ಹನುಮ ಜಯಂತಿ ಪ್ರಯುಕ್ತ 'ಆದಿಪುರುಷ್​' ಚಿತ್ರತಂಡದಿಂದ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆ

ಹನುಮ ಜಯಂತಿಯ ಪ್ರಯುಕ್ತ 'ಆದಿಪುರುಷ್​' ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್​'ವೊಂದನ್ನು ಗುರುವಾರ ಬಿಡುಗಡೆ ಮಾಡಿದೆ.
ಫಸ್ಟ್ ಲುಕ್ ಪೋಸ್ಟರ್.
ಫಸ್ಟ್ ಲುಕ್ ಪೋಸ್ಟರ್.

ಹನುಮ ಜಯಂತಿಯ ಪ್ರಯುಕ್ತ 'ಆದಿಪುರುಷ್​' ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್​'ವೊಂದನ್ನು ಗುರುವಾರ ಬಿಡುಗಡೆ ಮಾಡಿದೆ.

ಚಿತ್ರದಲ್ಲಿ ಮರಾಠಿ ನಟ ದೇವದತ್ತ ನಾಗೆ ಹನುಮನಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್​ನಲ್ಲಿ ತಪಸ್ಸು ಮಾಡುತ್ತಿರುವ ಭಂಗಿಯಲ್ಲಿ ಹನುಮಂತ ಕುಳಿತಿದ್ದಾನೆ. ಅವನ ಹಿಂದೆ ನಟ ಪ್ರಭಾಸ್​ ರಾಮನಾಗಿ ಕಾಣಿಸಿಕೊಂಡಿರುವುದು ಕಂಡು ಬಂದಿದೆ.

ಆದಿಪುರುಷ್​ ಸಿನಿಮಾವು ಜೂನ್​ 16 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿದೆ.

ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್​ ರಾಮನ ಪಾತ್ರ ನಿರ್ವಹಿಸಿದರೆ, ಸೀತೆಯಾಗಿ ಕೃತಿ ಸನನ್​ ಮತ್ತು ಸನ್ನಿ ಸಿಂಗ್​ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ.

ಓಂ ರಾವತ್​ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಚಿತ್ರವನ್ನು ಟಿ ಸೀರಿಸ್​ ಬ್ಯಾನರ್​ ಅಡಿ ಭೂಷಣ್​ ಕುಮಾರ್​, ಕೃಷನ್​ ಕುಮಾರ್​, ಓಂ ರಾವತ್​, ಪ್ರಸಾದ್​ ಸುತಾರ್​ ಮತ್ತು ರಾಜೇಶ್​ ನಾಯರ್​ ನಿರ್ಮಾಣ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com