'ಯುವ' ಯುಗಾರಂಭ; ಹೊಂಬಾಳೆ ಫಿಲ್ಮ್ಸ್, ಸಂತೋಷ್ ಆನಂದ್ ರಾಮ್ ಚಿತ್ರದ ಚಿತ್ರೀಕರಣ ಆರಂಭ
ಸ್ಯಾಂಡಲ್‌ವುಡ್ ಗೆ ದೊಡ್ಮನೆಯ ಮತ್ತೊಂದು ಕುಡಿಯ ಅಧಿಕೃತ ಪದಾರ್ಪಣೆಯಾಗಿದ್ದು, ಹೊಂಬಾಳೆ ಫಿಲ್ಮ್ಸ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಟ ಯುವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವ ಚಿತ್ರದ ಚಿತ್ರೀಕರಣ ಆರಂಭವಾಗಿದೆ.
Published: 09th April 2023 05:48 PM | Last Updated: 10th April 2023 04:45 PM | A+A A-

ಯುವ ಚಿತ್ರದ ಚಿತ್ರೀಕರಣ ಆರಂಭ
ಬೆಂಗಳೂರು: ಸ್ಯಾಂಡಲ್‌ವುಡ್ ಗೆ ದೊಡ್ಮನೆಯ ಮತ್ತೊಂದು ಕುಡಿಯ ಅಧಿಕೃತ ಪದಾರ್ಪಣೆಯಾಗಿದ್ದು, ಹೊಂಬಾಳೆ ಫಿಲ್ಮ್ಸ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಟ ಯುವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವ ಚಿತ್ರದ ಚಿತ್ರೀಕರಣ ಆರಂಭವಾಗಿದೆ.
ಈ ಬಗ್ಗೆ ಸ್ವತಃ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ ಮಾಹಿತಿ ನೀಡಿದ್ದು, ಯುವರಾಜ್‌ಕುಮಾರ್ (Yuva Rajkumar) ನಟನೆಯ ಚೊಚ್ಚಲ ಸಿನಿಮಾದ ಫಸ್ಟ್ ಡೇ, ಫಸ್ಟ್ ಶೆಡ್ಯೂಲ್ ಶೂಟಿಂಗ್ ಏ.9ರಂದು ಶುರುವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: 'ಶಿವಾಜಿ ಸುರತ್ಕಲ್ 2' ಸಿನಿಮಾದ ಕಥೆ ಬಲಿಷ್ಠವಾದ ಮಹಿಳಾ ಪಾತ್ರಗಳನ್ನು ಒಳಗೊಂಡಿದೆ: ಆಕಾಶ್ ಶ್ರೀವತ್ಸ
Hombale Films ನಿಮಾರ್ಣದ ಯುವ ಸಿನಿಮಾದ ಶೂಟಿಂಗ್ (ಏ.9) ಭಾನುವಾರದಿಂದ ಶುರುವಾಗಿದೆ. ಬೆಂಗಳೂರಿನ ಹೆಚ್‌ಎಂಟಿ ಅಂಗಳದಲ್ಲಿ ಅದ್ದೂರಿ ಸೆಟ್ ಹಾಕಿ ಫಸ್ಟ್ ಡೇ ಶೂಟಿಂಗ್ ಶುರು ಮಾಡಲಾಗಿದೆ. ಯುವಗೆ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ಕ್ಲಾಪ್ ಮಾಡಿದ್ದಾರೆ. ಈ ಕುರಿತ ಫೋಟೋ, ಹೊಂಬಾಳೆ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.