ಕೆಸಿಸಿ-2023: ಫೈನಲ್ ಗೆದ್ದ ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ಗೆ ಟ್ರೋಫಿ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದೆ ಮೂರು  ದಿನಗಳಿಂದ ನಡೆದ  ಕನ್ನಡ ಚಲನಚಿತ್ರ ಕ್ರಿಕೆಟ್ ಪಂದ್ಯಾವಳಿ 2023 ಮುಕ್ತಾಯವಾಗಿದೆ. ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ಈ ಬಾರಿಯ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಗಂಗಾ ವಾರಿಯರ್ಸ್ ತಂಡದ ಡಾರ್ಲಿಂಗ್ ಕೃಷ್ಣ, ಸುರೇಶ್ ರೈನಾ, ಧನಂಜಯ್
ಗಂಗಾ ವಾರಿಯರ್ಸ್ ತಂಡದ ಡಾರ್ಲಿಂಗ್ ಕೃಷ್ಣ, ಸುರೇಶ್ ರೈನಾ, ಧನಂಜಯ್

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದೆ ಮೂರು  ದಿನಗಳಿಂದ ನಡೆದ  ಕನ್ನಡ ಚಲನಚಿತ್ರ ಕ್ರಿಕೆಟ್ ಪಂದ್ಯಾವಳಿ 2023 ಮುಕ್ತಾಯವಾಗಿದೆ. ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ಈ ಬಾರಿಯ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇಂದು ನಡೆದ ಫೈನಲ್ ನಲ್ಲಿ ಉಪೇಂದ್ರ ನಾಯಕತ್ವದ ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಮಣಿಸಿದ ಡಾಲಿ ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಟ್ರೋಫಿಯನ್ನು ವಶಕ್ಕೆ ಪಡೆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಜಯನಗರ ಪೇಟ್ರಿಯಾಟ್ಸ್ ತಂಡ 10 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಸುಲಭವಾಗಿ ಗುರಿ ತಲುಪಿ ಕೆಸಿಸಿ 2023 ಟ್ರೋಫಿಗೆ ಮುತ್ತಿಕಿತ್ತು. ಲೀಗ್ ಹಂತದಲ್ಲಿ ಎಲ್ಲ ಆರು ತಂಡಗಳು ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿದರು. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದ ಡಾಲಿಯ ಗಂಗಾ ವಾರಿಯರ್ಸ್ ಫೈನಲ್ ಪ್ರವೇಶಿಸಿತು.  

ಸಿನಿಮಾ ನಟರು ಮತ್ತು ತಂತ್ರಜ್ಞರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕೂಡಾ ಕನ್ನಡ ಚಲನಚಿತ್ರ ಕಪ್ ಪಂದ್ಯದಲ್ಲಿ ಭಾಗಿಯಾಗಿದ್ದರು. ಧನಂಜಯ್, ಗಣೇಶ್, ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ ಮತ್ತು ಧ್ರುವ ಸರ್ಜಾ ತಲಾ ಒಂದೊಂದು ತಂಡದ ನೇತೃತ್ವ ವಹಿಸಿದ್ದರು. 

ಈ ಬಾರಿಯ ಚಾಂಪಿಯನ್ ಗಂಗಾ ವಾರಿಯರ್ಸ್ ತಂಡಕ್ಕೆ ನಟಿ ರಮ್ಯಾ ಸೇರಿದಂತೆ ಹಲವು ನಟ, ನಟಿಯರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com