯವಾಗುವುದಿಲ್ಲ.

ಇನ್ನೂ ತಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹಿಂತಿರುಗದ ಚಲನಚಿತ್ರ ಪ್ರೇಕ್ಷಕರಿಗೆ ರಾಷ್ಟ್ರೀಯ ಸಿನಿಮಾ ದಿನವು ಆಹ್ವಾನವಾಗಿದೆ ಎಂದು ಅಸೋಸಿಯೇಷನ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com