ಕ್ರೇಜಿಸ್ಚಾರ್ ರವಿಚಂದ್ರನ್ ನಟನೆಯ ಥ್ರಿಲ್ಲರ್ ಸಿನಿಮಾಲ್ಲಿ ನಟಿ ಖುಷ್ಬೂ: ಹಿಟ್ ಜೋಡಿ ಮತ್ತೆ ತೆರೆ ಮೇಲೆ ಮಾಡಲಿದ್ಯಾ ಮೋಡಿ!

ಕ್ರೇಜಿಸ್ಟಾರ್ ರವಿಚಂದ್ರನ್ ಮುಂದಿನ ಥ್ರಿಲ್ಲರ್ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ, ಈ ಸಿನಿಮಾವನ್ನು  ಗುರುರಾಜ್ ಕುಲಕರ್ಣಿ  ನಿರ್ದೇಶಕ ಮಾಡಲಿದ್ದಾರೆ.
ರವಿಚಂದ್ರನ್ ಮತ್ತು ಖುಷ್ಬೂ
ರವಿಚಂದ್ರನ್ ಮತ್ತು ಖುಷ್ಬೂ
Updated on

ಕ್ರೇಜಿಸ್ಟಾರ್ ರವಿಚಂದ್ರನ್ ಮುಂದಿನ ಥ್ರಿಲ್ಲರ್ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ, ಈ ಸಿನಿಮಾವನ್ನು  ಗುರುರಾಜ್ ಕುಲಕರ್ಣಿ ನಿರ್ದೇಶಕ ಮಾಡಲಿದ್ದಾರೆ.

ಚಿತ್ರವು ಏಪ್ರಿಲ್ 21 ರಂದು ಅಧಿಕೃತವಾಗಿ ಪ್ರಾರಂಭವಾಗಲಿದ್ದು, ರವಿಚಂದ್ರನ್ ಜೊತೆಗೆ ನಾಯಕಿಯಾಗಿ ನಟಿಸಲು ಪ್ರಸಿದ್ಧ ನಟಿ ಖುಷ್ಬು ಅವರನ್ನು ಸಂಪರ್ಕಿಸಲಾಗಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ರಣಧೀರ, ಅಂಜದ ಗಂಡು ಮತ್ತು ಯುಗ ಪುರುಷ ಚಿತ್ರಗಳಲ್ಲಿ ರವಿಚಂದ್ರನ್-ಖುಷ್ಬು ಜೋಡಿ ಕೆಲಸ ಮಾಡಿತ್ತು. ರವಿಚಂದ್ರನ್ ನಿರ್ದೇಶನದ ಶಾಂತಿ ಕ್ರಾಂತಿ (1991) ಚಿತ್ರದಲ್ಲಿಯೂ ಖುಷ್ಬೂ ನಟಿಸಿದ್ದರು. ನಾನಲ್ಲ ಎಂಬ ಕನ್ನಡ ಸಿನಿಮಾದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡರು.

ಕನ್ನಡ ಇಂಡಸ್ಟ್ರಿ ಈ ಹಿಟ್ ಜೋಡಿಯನ್ನು ಮತ್ತೆ ದೊಡ್ಡ ಪರದೆಯಲ್ಲಿ ನೋಡಲು ಬಯಸುತ್ತಿದೆ. ನಾನು ಖುಷ್ಭು ಅವರೊಂದಿಗೆ ಆರಂಭಿಕ ಚರ್ಚೆ ಮಾಡಿದ್ದೇನೆ. ಸದ್ಯ ಡೇಟ್ಸ್ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಖುಷ್ಬೂ ಕಡೆಯಿಂದ ಒಪ್ಪಿಗೆ ಸಿಕ್ಕ ನಂತರ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ನಿರ್ದೇಶಕ ಗುರುರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com