ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಗೆ ಮಾತೃವಿಯೋಗ: 93 ವರ್ಷ ವಯಸ್ಸಿನ ಫಾತಿಮಾ ನಿಧನ
ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರಿಗೆ ಮಾತೃವಿಯೋಗವಾಗಿದ್ದು, ಅವರ 93 ವರ್ಷ ವಯಸ್ಸಿನ ತಾಯಿ ಫಾತಿಮಾ ಅವರು ಇಂದು ನಿಧನರಾಗಿದ್ದಾರೆ.
Published: 21st April 2023 01:10 PM | Last Updated: 21st April 2023 01:10 PM | A+A A-

ನಟ ಮಮ್ಮುಟ್ಟಿ ಮತ್ತು ಅವರ ತಾಯಿ ಫಾತಿಮಾ
ಕೊಚ್ಚಿ: ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರಿಗೆ ಮಾತೃವಿಯೋಗವಾಗಿದ್ದು, ಅವರ 93 ವರ್ಷ ವಯಸ್ಸಿನ ತಾಯಿ ಫಾತಿಮಾ ಅವರು ಇಂದು ನಿಧನರಾಗಿದ್ದಾರೆ.
ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಫಾತಿಮಾ ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಾನಿ-ಕೀರ್ತಿ ಸುರೇಶ್ ಅಭಿನಯದ ದಸರಾ ಒಟಿಟಿ ಬಿಡುಗಡೆಗೆ ದಿನಾಂಕ ಫಿಕ್ಸ್, ಕನ್ನಡದಲ್ಲೂ ಲಭ್ಯ!
ಫಾತಿಮಾ ಇಸ್ಮಾಯಿಲ್ ಅವರು ಕೊಚ್ಚಿಯ ಚೆಂಪುವಿನ ಮೂಲದವರಾಗಿದ್ದು, ನಟ ಮಮ್ಮುಟ್ಟಿ ಸೇರಿದಂತೆ ಅವರ ಐವರು ಮಕ್ಕಳು ಅಂದರೆ ನಟ ಇಬ್ರಾಹಿಂ ಕುಟ್ಟಿ, ಜಕಾರಿಯಾ, ಅಮೀನ, ಸೌದಾ ಮತ್ತು ಶಫೀನಾ ಸೇರಿದಂತೆ ತಮ್ಮ ಮಕ್ಕಳನ್ನು ಅಗಲಿದ್ದಾರೆ. ಇಂದು ಸಂಜೆ 4:00 ಗಂಟೆಗೆ ಚೆಂಪು ಜುಮಾ ಮಸೀದಿ ಕಬ್ರಿಸ್ತಾನ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.
Spoke to @mammukka this morning to express my sincere condolences on the passing of his mother. As I have grown older I have become much closer to my own mother, & I am aware of the preciousness of this irreplaceable bond. May he find the peace of mind to cope w/his loss. pic.twitter.com/s7ThIIb8lz
— Shashi Tharoor (@ShashiTharoor) April 21, 2023
ಇನ್ನು ಫಾತಿಮಾ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಶಶಿತರೂರ್ ಕಂಬನಿ ಮಿಡಿದಿದ್ದು, ತಮ್ಮ ಟ್ವಿಟ್ಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡು, ಮಮ್ಮುಟ್ಟಿ ತಾಯಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಚಿತ್ರರಂಗ ಸೇರಿದಂತೆ ಹಲವು ರಾಜಕೀಯ ಗಣ್ಯ ವ್ಯಕ್ತಿಗಳು ಸಹ ಸಂತಾಪ ಸೂಚಿಸುತ್ತಿದ್ದಾರೆ.