ನಾನೊಬ್ಬ ಆಕಸ್ಮಿಕ ಚಿತ್ರ ನಿರ್ದೇಶಕ ಎನ್ನುತ್ತಾರೆ 'Chaos' ನಿರ್ದೇಶಕ ಜಿವಿ ಪ್ರಸಾದ್

ವೃತ್ತಿಯಲ್ಲಿ ವೈದ್ಯರಾಗಿರುವ ಜಿವಿ ಪ್ರಸಾದ್ ಅವರು ಇದೀಗ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು, ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಕ್ಷಿತ್ ಶಶಿಕುಮಾರ್ ಮತ್ತು ಅದಿತಿ ಪ್ರಭುದೇವ ಅಭಿನಯದ ಅವರ ಮೊದಲ ಚಿತ್ರ ಫೆಬ್ರುವರಿ 17 ರಂದು ಬಿಡುಗಡೆಯಾಗಲಿದೆ.
ಖೆಯೊಸ್ ಚಿತ್ರದ ಸ್ಟಿಲ್
ಖೆಯೊಸ್ ಚಿತ್ರದ ಸ್ಟಿಲ್

ವೃತ್ತಿಯಲ್ಲಿ ವೈದ್ಯರಾಗಿರುವ ಜಿವಿ ಪ್ರಸಾದ್ ಅವರು ಇದೀಗ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು, ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅಕ್ಷಿತ್ ಶಶಿಕುಮಾರ್ ಮತ್ತು ಅದಿತಿ ಪ್ರಭುದೇವ ಅಭಿನಯದ ಅವರ ಮೊದಲ ಚಿತ್ರ ಫೆಬ್ರುವರಿ 17 ರಂದು ಬಿಡುಗಡೆಯಾಗಲಿದೆ.

ಚಿತ್ರತಂಡ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು, ತಮಿಳು ನಟ ವಿಶಾಲ್ ಅವರಿಂದ ಸೋಮವಾರ ಅನಾವರಣಗೊಳಿಸಿತು. 

ಪ್ರಸಾದ್ ಪ್ರಕಾರ, ಖೆಯೊಸ್ ಅನ್ನು 'ಮಾನವ ಮನಸ್ಸಿನ ಗೊಂದಲಗಳ' ಕಥೆ ಎಂದು ಉಲ್ಲೇಖಿಸಲಾಗುತ್ತದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಇದು ವೈದ್ಯಕೀಯ ಕ್ಯಾಂಪಸ್‌ನಲ್ಲಿ ಮತ್ತು ಸುತ್ತಮುತ್ತ ನಡೆಯುವ ಚಿತ್ರವಾಗಿದೆ. ಚಿತ್ರದಲ್ಲಿ ಪ್ರಮುಖರು ಸೇರಿದಂತೆ ಇಡೀ ನಟರು ವೈದ್ಯಕೀಯ ವಿದ್ಯಾರ್ಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ, ಈ ಕಥೆಯನ್ನು ಅವರು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಅಭಿವೃದ್ಧಿಪಡಿಸಿದ್ದಾಗಿ ಹೇಳಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿರುವ ನಮಗೆ ಕೊಲೆ ಪ್ರಕರಣಗಳು ಆಗಾಗ ಎದುರಾಗುತ್ತಿದ್ದು, ಕೊಲೆಯನ್ನು ಮುಚ್ಚಿಹಾಕಲು ಜನರು ಯಾವ ಮಟ್ಟಕ್ಕೆ ಹೋಗುತ್ತಾರೆ ಎಂಬುದು ಯಾವಾಗಲೂ ಕುತೂಹಲಕಾರಿಯಾಗಿತ್ತು. ಮತ್ತು ಕೊಲೆಗಾರನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲು ನನನಗೆ ಯಾವಾಗಲೂ ಕುತೂಹಲವಿರುತ್ತಿತ್ತು. 'ಒಂದು ವೇಳೆ ಕೊಲೆಗಾರ ಸ್ವತಃ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರೆ, ತಪ್ಪು ಮಾಡುವ ಅಥವಾ ಸುಳಿವು ಬಿಟ್ಟುಬಿಡುವ ಸಾಧ್ಯತೆ ಕಡಿಮೆಯಿದ್ದರೆ?'. ಇಂತಹ ಪ್ರಕರಣಗಳಲ್ಲಿ ಅಪರಾಧಿಯನ್ನು ಕಂಡುಹಿಡಿಯುವುದು ಎಷ್ಟು ಕಷ್ಟ?' ಈ ಪ್ರಶ್ನೆಗಳು ನನ್ನನ್ನು ಗೊಂದಲಕ್ಕೀಡುಮಾಡಿತು' ಎಂದು ಅವರು ಹೇಳುತ್ತಾರೆ.

