'ಸಾಕಷ್ಟು ನಡೆಯುತ್ತಿದೆ, ಆದರೆ ಇದು ಮಾತ್ರ ತುಂಬಾನೇ ಸ್ಪೆಷಲ್, ಸದ್ಯದಲ್ಲೇ ತಿಳಿಸುವೆ': ವಿಜಯ್ ದೇವರಕೊಂಡ ಪೋಸ್ಟ್ ಅರ್ಥವೇನು?

ಟಾಲಿವುಡ್ ನಲ್ಲಿ ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಿಟ್ ಜೋಡಿ. ತಮ್ಮ ಗೀತ ಗೋವಿಂದಂ ಚಿತ್ರದ ಯಶಸ್ಸಿನ ಮೂಲಕ ಜನಪ್ರಿಯರಾದರು. ಆ ಚಿತ್ರದ ಐದನೇ ವಾರ್ಷಿಕೋತ್ಸವ ಸಂಭ್ರಮವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. 
ವಿಜಯ್ ದೇವರಕೊಂಡ ಹಂಚಿಕೊಂಡ ಪೋಸ್ಟರ್
ವಿಜಯ್ ದೇವರಕೊಂಡ ಹಂಚಿಕೊಂಡ ಪೋಸ್ಟರ್

ಟಾಲಿವುಡ್ ನಲ್ಲಿ ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಿಟ್ ಜೋಡಿ. ತಮ್ಮ ಗೀತ ಗೋವಿಂದಂ ಚಿತ್ರದ ಯಶಸ್ಸಿನ ಮೂಲಕ ಜನಪ್ರಿಯರಾದರು. ಆ ಚಿತ್ರದ ಐದನೇ ವಾರ್ಷಿಕೋತ್ಸವ ಸಂಭ್ರಮವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. 

ಇದೀಗ ನಿನ್ನೆ ವಿಜಯ ದೇವರಕೊಂಡ ಇನ್ಸ್ಟಾಗ್ರಾಂನಲ್ಲಿ ಒಂದು ಸ್ಟೇಟಸ್ ಹಾಕಿದ್ದಾರೆ. ಅದರಲ್ಲಿ ಹುಡುಗ ಮತ್ತು ಹುಡುಗಿ ಕೈಯನ್ನು ಒಬ್ಬರಿಗೊಬ್ಬರು ಹಿಡಿದುಕೊಂಡು "ಸಾಕಷ್ಟು ನಡೆಯುತ್ತಿದೆ ಆದರೆ ಇದು ನಿಜವಾಗಿಯೂ ವಿಶೇಷವಾಗಿದೆ- ಶೀಘ್ರದಲ್ಲೇ ತಿಳಿಸುವೆ" ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಸ್ಟೇಟಸ್ ಹೊರಬರುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಸಾಕಷ್ಟು ಮಾತನಾಡಿಕೊಳ್ಳುತ್ತಿದ್ದಾರೆ. ಇಬ್ಬರೂ ಸೇರಿ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಬಹುತೇಕರು ಹೇಳಿಕೊಂಡರೆ ಇನ್ನು ಕೆಲವರು ಇಬ್ಬರೂ ಮದುವೆಯಾಗುತ್ತಿದ್ದಾರೆಯೇ ಎಂದು ಕಮೆಂಟ್ ಮಾಡುತ್ತಿದ್ದಾರೆ.

ವಿಜಯ್ ದೇವರಕೊಂಡ-ರಶ್ಮಿಕಾ ಡೇಟಿಂಗ್ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com