'ಬಾಕ್ಸ್ ಆಫೀಸ್ ಯಶಸ್ಸು ಚಿತ್ರದ ಮೌಲ್ಯವನ್ನು ಪ್ರತಿಬಿಂಬಿಸುವುದಿಲ್ಲ': ನಟ ವಿಜಯ್ ಸೇತುಪತಿ

ಶುಕ್ರವಾರ ಚೆನ್ನೈನಲ್ಲಿ ನಡೆದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ 11 ನೇ ಆವೃತ್ತಿಯ ThinkEdu Conclave 2023ರಲ್ಲಿ ನಟ ವಿಜಯ್ ಸೇತುಪತಿ ಬಾಕ್ಸ್ ಆಫೀಸ್ ಚರ್ಚೆಗಳಿಂದ ಸಿನಿಮಾದ ಬಗ್ಗೆ ಬದಲಾಗುತ್ತಿರುವ ಗ್ರಹಿಕೆಗಳವರೆಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು.
ನಟ ವಿಜಯ್ ಸೇತುಪತಿ
ನಟ ವಿಜಯ್ ಸೇತುಪತಿ

ಚೆನ್ನೈ: ಶುಕ್ರವಾರ ಚೆನ್ನೈನಲ್ಲಿ ನಡೆದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ 11 ನೇ ಆವೃತ್ತಿಯ ThinkEdu Conclave 2023ರಲ್ಲಿ ನಟ ವಿಜಯ್ ಸೇತುಪತಿ ಬಾಕ್ಸ್ ಆಫೀಸ್ ಚರ್ಚೆಗಳಿಂದ ಸಿನಿಮಾದ ಬಗ್ಗೆ ಬದಲಾಗುತ್ತಿರುವ ಗ್ರಹಿಕೆಗಳವರೆಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು.

ಪ್ರೈಮ್ ವಿಡಿಯೋ ಸರಣಿ ಫರ್ಝಿಯಲ್ಲಿನ ನಟನೆಗಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿರುವ ನಟ, ಕಳೆದ ನಾಲ್ಕೈದು ವರ್ಷಗಳಿಂದ ತನ್ನನ್ನು ತಾನು ತೆರೆಯ ಮೇಲೆ ನೋಡಿಕೊಳ್ಳುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ. 'ಏಕೆಂದರೆ, ನನಗೆ ನನ್ನ ನಟನೆ ಇಷ್ಟವಾಗುವುದಿಲ್ಲ. ನಾನು ಮಾಸ್ಟರ್ ಸಿನಿಮಾ ನೋಡಲು ಹೋದೆ ಮತ್ತು ಇಂಟರ್‌ವಲ್ ವರೆಗೆ ಮಾತ್ರ ಇರಲು ಸಾಧ್ಯವಾಯಿತು. ನಾನು ನಾಚಿಕೆ ಸ್ವಭಾವದವನಾಗಿದ್ದೇನೆ ಮತ್ತು ನನ್ನ ಸ್ವಂತ ನಟನೆಯನ್ನು ವೀಕ್ಷಿಸಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು.

ಗಲ್ಲಾಪೆಟ್ಟಿಗೆಯ ಯಶಸ್ಸು ಮತ್ತು ವೈಫಲ್ಯಗಳ ನ್ಯಾಯಯುತ ಪಾಲನ್ನು ಕಂಡಿರುವ ನಟ, 'ಚಿತ್ರದ ಅರ್ಹತೆ ಗಲ್ಲಾಪೆಟ್ಟಿಗೆಯ ಯಶಸ್ಸಿಗೆ ಸಂಪರ್ಕ ಹೊಂದಿಲ್ಲ. ಅಭಿಮಾನಿಗಳ ಒಂದು ವಿಭಾಗವು ಈ ಸಂಖ್ಯೆಗಳನ್ನು ಚರ್ಚಿಸಲು ಮುಂದಾಗಿರುವುದು ದುಃಖಕರವಾಗಿದೆ' ಎಂದು ಹೇಳಿದರು. 

