
ಮಾರ್ಟಿನ್ ಚಿತ್ರ ತಂಡ
ಬೆಂಗಳೂರು: ನಾನು ಬರೆದ ಅತ್ಯುತ್ತಮ ಕಮರ್ಷಿಯಲ್ ಕಥೆಗಳಲ್ಲಿ 'ಮಾರ್ಟಿನ್' ಕೂಡ ಒಂದು ಎಂದು ಚಿತ್ರ ನಿರ್ದೇಶಕ AP ಅರ್ಜುನ್ ಹೇಳಿದ್ದಾರೆ.
ಕಾಂತಾರ ಮತ್ತು ಕೆಜಿಎಫ್ ಫ್ರಾಂಚೈಸಿಯ ಇತ್ತೀಚಿನ ಯಶಸ್ಸಿನ ನಂತರ, ಕನ್ನಡ ಚಲನಚಿತ್ರೋದ್ಯಮವು ಪ್ಯಾನ್-ಇಂಡಿಯನ್ ಪ್ರೇಕ್ಷಕರಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದೆ. ಈ ಮನ್ನಣೆಗೆ ಅನುಗುಣವಾಗಿ, ಮತ್ತು ಟ್ರೆಂಡ್ ಅನ್ನು ಮೇಲಕ್ಕೆತ್ತುವ ಭರವಸೆಯಲ್ಲಿ, ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಾಕಷ್ಟು ಸದ್ದು ಮಾಡುತ್ತಿದ್ದು, ಗುರುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಆಕ್ಷನ್-ಥ್ರಿಲ್ಲರ್ ಮಾರ್ಟಿನ್ ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಲಾಯಿತು.
ಇದನ್ನೂ ಓದಿ: ದೇವರು-ದೇವರೇ... ಕಲಾವಿದರು-ಕಲಾವಿದರೇ: 'ಪುನೀತ ಮಾಲೆ' ಹಾಕುವವರ ವಿರುದ್ಧ ನಟ ಪ್ರಥಮ್ ಕಿಡಿ!
ಧ್ರುವ ಅವರ ಚೊಚ್ಚಲ ಚಿತ್ರ ಅದ್ಧೂರಿಯನ್ನು ನಿರ್ದೇಶಿಸಿದ್ದ ಎಪಿ ಅರ್ಜುನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಅರ್ಜುನ್, "ಮಾರ್ಟಿನ್ ಪರಿಪೂರ್ಣ ತಂಡದ ಕೆಲಸ. ಇದು ಧ್ರುವ ಅವರ ಐದನೇ ಚಿತ್ರ ಮತ್ತು ಅವರು ಔಟ್-ಅಂಡ್-ಔಟ್ ಕಮರ್ಷಿಯಲ್ ಪ್ರಾಜೆಕ್ಟ್ ಬಯಸಿದ್ದರು. ಅವರಿಗೆ ಕಥೆ ಬರೆಯುವುದು ಕಷ್ಟ ಮತ್ತು ನಾನು ಈ ಕಥೆಯನ್ನು ಅವರಿಗಾಗಿಯೇ ಕಲ್ಪಿಸಿದೆ. ನಾನು ಬರೆದ ಅತ್ಯುತ್ತಮ ಕಮರ್ಷಿಯಲ್ ಕಥೆಗಳಲ್ಲಿ ಮಾರ್ಟಿನ್ ಕೂಡ ಒಂದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನನ್ನನ್ನು ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮಗನಾಗಿಯೂ ಬೆಳೆಸಿದ್ದೀರಿ: ಶಿವರಾಜಕುಮಾರ್
ಬಳಿಕ ಮಾತನಾಡಿದ ದ್ರುವ ಸರ್ಜಾ, “ನನ್ನ ಮೊದಲ ಮೂರು ಚಿತ್ರಗಳು ಪ್ರಣಯ-ಪ್ರೀತಿ ಆಧಾರಿತ ಚಿತ್ರಗಳಾಗಿದ್ದವು. ಇದರೊಂದಿಗೆ, ನಾನು ನಟನಾಗಿ ವಿಭಿನ್ನ ಪ್ರಕಾರವನ್ನು ಪ್ರಯತ್ನಿಸಲು ಬಯಸಿದ್ದೆ. ನಾನು ಮಾರ್ಟಿನ್ ಪಾತ್ರ ಮಾಡಿಲ್ಲ. ನನ್ನ ಪಾತ್ರದ ಹೆಸರು ಅರ್ಜುನ್. ಹಾಗಾದರೆ ಮಾರ್ಟಿನ್ ಯಾರು? ಅದುವೇ ಕಥೆ ಎಂದು ಹೇಳಿದ್ದಾರೆ.

