ಹೊಸ ಮತ್ತು ಅನುಭವಿ ಕಲಾವಿದರೊಂದಿಗೆ 'ಯಥಾಭವ' ಚಿತ್ರದಲ್ಲಿ ಕೆಲಸ ಮಾಡುವುದು ಸಂತೋಷ ತಂದಿದೆ: ದತ್ತಣ್ಣ

ಗೌತಮ್ ಬಸವರಾಜ್ ನಿರ್ದೇಶನ ಮತ್ತು ನಿರ್ಮಾಣದ 'ಯಥಾಭವ' ಚಿತ್ರದ ಚಿತ್ರೀಕರಣ ಮುಗಿದಿದೆ. ಸದ್ಯಕ್ಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಂಬೈ ಮತ್ತು ಹೈದರಾಬಾದ್‌ನಲ್ಲಿ ನಡೆಯುತ್ತಿದೆ.
ಯಥಾಭವ ಚಿತ್ರದ ಸ್ಟಿಲ್
ಯಥಾಭವ ಚಿತ್ರದ ಸ್ಟಿಲ್

ಗೌತಮ್ ಬಸವರಾಜ್ ನಿರ್ದೇಶನ ಮತ್ತು ನಿರ್ಮಾಣದ 'ಯಥಾಭವ' ಚಿತ್ರದ ಚಿತ್ರೀಕರಣ ಮುಗಿದಿದೆ. ಸದ್ಯಕ್ಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಂಬೈ ಮತ್ತು ಹೈದರಾಬಾದ್‌ನಲ್ಲಿ ನಡೆಯುತ್ತಿದೆ.

'ಕಳೆದ ವರ್ಷ ಈ ಚಿತ್ರದ ಸ್ಕ್ರಿಪ್ಟ್ ಅನ್ನು ಹೈದರಾಬಾದ್‌ನಲ್ಲಿ ಮುಗಿಸಿದ್ದೆ. ನಂತರ ಚಿತ್ರೀಕರಣದ ಪ್ರಕ್ರಿಯೆ ಶುರುವಾಯಿತು. ಎಪ್ಪತ್ತೊಂದು ದಿನಗಳಲ್ಲಿ ಚಿತ್ರೀಕರಣ ಮುಗಿಸಿದೆವು' ಎಂದು ಗೌತಮ್ ಯಥಾಭವದ ಬಗ್ಗೆ ಮಾಹಿತಿ ನೀಡುತ್ತಾರೆ.

ಯಥಾಭವವು ನ್ಯಾಯಾಲಯಕ್ಕೆ ಸಂಬಂಧಿಸಿದ ಸಿನಿಮಾ ಆಗಿದ್ದು, ಹಿರಿಯ ನಟ ದತ್ತಣ್ಣ ಅವರು ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಯಥಾಭವದ ಕುರಿತು ಇತ್ತೀಚೆಗೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ದತ್ತಣ್ಣ, ಹೊಸ ಪ್ರತಿಭೆಗಳು ಚಿತ್ರದ ಮೂಲಕ ಹೊರಹೊಮ್ಮುತ್ತಿದ್ದಾರೆ ಮತ್ತು ಹೊಸ ಚಿತ್ರಗಳು ಯಶಸ್ವಿಯಾಗುತ್ತಿವೆ. ಹೊಸ ಮತ್ತು ಅನುಭವಿ ನಟರ ಮಿಶ್ರಣದೊಂದಿಗೆ ಕೆಲಸ ಮಾಡುವುದು ಸಂತೋಷವಾಗಿದೆ ಎಂದು ಹೇಳಿದರು.

ಗೋಪಾಲಕೃಷ್ಣ ದೇಶಪಾಂಡೆ ಮತ್ತು ಬಾಲ ರಾಜವಾಡಿ ಕ್ರಮವಾಗಿ ವಕೀಲ ಮತ್ತು ಸಚಿವರ ಪಾತ್ರವನ್ನು ನಿರ್ವಹಿಸಿದ್ದಾರೆ. ಮಚ್ತ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸುಜಾತಾ ಕುಮಾರಿ ಮತ್ತು ಅನಿಲ್ ಕುಮಾರ್ ಬಿಎಸ್ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದಲ್ಲಿ ನಟರಾದ ಪವನ್ ಶಂಕರ್ ಮತ್ತು ಸಹನಾ ಸುಧಾಕರ್ ನಾಯಕ-ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೌತಮ್ ಸುಧಾಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com