ಸೋಲದೇವನಹಳ್ಳಿಯಲ್ಲಿ ನನ್ನ ತಾಯಿಗೋಸ್ಕರ ದೇವಸ್ಥಾನ ಕಟ್ಟಿಸುತ್ತೇನೆ: ವಿನೋದ್ ರಾಜ್

ಅಮ್ಮ ಕಷ್ಟಪಟ್ಟು ಬೆಳೆಸಿದ, ಜೀವನವನ್ನು ಸವೆಸಿದ ಸೋಲದೇವನಹಳ್ಳಿಯಲ್ಲಿ ನನ್ನದೇ ಆದ ರೀತಿಯಲ್ಲಿ ಪುಟ್ಟ ದೇವಸ್ಥಾನ ಕಟ್ಟಿಸಿ ನಿತ್ಯವೂ ಹೋಗಿ ಅಮ್ಮನನ್ನು ಪೂಜಿಸಿ, ಭಕ್ತಿಯಿಂದ ನಮಸ್ಕರಿಸಿ ಬರುತ್ತೇನೆ. ತಾಯಿಯನ್ನು ಪೂಜೆ ಮಾಡಲು ನನಗೆ ತುಂಬಾ ಇಷ್ಟ, ದಿನಾ ಅವರ ದರ್ಶನ ಮಾಡಿ ನನ್ನ ಜೀವನ ಕಳೆಯುತ್ತೇನೆ ಎನ್ನುತ್ತಾರೆ ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜ್.
ವಿನೋದ್ ರಾಜ್-ನಟಿ ಲೀಲಾವತಿ(ಸಂಗ್ರಹ ಚಿತ್ರ)
ವಿನೋದ್ ರಾಜ್-ನಟಿ ಲೀಲಾವತಿ(ಸಂಗ್ರಹ ಚಿತ್ರ)

ಬೆಂಗಳೂರು: ಅಮ್ಮ ಕಷ್ಟಪಟ್ಟು ಬೆಳೆಸಿದ, ಜೀವನವನ್ನು ಸವೆಸಿದ ಸೋಲದೇವನಹಳ್ಳಿಯಲ್ಲಿ ನನ್ನದೇ ಆದ ರೀತಿಯಲ್ಲಿ ಪುಟ್ಟ ದೇವಸ್ಥಾನ ಕಟ್ಟಿಸಿ ನಿತ್ಯವೂ ಹೋಗಿ ಅಮ್ಮನನ್ನು ಪೂಜಿಸಿ, ಭಕ್ತಿಯಿಂದ ನಮಸ್ಕರಿಸಿ ಬರುತ್ತೇನೆ. ತಾಯಿಯನ್ನು ಪೂಜೆ ಮಾಡಲು ನನಗೆ ತುಂಬಾ ಇಷ್ಟ, ದಿನಾ ಅವರ ದರ್ಶನ ಮಾಡಿ ನನ್ನ ಜೀವನ ಕಳೆಯುತ್ತೇನೆ ಎನ್ನುತ್ತಾರೆ ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜ್.

ಅಮ್ಮನ ಜೊತೆ ಇಷ್ಟು ವರ್ಷಗಳ ಕಾಲ ಒಡನಾಟ, ಬಾಂಧವ್ಯ ಇದ್ದುದರಿಂದಲೇ ಬಡವರು, ಕಷ್ಟದಲ್ಲಿರುವವರು, ಪ್ರಾಣಿಗಳ ಬಗ್ಗೆ ಕರುಣೆ ಉಂಟಾಗಿರುವುದು. ಅನುಕಂಪ, ಪ್ರೀತಿ ಅಮ್ಮ ನನಗೆ ಹೇಳಿಕೊಟ್ಟ ಪಾಠ, ನನ್ನ ತಾಯಿಯವರು ನನ್ನನ್ನು ನಿಮಗೆ ಒಪ್ಪಿಸಿ ಹೋಗಿದ್ದಾರೆ, ನಿಮ್ಮ ಜೊತೆಯಲ್ಲಿ ಅವರಿದ್ದಾರೆ, ಅಭಿಮಾನಿಗಳಲ್ಲಿ ಅವರನ್ನು ಕಾಣುತ್ತೇನೆ, ನನ್ನ ಜನ್ಮ ಸಾರ್ಥಕ ಎನಿಸುತ್ತದೆ ಎಂದರು.

ನಟಿ ಲೀಲಾವತಿಯವರು ವಯೋಸಹಜ ಕಾಯಿಲೆಯಿಂದ ತಮ್ಮ 85ನೇ ವರ್ಷದಲ್ಲಿ ನಿಧನರಾಗಿದ್ದು ಇಂದಿಗೆ ಮೂರು ದಿನವಾಗಿದೆ. ಈ ತೀರಿಕೊಂಡು ಮೂರು ದಿನವಾದ ಹಿನ್ನೆಲೆಯಲ್ಲಿ ಇಂದು ಕುಟುಂಬಸ್ಥರು ಹಾಲು-ತುಪ್ಪ ಕಾರ್ಯ ನೆರವೇರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com