ಕಾರು ಡಿಕ್ಕಿ ಪ್ರಕರಣ: ಸಿಬ್ಬಂದಿಯನ್ನು ಮನೆಗೆ ಕರೆಸಿ ಕ್ಷಮೆ ಕೇಳಿ ರಚಿತಾ ರಾಮ್; ಡಿಂಪಲ್ ಕ್ವೀನ್ ನಡೆಗೆ ವ್ಯಾಪಕ ಪ್ರಶಂಸೆ
ಇದು ಆಕಸ್ಮಿಕವಾಗಿ ನಡೆದಿರುವ ಘಟನೆ. ಈ ವಿಚಾರ ಗಮನಕ್ಕೆ ಬಂದಿರಲಿಲ್ಲ ಎಂದಿದ್ದಾರೆ. ಅಷ್ಟಲ್ಲದೆ, ರಂಗಪ್ಪ ಅವರನ್ನು ತಮ್ಮ ಮನೆಗೆ ಕರೆದು ಕ್ಷಮೆ ಕೋರಿದ್ದಾರೆ. ಈ ಸಂದರ್ಭದ ವಿಡಿಯೊವನ್ನೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Published: 16th August 2023 09:23 AM | Last Updated: 16th August 2023 03:22 PM | A+A A-

ಸಿಬ್ಬಂದಿ ಜೊತೆ ರಚಿತಾ ರಾಮ್
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ನಟಿ ರಚಿತಾ ರಾಮ್ ಸೋಮವಾರ ಆಗಮಿಸಿದ್ದರು. ಈ ವೇಳೆ ಅವರ ಕಾರು, ಸ್ವಚ್ಚತಾ ಕಾರ್ಮಿಕರೊಬ್ಬರಿಗೆ ತಾಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಇದೀಗ ಲಾಲ್‌ಬಾಗ್ ಸಿಬ್ಬಂದಿಯನ್ನ ತಮ್ಮ ಮನೆಗೆ ಕರೆಸಿ ರಚಿತಾ ಕ್ಷಮೆ ಕೋರಿದ್ದಾರೆ.
ರಚಿತಾ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿತ್ತು. ಈ ಘಟನೆ ನಡೆದಾಗ ರಚಿತಾ ರಾಮ್ ಕಾರಲ್ಲಿ ಇದ್ದರೂ, ಏನೂ ಆಗಿಯೇ ಇಲ್ಲ ಎನ್ನುವಂತೆ ಪ್ಲವರ್ ಶೋನತ್ತ ತೆರಳಿದ್ದರು. ಕಾರು ನಿಲ್ಲಿಸದೇ ಕ್ಷಮೆಯಾಚನೆಯೂ ಮಾಡದೇ ಹೊರಟ ರಚಿತಾ ಹಾಗೂ ಡ್ರೈವರ್ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ರಚಿತಾ ರಾಮ್ ಸಿಬ್ಬಂದಿಯನ್ನು ಮನೆಗೆ ಕರೆಸಿ ಕ್ಷಮೆ ಕೇಳಿದ್ದಾರೆ.
ಇದು ಆಕಸ್ಮಿಕವಾಗಿ ನಡೆದಿರುವ ಘಟನೆ. ಈ ವಿಚಾರ ಗಮನಕ್ಕೆ ಬಂದಿರಲಿಲ್ಲ ಎಂದಿದ್ದಾರೆ. ಅಷ್ಟಲ್ಲದೆ, ರಂಗಪ್ಪ ಅವರನ್ನು ತಮ್ಮ ಮನೆಗೆ ಕರೆದು ಕ್ಷಮೆ ಕೋರಿದ್ದಾರೆ. ಈ ಸಂದರ್ಭದ ವಿಡಿಯೊವನ್ನೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಲಾಲ್‌ಬಾಗ್ ಸಿಬ್ಬಂದಿಗೆ ಗುದ್ದಿದ ರಚಿತಾ ರಾಮ್ ಕಾರು: ಕಾರ್ಮಿಕನನ್ನು ಮಾತನಾಡಿಸುವ ಸೌಜನ್ಯ ತೋರದ ನಟಿ!
ವಿಡಿಯೊದಲ್ಲಿ ರಂಗಪ್ಪ ಅವರಲ್ಲಿ ಕ್ಷಮೆ ಕೇಳುವ ರಚಿತಾ, ಇನ್ನುಮುಂದೆ ಹೀಗಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ. ರಚಿತಾ ರಾಮ್ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Each life is made up of mistakes and learning, waiting and growing , practising patience and being persistent.
— Rachita Ram (@RachitaRamDQ) August 15, 2023
ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು pic.twitter.com/dzP04G72jA
ನನ್ನ ಕಾರು ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ನೆನ್ನೆ ಇದು ಆಕಸ್ಮಿಕವಾಗಿ ನಡೆದ ಘಟನೆ ಆಗ ನನಗೆ ಗೊತ್ತಾಗಲಿಲ್ಲ ಎಂದು ಹೇಳಿ ನಟಿ ರಚಿತಾ ರಾಮ್ ಕ್ಷಮೆಯಾಚಿಸಿದ್ದಾರೆ.