ವಿಜಯ್ ಸೇತುಪತಿ ಅವರು ಬರೆದ ಮತ್ತು ತಾವೇ ಮುಖ್ಯ ಪಾತ್ರದಲ್ಲಿ ನಟಿಸಿದ ಅವರ ಹೋಮ್ ಪ್ರೊಡಕ್ಷನ್ ನಿರ್ಮಿತ 'ಆರೆಂಜ್ ಟ್ಟೈ' ಸಿನಿಮಾ ಪ್ರೇಕ್ಷಕರಿಗೆ ಏಕೆ ರುಚಿಸಲಿಲ್ಲ ಎಂಬ ಬಗ್ಗೆ ಮಾತನಾಡಿದ ಅವರು, 'ನಾನು ನನ್ನ ತಂದೆಯಿಂದ ಸ್ಫೂರ್ತಿ ಪಡೆದು ಆರೆಂಜ್ ಮಿಟ್ಟೈ ಬರೆದಿದ್ದೇನೆ. ಆದರೆ, ನನ್ನ ಸ್ವಂತ ಕುಟುಂಬದ ಸದಸ್ಯರಿಗೂ ಕೂಡ ಈ ಚಿತ್ರ ಬೇಸರ ತರಿಸಿದೆ. ಆದಾದ, ವರ್ಷಗಳ ನಂತರ ಇದೀಗ ಅದರ ಬಗ್ಗೆ ಹೇಳಲು ಒಳ್ಳೆಯ ವಿಚಾರಗಳಿವೆ' ಎಂದು ಅವರು ನೆನಪಿಸಿಕೊಂಡರು.

ಸೂಪರ್ ಡಿಲಕ್ಸ್ ಚಿತ್ರದಲ್ಲಿ ಟ್ರಾನ್ಸ್‌ವುಮನ್ ಶಿಲ್ಪಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಶಿಲ್ಪಾ ಎಂಬ ಪಾತ್ರವು ಅವರಿಗೆ ಜೀವನದ ಪ್ರಮುಖ ಪಾಠಗಳನ್ನು ಕಲಿಸಿತು ಎಂದು ವಿಜಯ್ ಸೇತುಪತಿ ಹೇಳಿದರು.

ಚಲನಚಿತ್ರಗಳು ಮಾನವ ಸಂಬಂಧಗಳನ್ನು ಬಿಂಬಿಸುತ್ತವೆ

ಆ ಪಾತ್ರದಲ್ಲಿ ನಟಿಸುವಾಗ, ನನ್ನೊಳಗಿನ ಸ್ತ್ರೀತ್ವವನ್ನು ನಾನು ಕಂಡುಕೊಂಡೆ. ಶಿಲ್ಪಾ ನನ್ನೊಳಗೆ ಶಾಶ್ವತವಾಗಿ ಉಳಿಯುತ್ತಾಳೆಯೇ ಎಂದು ನಾನು ಆಶ್ಚರ್ಯಪಟ್ಟಿದ್ದ ನಾನು ಇದು ಅಪಾಯಕಾರಿ ಎಂದೂ ಭಾವಿಸಿದ್ದೆ. ಅವರ ಟ್ರೇಡ್‌ಮಾರ್ಕ್ ಶೈಲಿಯಲ್ಲಿ, ಅವರು ಕಲೆಯ ಮಹತ್ವವನ್ನು ಒತ್ತಿಹೇಳಿದರು. 

ಚಲನಚಿತ್ರಗಳು ಮಾನವ ಸಂಬಂಧಗಳನ್ನು ಮತ್ತು ನಾವು ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಬಗ್ಗೆ ಪ್ರತಿಬಿಂಬಿಸುತ್ತವೆ. ನಾವು ರಾಜಕೀಯದ ಪ್ರಭಾವ, ಲಿಂಗಗಳಾದ್ಯಂತ ಜನರ ಕೊಡುಗೆಗಳನ್ನು ನೋಡುತ್ತೇವೆ... ಸಿನಿಮಾದ ಮೂಲಕ ನಾಗರಿಕತೆಯ ಬಗ್ಗೆ ನಾವು ಹೆಚ್ಚು ಅರ್ಥಮಾಡಿಕೊಳ್ಳುತ್ತೇವೆ ಎಂದರು. 

400 ಕ್ಕೂ ಹೆಚ್ಚು ಮಂದಿ ThinkEdu Conclave ನ ಅಂತಿಮ ದಿನದಂದು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com