ಪ್ರಸಾದ್ ಹೇಳುವಂತೆ ಚಿತ್ರ ನಿರ್ದೇಶನದ ಬಗ್ಗೆ ಅವರ ಒಲವು ಮೂಲತಃ ಚಲನಚಿತ್ರಗಳನ್ನು ನೋಡುವುದರಿಂದ ಬಂದಿದೆ. 'ಬಾಲ್ಯದಿಂದಲೂ, ನಾನು ಚಲನಚಿತ್ರಗಳನ್ನು ನೋಡುವುದನ್ನು ಆನಂದಿಸುತ್ತಿದ್ದೆ ಮತ್ತು ನಾವು ವಿವಿಧ ರೀತಿಯ ಭಾವನೆಗಳನ್ನು ಅನುಭವಿಸುವ ಏಕೈಕ ವೇದಿಕೆ ಸಿನಿಮಾ ಆಗಿದೆ. ಹೇಗೋ, ನಾನು ವೈದ್ಯನಾಗುವ ಮೊದಲು ಸಿನಿಮಾಗಳೊಂದಿಗೆ ಸಂಪರ್ಕ ಹೊಂದಿದ್ದೆ. ಆದರೆ, ಸಿನಿಮಾ ನಿರ್ದೇಶನ ಆಕಸ್ಮಿಕ. ನಾನು ಒಬ್ಬ ವ್ಯಕ್ತಿಗೆ ಕಥೆಯನ್ನು ಹೇಳಿದಾಗ ಇದು ಪ್ರಾರಂಭವಾಯಿತು. ಅವರು ಅದರಿಂದ ಪ್ರಭಾವಿತರಾದರು ಮತ್ತು ಅದನ್ನು ನನ್ನಿಂದ ಖರೀದಿಸಲು ಬಯಸಿದ್ದರು. ಆದರೆ, ನನ್ನ ಸ್ನೇಹಿತರು ನಾನೇ ನಿರ್ದೇಶನ ಮಾಡುವಂತೆ ಸಲಹೆ ನೀಡಿದರು' ಎಂದು ಹೇಳುತ್ತಾರೆ.

ನಂತರ ನನಗೆ ಅಕ್ಷಿತ್ ಅವರ ತಂದೆ ಶಶಿಕುಮಾರ್ ಅವರನ್ನು ಭೇಟಿಯಾಗಿ ಕಥೆ ಹೇಳಲು ಅವಕಾಶ ಸಿಕ್ಕಿತು. ಅವರು ತಮ್ಮ ಮಗನಿಗೆ ಸಿನಿಮಾವನ್ನು ನಿರ್ದೇಶಿಸುವ ಅವಕಾಶವನ್ನು ನನಗೆ ನೀಡಿದರು. ನಿರ್ದೇಶನವು ನನ್ನ ಮನಸ್ಸಿನಲ್ಲಿ ಇರಲಿಲ್ಲ. ಆದರೆ, ನನ್ನ ಸುತ್ತಲಿನ ಜನರಿಂದ ನಾನು ಪಡೆದ ಆತ್ಮವಿಶ್ವಾಸವು ಖೆಯೊಸ್ ಅನ್ನು ನಿರ್ದೇಶಿಸಲು ನನಗೆ ಸಹಾಯ ಮಾಡಿತು. ನಾನು ಸಣ್ಣ ಕಥೆಗಳನ್ನು ಬರೆಯುವ ಅಭ್ಯಾಸವನ್ನು ಹೊಂದಿದ್ದೇನೆ ಮತ್ತು ಇದು ಚಿತ್ರಕಥೆ ಮತ್ತು ಸಂಭಾಷಣೆಯ ತಾಂತ್ರಿಕತೆಯನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿತು ಎನ್ನುತ್ತಾರೆ.

ಕಥೆಗೆ ಪ್ರಸಿದ್ಧ ನಟರು ಅಥವಾ ದೊಡ್ಡ ಬಜೆಟ್ ಅಗತ್ಯವಿಲ್ಲ ಎನ್ನುವ ಅವರು, 'ಈ ಚಿತ್ರವು ನನಗೆ ಒಂದು ಪರೀಕ್ಷೆಯಾಗಿದೆ ಮತ್ತು ನಾನು ಕಡಿಮೆ ಬಜೆಟ್‌ನಲ್ಲಿ ಚಲನಚಿತ್ರವನ್ನು ಮಾಡಲು ಮತ್ತು ಕಡಿಮೆ ಖ್ಯಾತಿಯನ್ನು ಹೊಂದಿರುವ ನಟರೊಂದಿಗೆ ಕೆಲಸ ಮಾಡಲು ನಿರ್ಧರಿಸಿದೆ ಎಂದು ಹೇಳುತ್ತಾರೆ.

ಖೆಯೊಸ್ ಅನ್ನು ದಿ ಬ್ಲ್ಯಾಕ್ ಪೆಬಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಪಾರುಲ್ ಅಗರವಾಲ್ ಮತ್ತು ಹೇಮಚಂದ್ರ ರೆಡ್ಡಿ ನಿರ್ಮಿಸಿದ್ದಾರೆ. ವಿಜಯ್ ಹರಿತ್ಸಾ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ದಿಲೀಪ್ ಕುಮಾರ್ ಮತ್ತು ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣವಿದೆ. ಬಿ ಕುಮಾರ್ ಅವರು ಖೆಯೊಸ್‌ನ ವಿತರಣೆ ಹಕ್ಕು ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com