ಚಿತ್ರ ನಿರ್ಮಾಪಕ ಅರ್ಜುನ್ ಅವರು ನಟ-ನಿರ್ದೇಶಕ ಸಂಬಂಧವನ್ನು ಮೀರಿದ ಒಡನಾಟವನ್ನು ಧ್ರುವ ಅವರೊಂದಿಗೆ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು. “ಒಮ್ಮೆ ನಾನು ಕಥೆಯನ್ನು ಕೇಳಿದಾಗ, ಈ ಚಿತ್ರವನ್ನು ಪ್ಯಾನ್-ಇಂಡಿಯಾದಲ್ಲಿ ಹೇಗೆ ಪ್ರಸ್ತುತಪಡಿಸಬೇಕು ಎಂಬುದರ ಕುರಿತು ನಾವು ವ್ಯಾಪಕವಾಗಿ ಕೆಲಸ ಮಾಡಿದ್ದೇವೆ. ಇಲ್ಲಿಯವರೆಗೂ ನನ್ನ ಎಲ್ಲಾ ಚಿತ್ರಗಳು ಕರ್ನಾಟಕದಲ್ಲಿ ನಡೆಸಿದ ಪರೀಕ್ಷೆಯಂತೆ ಭಾಸವಾಗುತ್ತಿತ್ತು. ಮಾರ್ಟಿನ್ ಪ್ಯಾನ್-ಇಂಡಿಯನ್ ಆಗಿರುವುದರಿಂದ, ಇದು ರಾಷ್ಟ್ರೀಯ ಮಟ್ಟದ ಪರೀಕ್ಷೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಬ್ಜ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ನಟ ಶಿವರಾಜಕುಮಾರ್
ಇನ್ನು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿರುವ ರಾಮ್ ಮತ್ತು ಲಕ್ಷ್ಮಣ್ ಅವರು, 'ನಾವು ಕ್ಲೈಮ್ಯಾಕ್ಸ್ ಅನ್ನು 45 ದಿನಗಳ ಕಾಲ ಚಿತ್ರೀಕರಿಸಿದ್ದೇವೆ ಮತ್ತು ಸಾಹಸಗಳು ತುಂಬಾ ಚೆನ್ನಾಗಿ ಬರಲು ತಾಂತ್ರಿಕತೆ ಕಾರಣ. ನಾವು ಮೊದಲು ಚೆನ್ನೈಗೆ ಬಂದಾಗ, ನಾವು ನೋಡಿದ ಮೊದಲ ನಟ ಅರ್ಜುನ್ ಸರ್. ಧ್ರುವದಲ್ಲಿ ಅದೇ ರೀತಿಯ ತುಡಿತ ಮತ್ತು ಏನಾದರೂ ಮಾಡುವ ಶೈಲಿಯನ್ನು ನಾವು ನೋಡಬಹುದು ಎಂದು ಹೇಳಿದರು.
ಮಾರ್ಟಿನ್ ಇಬ್ಬರು ಮಹಿಳಾ ನಾಯಕಿಯರನ್ನು ಒಳಗೊಂಡಿದ್ದು, ವೈಭವಿ ಶಾಂಡಿಲ್ಯ ಮತ್ತು ಅನ್ವೇಶಿ ಜೈನ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕುರಿತು ಮಾತನಾಡಿದ ನಟಿ ಅನ್ವೇಶಿ ಅವರು, 'ನಾನು ಪಠಾಣ್ ಅನ್ನು ವೀಕ್ಷಿಸಿದಾಗ, ಅದರ ಭಾವನೆಯು ತುಂಬಾ ತಲುಪಲು ಸಾಧ್ಯವಾಗಲಿಲ್ಲ. ಆದರೆ ಮಾರ್ಟಿನ್ ಟೀಸರ್ ನೋಡಿದಾಗ ನಾನೂ ಕೂಡ ಇಷ್ಟು ದೊಡ್ಡ ಚಿತ್ರದ ಭಾಗವಾಗಿದ್ದೇನೆ ಎಂಬ ಕಲ್ಪನೆಯೇ ಇರಲಿಲ್ಲ. ಈ ಚಿತ್ರವು ಭಾಷೆಯಾದ್ಯಂತ ಬೆಂಚ್‌ಮಾರ್ಕ್ ಚಿತ್ರ ಆಗಲಿದೆ ಎಂದು ಅನ್ವೇಶಿ ಹೇಳಿದರು.
ಇದನ್ನೂ ಓದಿ: ರಾಯರಿಂದ ಈ ತಿರುಕನ ಕನಸು ನನಸಾಗಿದೆ: ಗುರುವೈಭವೋತ್ಸವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಜಗ್ಗೆಶ್ ಮಾತು!
ಅವರ ಮಾತಿಗೆ ಧನಿಗೂಡಿಸಿದ ಮತ್ತೋರ್ವ ನಾಯಕ ನಟಿ ವೈಭವಿ, ತಾವು ಕೂಡ ಚಿತ್ರದ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ. ಚಿತ್ರದಲ್ಲಿ ತಾವು ಧೈರ್ಯಶಾಲಿ ಮತ್ತು ದೇಶಭಕ್ತಿಯ ಹುಡುಗಿಯಾಗಿ ನಟಿಸಿದ್ದೇನೆ ಎಂದು ಹೇಳಿದ್ದಾರೆ.
ತಾಂತ್ರಿಕ ಭಾಗದಲ್ಲಿ, ಸಿಬ್ಬಂದಿ ಸದಸ್ಯರು ತಮ್ಮ ಕೊಡುಗೆಗಳನ್ನು ಹಂಚಿಕೊಂಡಿದ್ದು, 4000-5000 ಕೈದಿಗಳಿಗೆ ಅವಕಾಶ ಕಲ್ಪಿಸುವ ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಗಿದ್ದು, ಇದು ನಿರ್ಮಾಣ ವಿನ್ಯಾಸದಲ್ಲಿ ಅಪರೂಪವಾಗಿದೆ ಎಂದು ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಹೇಳಿದರು. ಕಾಂತಾರ ಮತ್ತು ಕೆಜಿಎಫ್ ಚಿತ್ರಗಳ ಯಶಸ್ಸಿನಿಂದ ಬಂದ ಕನ್ನಡ ಇಂಡಸ್ಟ್ರಿಯ ಹೊಸ ಗೌರವ ಮಾರ್ಟಿನ್‌ನಿಂದ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಸಂಪಾದಕ ಕೆ.ಎಂ.ಪ್ರಕಾಶ್ ಅಭಿಪ್ರಾಯಪಟ್ಟರು.