ಬಿಗ್ ಬಾಸ್ ಖ್ಯಾತಿಯ ರಾಜೀವ್‌ಗೆ ನಟ ಸುದೀಪ್ ಸಾಥ್: ತಮ್ಮ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ ಕಿಚ್ಚ
'ಬಿಗ್ ಬಾಸ್' ಖ್ಯಾತಿಯ ರಾಜೀವ್ ನಟನೆಯ 'ಉಸಿರೇ ಉಸಿರೇ' ಸಿನಿಮಾದಲ್ಲಿ 'ಕಿಚ್ಚ' ಸುದೀಪ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
Published: 08th April 2023 11:43 AM | Last Updated: 08th April 2023 03:01 PM | A+A A-

ಚಿತ್ರದ ಚಿತ್ರೀಕರಣದಲ್ಲಿ ನಟ ಸುದೀಪ್.
'ಬಿಗ್ ಬಾಸ್' ಖ್ಯಾತಿಯ ರಾಜೀವ್ ನಟನೆಯ 'ಉಸಿರೇ ಉಸಿರೇ' ಸಿನಿಮಾದಲ್ಲಿ 'ಕಿಚ್ಚ' ಸುದೀಪ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಚಿತ್ರವು ಕೊನೆಯ ಹಂತದ ಚಿತ್ರೀಕರಣ ನಡೆಸುತ್ತಿದ್ದು, ಇತ್ತೀಚೆಗಷ್ಟೇ ಸುದೀಪ್ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ರಾಜೀವ್ ಅಭಿನಯದ ಉಸಿರೇ ಉಸಿರೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುದೀಪ್
ಸುದೀಪ್ ಅವರ ಪಾತ್ರದ ಕುರಿತ ವಿವರಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ, ಸೆಟ್ ನಲ್ಲಿ ಸುದೀಪ್ ಅವರು ಇರುವ ಫೋಟೋಗಳನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
BTS of #UsireUsire @KicchaSudeep plays a pivotal role in the commercial entertainer featuring #BiggBoss contestant #Rajeev in #Vijay's directorial prod by #PradeepYadav pic.twitter.com/QBDX75CBHQ
— A Sharadhaa (@sharadasrinidhi) April 7, 2023
ಪ್ರದೀಪ್ ಯಾದವ್ ಅವರ ಗೊಂಬೆ ಬ್ಯಾನರ್‌ನ ಬೆಂಬಲದೊಂದಿಗೆ, ಉಸಿರೆ ಉಸಿರೆ ಚಿತ್ರಕ್ಕೆ ಮನು ಅವರ ಛಾಯಾಗ್ರಹಣ ಮತ್ತು ವಿವೇಕ್ ಚಕ್ರವರ್ತಿ ಅವರ ಸಂಗೀತವಿದೆ.
‘ಬಿಗ್ ಬಾಸ್’ ಖ್ಯಾತಿಯ ರಾಜೀವ್ ಉಸಿರೇ ಉಸಿರೇ ಚಿತ್ರದಲ್ಲಿ ನಾಯಕ ನಟನಾಗಿದ್ದು, ಶ್ರೀಜಿತ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಅವರು ಚಿತ್ರದಲ್ಲಿ ನಟಿಸಿದ್ದಾರೆ.