17 ನೇ ವರ್ಷದಲ್ಲಿ ಅಣ್ಣನ ರಿವಾಲ್ವರ್ ನಿಂದ ಜೀವನ ಅಂತ್ಯಗೊಳಿಸಲು ನಿರ್ಧರಿಸಿದ್ದೆ; ಚಿರಂಜೀವಿಗಾಗಿ ಬದುಕುಳಿದೆ- ಪವನ್ ಕಲ್ಯಾಣ್

ನಾನು ಸೋಶಿಯಲ್ ವ್ಯಕ್ತಿ ಅಲ್ಲ. 17ನೇ ವಯಸ್ಸಿಗೆ ಪರೀಕ್ಷೆ ನನ್ನನ್ನು ಡಿಪ್ರೆಶನ್‌ಗೆ ಹೋಗುವಂತೆ ಮಾಡಿತು. ಅಣ್ಣ ಚಿರಂಜೀವಿ ಮನೆಯಲ್ಲಿ ಇಲ್ಲದಿರುವಾಗ ಅವನ ಬಳಿ ಇದ್ದ ಲೈಸೆನ್ಸ್‌ ಗನ್‌ನಿಂದ ನಾನು ನನ್ನ ಜೀವನವನ್ನು ಮುಗಿಸಿಕೊಳ್ಳಬೇಕು ಎಂದುಕೊಂಡಿದ್ದೆ
ಚಿರಂಜೀವಿ ಮತ್ತು ಪವನ್ ಕಲ್ಯಾಣ್
ಚಿರಂಜೀವಿ ಮತ್ತು ಪವನ್ ಕಲ್ಯಾಣ್

ಹೈದರಾಬಾದ್: ಖಿನ್ನತೆಯೊಂದಿಗಿನ ನನ್ನ ಹೋರಾಟವು ಅಪಾರವಾಗಿತ್ತು, ಆದರೆ ನಾನು ಅದರ ವಿರುದ್ಧ ಹೋರಾಡಿದೆ ಎಂದು ತೆಲುಗು ಚಿತ್ರರಂಗದ 'ಪವರ್ ಸ್ಟಾರ್' ಪವನ್ ಕಲ್ಯಾಣ್ ಹೇಳಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರ ಟಾಕಿಂಗ್ ಶೋನಲ್ಲಿ ಅತಿಥಿಯಾಗಿ ಬಂದ ಪವನ್ ಕಲ್ಯಾಣ್ ಅವರು ಡಿಪ್ರೆಶನ್ ಬಗ್ಗೆ ಮಾತನಾಡಿದ್ದಾರೆ. ನಾನು ಆಸ್ತಮಾ ರೋಗಿ, ಆಗಾಗ್ಗೆ ಆಸ್ಪತ್ರೆಗೆ ದಾಖಲಾಗುವ ಕಾರಣದಿಂದಾಗಿ ನಾನು ಪ್ರತ್ಯೇಕವಾಗಿರುತ್ತಿದ್ದೆ. ನಾನು ಸೋಶಿಯಲ್ ವ್ಯಕ್ತಿ ಅಲ್ಲ. 17ನೇ ವಯಸ್ಸಿಗೆ ಪರೀಕ್ಷೆ ನನ್ನನ್ನು ಡಿಪ್ರೆಶನ್‌ಗೆ ಹೋಗುವಂತೆ ಮಾಡಿತು. ಅಣ್ಣ ಚಿರಂಜೀವಿ ಮನೆಯಲ್ಲಿ ಇಲ್ಲದಿರುವಾಗ ಅವನ ಬಳಿ ಇದ್ದ ಲೈಸೆನ್ಸ್‌ ಗನ್‌ನಿಂದ ನಾನು ನನ್ನ ಜೀವನವನ್ನು ಮುಗಿಸಿಕೊಳ್ಳಬೇಕು ಎಂದುಕೊಂಡಿದ್ದೆ ಎಂದು ನೆನೆನಪಿಸಿಕೊಂಡಿದ್ದಾರೆ.

ನನ್ನ ಹಿರಿಯ ಸಹೋದರ (ನಾಗಬಾಬು) ಮತ್ತು ಅತ್ತಿಗೆ (ಸುರೇಖಾ) ಅವರ ಸಮಯೋಚಿತ ಪ್ರವೇಶದಿಂದ ನಾನು ಬದುಕುಳಿದೆ. "ಚಿರಂಜೀವಿ ನನ್ನ ಹತ್ತಿರ ಬಂದು ನನಗಾಗಿ ಬದುಕು ಅಂತ ಕೇಳಿಕೊಂಡರು, ನೀನು ಏನು ಮಾಡದಿದ್ದರೂ ಪರವಾಗಿಲ್ಲ. ಆದರೆ ಬದುಕು ಅಂತ ಹೇಳಿದ್ದರು. ಆಗಿನಿಂದ ನಾನು ಪುಸ್ತಕ ಓದೋದು, ಸಂಗೀತ ಆಲಿಸಲು, ಮಾರ್ಶಿಯಲ್ ಆರ್ಟ್ಸ್ ಕಲಿಯಲು ಆರಂಭಿಸಿದೆ" ಎಂದಿದ್ದಾರೆ ಪವನ್ ಕಲ್ಯಾಣ್

ಇಂದು ಪವನ್ ಕಲ್ಯಾಣ್ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ, ನಿಮ್ಮನ್ನು ನೀವು ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ಕಠಿಣ ಪರಿಶ್ರಮದಿಂದ ಜ್ಞಾನ, ಯಶಸ್ಸು ಬರುತ್ತದೆ. ಇವತ್ತು ಏನು ಕಲಿಯುತ್ತೇವೆಯೋ ನಾಳೆ ಅದೇ ಆಗುತ್ತೇವೆ. ನಿಮಗೆ ಎಷ್ಟಾಗತ್ತೋ ಅಷ್ಟು ಉತ್ತಮರಾಗಿ" ಎಂದಿದ್ದಾರೆ ಪವನ್ ಕಲ್ಯಾಣ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com