ರಮೇಶ್ ಅರವಿಂದ್ ಅವರು ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ (2020) ಚಿತ್ರದ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ನಟ ಮತ್ತು ನಿರ್ದೇಶಕ ಎರಡನೇ ಕಂತಿನೊಂದಿಗೆ ಮರಳಿದ್ದು, ಇದು ಮಾಯಾವಿಯ ನಿಗೂಢ ಪ್ರಕರಣದ ಸುತ್ತ ಸುತ್ತುತ್ತದೆ.
ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಚಿತ್ರದ ಟ್ರೈಲರ್ ಅನ್ನು ಶನಿವಾರ ಬಿಡುಗಡೆ ಮಾಡಿದ್ದು, ಪ್ರೇಕ್ಷಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.
ಚಿತ್ರವು ಶಿವಾಜಿ ಸುರತ್ಕಲ್ ಅವರ ಕುಟುಂಬದ ಭಾಗವನ್ನು ತೋರಿಸುತ್ತದೆ, ಅವರು ತಮ್ಮ ಪತ್ನಿ ಜನನಿ (ರಾಧಿಕಾ ನಾರಾಯಣ್) ಅವರನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರ ಚಿಕ್ಕ ಮಗಳು ಚುಕ್ಕಿ ಅಲಿಯಾಸ್ ಸಿರಿ ಸುರತ್ಕಲ್ ಅವರೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಂತ್ರಸ್ತ, ಕೊಲೆಗಾರ ಮತ್ತು ತನ್ನ ನಡುವೆ ಸಂಪರ್ಕವಿದೆ ಎಂಬುದನ್ನು ಆತ ಕಂಡುಕೊಳ್ಳುತ್ತಾನೆ.
ರಮೇಶ್ ಅರವಿಂದ್ ಜೊತೆಗೆ ಮೇಘನಾ ಗಾಂವ್ಕರ್ ಕೂಡ ನಟಿಸಿದ್ದು, ಅವರು ಪ್ರಕರಣವನ್ನು ನಿಭಾಯಿಸಲು ಶಿವಾಜಿಗೆ ಸೂಚಿಸುತ್ತಾರೆ. ಜೂಡಾ ಸ್ಯಾಂಡಿ ಅವರ ಹಿನ್ನೆಲೆ ಸಂಗೀತದೊಂದಿಗೆ, ಗುರುಪ್ರಸಾದ್ ಎಂಡಿ ಅವರ ಛಾಯಾಗ್ರಹಣವಿದೆ.
ಶಿವಾಜಿ ಸುರತ್ಕಲ್ ಅನ್ನು ಕೆಆರ್‌ಜಿ ಸ್ಟುಡಿಯೋಸ್ ವಿತರಿಸಲಿದ್ದು, ಸಂಗೀತಾ ಶೃಂಗೇರಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ರಘು ರಮಣಕೊಪ್ಪ ಮತ್ತು ವಿದ್ಯಾ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಮೇಶ್ ಅರವಿಂದ್ ನಟನೆಯ 103ನೇ ಸಿನಿಮಾ ಶಿವಾಜಿ ಸುರತ್ಕಲ್-2 ರಿಲೀಸ್ ಡೇಟ್ ಫಿಕ್ಸ್!
ಶಿವಾಜಿ ಸುರತ್ಕಲ್ 2 ಚಿತ್ರದ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಂಗೀತಾ ಶೃಂಗೇರಿ!
ಶಿವಾಜಿ ಸುರತ್ಕಲ್-2: ದ್ವಿಪಾತ್ರದಲ್ಲಿ ರಮೇಶ್ ಅರವಿಂದ್? ಚಿರಯೌವನಿಗನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ
ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2: ಮೇಘನಾ ಗಾಂವ್ಕರ್ ಗೆ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ದೀಪಾ ಕಾಮತ್ ಪಾತ್ರ!
ರಮೇಶ್ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್-2 ಹೊಸ ಫೋಸ್ಟರ್ ಬಿಡುಗಡೆ
Advertisement