ಲೀಲಾವತಿ ಒಂದು ಸತ್ಯ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು, ಹಾಗೆ ಆ ಇನ್ನೊಂದು ಸತ್ಯ ಒಪ್ಪಿಕೊಳ್ಳಿ: ಪ್ರಕಾಶ್ ಮೇಹು
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಮದುವೆಯಾಗಿರುವ ಸಂಗತಿ ಇಲ್ಲಿಯವರೆಗೂ ಯಾರೊಬ್ಬರಿಗೂ ಗೊತ್ತೇ ಇರಲಿಲ್ಲ. ಆದರೆ ,ಇತ್ತೀಚೆಗೆ ನಿರ್ದೇಶಕ ಹಾಗೂ ಡಾ.ರಾಜ್ ಕುಟುಂಬಕ್ಕೆ ಹತ್ತಿರವಾಗಿದ್ದ ಪ್ರಕಾಶ್ ರಾಜ್ ಮೆಹು ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಗೊಳಿಸಿದ್ದರು.
Published: 13th April 2023 03:53 PM | Last Updated: 13th April 2023 04:13 PM | A+A A-

ವಿನೋದ್ ರಾಜ್ ಕುಟುಂಬ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಮದುವೆಯಾಗಿರುವ ಸಂಗತಿ ಇಲ್ಲಿಯವರೆಗೂ ಯಾರೊಬ್ಬರಿಗೂ ಗೊತ್ತೇ ಇರಲಿಲ್ಲ. ಆದರೆ ,ಇತ್ತೀಚೆಗೆ ನಿರ್ದೇಶಕ ಹಾಗೂ ಡಾ.ರಾಜ್ ಕುಟುಂಬಕ್ಕೆ ಹತ್ತಿರವಾಗಿದ್ದ ಪ್ರಕಾಶ್ ರಾಜ್ ಮೆಹು ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಗೊಳಿಸಿದ್ದರು.
ಈ ಫೋಟೋದಲ್ಲಿ ವಿನೋದ್ ರಾಜ್ ಅವರ ಮಗನೂ ಇದ್ದಾನೆ, ಪತ್ನಿಯೂ ಇದ್ದಾರೆ. ಮಗ ಚೆನ್ನೈನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂಬ ಮಾಹಿತಿ ನೀಡಿದ್ದ ಪ್ರಕಾಶ್ ಮೆಹು, ಮಹಾಲಿಂಗ್ ಭಾಗವತರ್ ಲೀಲಾವತಿ ಅವರ ಪತಿ ಎಂಬ ವಿಚಾರವನ್ನೂ ಹೇಳಿ ಕೆಲವು ಫೋಟೋಗಳನ್ನು ಮತ್ತು ದಾಖಲೆಗಳನ್ನು ಶೇರ್ ಮಾಡಿದ್ದರು.
ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆದ ಬಳಿಕ ಸ್ವತಃ ಲೀಲಾವತಿ ಮಗನ ಮದುವೆ ಬಗ್ಗೆ ಮೌನ ಮುರಿದಿದ್ದರು. ‘ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂಥೆಂದವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಂತರಂಗ ಕೆದಕಬೇಡಿ: ಮಗ ವಿನೋದ್ ರಾಜ್ ಗೌಪ್ಯ ಮದುವೆ ಬಗ್ಗೆ ಹಿರಿಯ ನಟಿ ಲೀಲಾವತಿ ಹೇಳಿದ್ದೇನು?
ಹೀಗಿರುವಾಗಲೇ ಪ್ರಕಾಶ್ ರಾಜ್ ಮೇಹು ಇದೀಗ ಮತ್ತೊಂದು ಪೋಸ್ಟ್ ಹಾಕಿದ್ದಾರೆ. "ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಹಾಗೆ ಆ ಇನ್ನೊಂದು ಸತ್ಯವನ್ನೂ ಒಪ್ಪಿಕೊಂಡು ಧರ್ಮರಾಯನಂತೆ ನೇರವಾಗಿ ಸ್ವರ್ಗಕ್ಕೆ ನಡೆದುಕೊಂಡೇ ಹೊರಟುಬಿಡಿ ಆ ಮಹಾಲಿಂಗ ಭಾಗವತರರ ಆತ್ಮಕ್ಕೆ ಶಾಂತಿಯಾದರು ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ. "ಯುವರಾಜ"ನಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ ಮೇಹು.