ಜೈಲರ್ ಸಿನಿಮಾ ಬಳಿಕ ಹೆಚ್ಚಿದ ಕ್ರೇಜ್; ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ನಟ ಶಿವರಾಜ್‌ಕುಮಾರ್
ನಟ ಶಿವರಾಜ್‌ಕುಮಾರ್ ಜೈಲರ್ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಸಿನಿಮಾ ಬಿಡುಗಡೆ ನಂತರ ವ್ಯಾಪಕ ಮೆಚ್ಚುಗೆ ಗಳಿಸಿದ್ದರು. ಶಿವಣ್ಣ ಅವರಿಗೆ ದಕ್ಷಿಣ ಚಿತ್ರರಂಗದ ವಿವಿಧ ಭಾಷೆಗಳಿಂದ ಹಲವು ಆಫರ್‌ಗಳು ಕೈಬೀಸಿ ಕರೆಯುತ್ತಿವೆ. ಇತ್ತೀಚಿನ ಮಾಹಿತಿ ಏನೆಂದರೆ, ಶಿವಣ್ಣ ಅವರು ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
Published: 29th August 2023 10:21 AM | Last Updated: 29th August 2023 02:45 PM | A+A A-

ಶಿವರಾಜ್‌ಕುಮಾರ್
ಚಿತ್ರೋದ್ಯಮದಲ್ಲಿ ತಮ್ಮ 36ನೇ ವರ್ಷವನ್ನು ಆಚರಿಸುತ್ತಿರುವ ನಟ ಶಿವರಾಜ್‌ಕುಮಾರ್, ಜೈಲರ್ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಸಿನಿಮಾ ಬಿಡುಗಡೆ ನಂತರ ವ್ಯಾಪಕ ಮೆಚ್ಚುಗೆಯನ್ನು ಗಳಿಸಿ, ಹೊಸ ಅಭಿಮಾನಿ ಬಳಗದ ಉದಯಕ್ಕೆ ಕಾರಣರಾಗಿದ್ದರು. ಪ್ರೀತಿಯು ಭಾಷೆ ಮತ್ತು ಪ್ರದೇಶಗಳನ್ನು ಮೀರಿದ್ದು, ಶಿವಣ್ಣ ಅವರಿಗೆ ದಕ್ಷಿಣ ಚಿತ್ರರಂಗದ ವಿವಿಧ ಭಾಷೆಗಳಿಂದ ಹಲವು ಆಫರ್‌ಗಳು ಕೈಬೀಸಿ ಕರೆಯುತ್ತಿವೆ. ಇತ್ತೀಚಿನ ಮಾಹಿತಿ ಏನೆಂದರೆ, ಶಿವಣ್ಣ ಅವರು ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಫೋಟೊವೊಂದು ಹೊರಬಿದ್ದಿದ್ದು, ಶಿವರಾಜ್‌ಕುಮಾರ್ ಅವರ ಮುಂದಿನ ನಡೆ ಬಗ್ಗೆ ಒಂದು ಇಣುಕುನೋಟವನ್ನು ನೀಡುತ್ತದೆ. ಫೋಟೊದಲ್ಲಿ ದಿ ಕೇರಳ ಸ್ಟೋರಿ ನಿರ್ದೇಶಕ ಸುದೀಪ್ತೋ ಸೇನ್, ಎನ್‌ಎಸ್ ರಾಜ್‌ಕುಮಾರ್, ನಟ ಶಿವರಾಜ್‌ಕುಮಾರ್ ಅವರ ನಿವಾಸದಲ್ಲಿರುವುದು ಪತ್ತೆಯಾಗಿದೆ.
ಕುತೂಹಲಕಾರಿ ಹಿಂದಿ ಸಿನಿಮಾವೊಂದಕ್ಕೆ ನಟ ಮತ್ತು ನಿರ್ದೇಶಕರ ನಡುವಿನ ಮೊದಲ ಸುತ್ತಿನ ಚರ್ಚೆ ಇದಾಗಿದೆ ಎಂದು ವಿಶ್ವಾಸಾರ್ಹ ಮೂಲವೊಂದು ಬಹಿರಂಗಪಡಿಸಿದೆ. ಶಿವಣ್ಣ ಅವರು ಈ ಸಿನಿಮಾಗೆ ಆಸಕ್ತಿ ತೋರಿದ್ದು, ಅವರ ದಿನಾಂಕಗಳು ಮತ್ತು ಇತರ ವಾಣಿಜ್ಯಿಕ ಅಂಶಗಳ ಲೆಕ್ಕಾಚಾರದೊಂದಿಗೆ ಶೀಘ್ರದಲ್ಲೇ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜೈಲರ್: ಶಿವಣ್ಣನ ಅಭಿನಯಕ್ಕೆ ಮನಸೋತ ಪರಭಾಷಿಕರು! ಹೊಸ ಅಭಿಮಾನಿ ಬಳಗ ಉದಯ
ಅದಾ ಶರ್ಮಾ ನಾಯಕಿಯಾಗಿ ನಟಿಸಿದ ದಿ ಕೇರಳ ಸ್ಟೋರಿ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿತ್ತು. ಇದೀಗ, ಅವರ ಮುಂದಿನ ನಡೆ ಏನು?, ಶಿವರಾಜ್‌ಕುಮಾರ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ನಿರೀಕ್ಷೆ ಮನೆಮಾಡಿದೆ. ಮುಂಬರುವ ತಮಿಳು ಚಿತ್ರ, ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲೂ ಶಿವರಾಜಕುಮಾರ್ ಅವರು ಧನುಷ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅವರ ಶ್ರೀನಿ ನಿರ್ದೇಶನದ ಘೋಸ್ಟ್ ಸಿನಿಮಾ ಅಕ್ಟೋಬರ್ 19 ರಂದು ತೆರೆಗೆ ಬರಲಿದೆ. ಇದರೊಂದಿಗೆ, ಯೋಗರಾಜ ಭಟ್ಟರ ಕರಟಕ ಧಮನಕ, 45, ಮತ್ತು ಭೈರತಿ ರಣಗಲ್ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.