ಹುಡುಗಿಗೆ ಹೊಡೆಯುತ್ತೀಯಾ? ನಡುರಸ್ತೆಯಲ್ಲಿ ಯುವಕನಿಗೆ ಹಿಗ್ಗಾಮುಗ್ಗಾ ಜಾಡಿಸಿದ ನಟ ನಾಗಶೌರ್ಯ, ವಿಡಿಯೋ ವೈರಲ್!
ಯುವ ನಟ ನಾಗಶೌರ್ಯ ರಿಯಲ್ ಹೀರೋ ಅನ್ನಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಯುವತಿಯ ಮೇಲೆ ಯುವಕನೊಬ್ಬ ಹೊಡೆದಿದ್ದನ್ನು ಕಂಡ ನಾಗಶೌರ್ಯ ಆಕೆಗೆ ಯಾಕೆ ಹೊಡೆಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 28th February 2023 09:01 PM | Last Updated: 01st March 2023 02:31 PM | A+A A-

ನಟ ನಾಗಶೌರ್ಯ
ಯುವ ನಟ ನಾಗಶೌರ್ಯ ರಿಯಲ್ ಹೀರೋ ಅನ್ನಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಯುವತಿಯ ಮೇಲೆ ಯುವಕನೊಬ್ಬ ಹೊಡೆದಿದ್ದನ್ನು ಕಂಡ ನಾಗಶೌರ್ಯ ಆಕೆಗೆ ಯಾಕೆ ಹೊಡೆಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಲಾಗಿ ಯುವತಿಗೆ ಹೊಡೆದಿದ್ದು ತಪ್ಪಾಗಿದ್ದು, ಕ್ಷಮೆ ಕೇಳಬೇಕು ಎಂದು ಶೌರ್ಯ ಯುವಕನೊಂದಿಗೆ ಜಗಳವಾಡಿದರು.
ಪ್ರೇಮಿಗಳಿಬ್ಬರು ರಸ್ತೆಯಲ್ಲಿ ಜಗಳ ಮಾಡಿಕೊಂಡಿದ್ದರು. ಈ ವೇಳೆ ಯುವಕ ಯುವತಿಯನ್ನು ಎಳೆದಾಡಿದ್ದು ಕೆನ್ನೆಗೆ ಬಾರಿಸಿದ್ದಾನೆ. ಅದೇ ವೇಳೆಗೆ ಕಾರಿನಲ್ಲಿ ಹೋಗುತ್ತಿದ್ದ ನಾಗಶೌರ್ಯ ಇದನ್ನು ಗಮನಿಸಿ ಆ ಹುಡುಗಿಗೆ ಯಾಕೆ ಹೊಡೆದೆ? ಎಂದು ಪ್ರಶ್ನಿಸಿದ್ದಾರೆ.
#nagashaurya reel lone kadu real life lo kuda hero anipinchukunaru sir pic.twitter.com/R3J8sObOq6
— ks Raju (@ksRaju58119364) February 28, 2023
ಇದಕ್ಕೆ ಯುವಕ ಆಕೆ ನನ್ನ ಲವರ್ ನನ್ನ ಇಷ್ಟ ಎಂದು ಹೇಳುವ ಮೂಲಕ ಅತಿಯಾಗಿ ವರ್ತಿಸಿದನು. ಇದಕ್ಕೆ ನಾಗಶೌರ್ಯ ಹುಡುಗಿಗೆ ಕ್ಷಮೆಯಾಚಿಸುವಂತೆ ವಾದಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶೌರ್ಯ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.