ಮಹಿಳೆಯರು ಬೀಳಲೆಂದೆ ಮೇಲೇರುತ್ತಾರೆ: ಟ್ರೋಲ್ ಮಾಡಿದವರಿಗೆ ಬಿಸಿಮುಟ್ಟಿಸಿದ ನಟಿ ಸಮಂತಾ ರುತ್ ಪ್ರಭು

ನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟಿಸ್ ಎಂಬ ಕಾಯಿಲೆಗೆ ತುತ್ತಾಗಿನಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಕಡಿಮೆ. ಆದರೆ, ಇದೀಗ ಮತ್ತೆ ಎಚ್ಚೆತ್ತುಕೊಂಡಿರುವ ನಟಿ ತಮ್ಮ ಅಭಿಮಾನಿಗಳೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿರಲು ಮತ್ತೆ ಟ್ವಿಟರ್‌ಗೆ ಮರಳಿದ್ದಾರೆ.
ಸಮಂತಾ
ಸಮಂತಾ

ಮುಂಬೈ: ನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟಿಸ್ ಎಂಬ ಕಾಯಿಲೆಗೆ ತುತ್ತಾಗಿನಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಕಡಿಮೆ. ಆದರೆ, ಇದೀಗ ಮತ್ತೆ ಎಚ್ಚೆತ್ತುಕೊಂಡಿರುವ ನಟಿ ತಮ್ಮ ಅಭಿಮಾನಿಗಳೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿರಲು ಮತ್ತೆ ಟ್ವಿಟರ್‌ಗೆ ಮರಳಿದ್ದಾರೆ.

ಸೋಮವಾರ, ಟ್ವಿಟರ್‌ನಲ್ಲಿ ಹಲವಾರು ಅಭಿಮಾನಿಗಳ ಟ್ವೀಟ್‌ಗಳಿಗೆ ಸಮಂತಾ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಟ್ರೋಲ್‌ಗಳಿಗೂ ಉತ್ತರಿಸಿದ್ದಾರೆ.

ಮಹಿಳೆಯರು ಬೀಳಲು ಮಾತ್ರ ಮೇಲೇರುತ್ತಾರೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದು, ಸಮಂತಾ ತಕ್ಕ ತಿರುಗೇಟು ನೀಡಿದ್ದಾರೆ.

ಮತ್ತೊಬ್ಬರು, 'ಕ್ರೋಮ್‌ಪೇಟ್‌ನಲ್ಲಿರುವ ವೆಟ್ರಿ ಥಿಯೇಟರ್‌ನಿಂದ ಹಾದುಹೋಗುವಾಗ, ನನ್ನ ಸಹೋದರಿ ಮತ್ತು ನಾನು ಮಹಿಳಾ ನಾಯಕಿಯರ ಪೋಸ್ಟರ್‌ಗಳನ್ನು ಹಾಕಿರುವುದನ್ನು ಕಂಡೆವು. ತಮಿಳು ಚಿತ್ರರಂಗ ಎಷ್ಟು ದೂರ ಬಂದಿದೆ! 10 ವರ್ಷಗಳ ಹಿಂದೆ ಇದನ್ನು ಊಹಿಸಲೂ ಅಸಾಧ್ಯವಾಗಿತ್ತು' ಎಂದು ಟ್ವೀಟ್ ಮಾಡಿದ್ದಾರೆ.

ನಟಿ ನಯನತಾರಾ ಅಭಿನಯದ ಕನೆಕ್ಟ್ ಚಿತ್ರ, ಐಶ್ವರ್ಯಾ ರಾಜೇಶ್ ಅಭಿನಯದ ಡ್ರೈವರ್ ಜಮುನಾ ಮತ್ತು ತ್ರಿಶಾ ಕೃಷ್ಣನ್ ಅಭಿನಯದ ರಾಂಗಿ ಸೇರಿದಂತೆ ಮಹಿಳಾ ನಟಿಯರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೃಹತ್ ಪೋಸ್ಟರ್‌ಗಳನ್ನು ಹಾಕಿರುವ ವೆಟ್ರಿ ಸಿನಿಮಾ ಹಾಲ್‌ನ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು.

ಈ ಟ್ವೀಟ್‌ಗೆ ಸಮಂತಾ, ಹೃದಯ ಮತ್ತು ಹಸ್ತದ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಮಹಿಳೆಯರು ರೈಸಿಂಗ್!! ಎಂದು ಬರೆದಿದ್ದಾರೆ.

ಈ ಟ್ವೀಟ್‌ಗೆ ಮತ್ತೋರ್ವ ಬಳಕೆದಾರರು, 'ಜಸ್ಟ್‌ ಟು ಫಾಲ್‌' (ಕೇವಲ ಬೀಳಲೆಂದು) ಎಂದಿದ್ದಾರೆ. ಇದಕ್ಕೆ ಸಮಂತಾ, 'ಮತ್ತೆ ಹಿಂತಿರುಗಿ ಬರುವುದು ನನ್ನ ಸ್ನೇಹಿತನಿಗೆ ಇನ್ನಷ್ಟು ಸಿಹಿಯಾಗಿಸುತ್ತದೆ' ಎಂದು ಉತ್ತರಿಸಿದ್ದಾರೆ.

ಮತ್ತೊಬ್ಬ ನೆಟಿಜನ್ ತನ್ನ ಟ್ವಿಟ್ಟರ್ ಫೀಡ್‌ನಲ್ಲಿ, 'ನಾನು ಯಾವಾಗಲೂ ನಿಮ್ಮ ನಿಷ್ಠಾವಂತ ಅಭಿಮಾನಿ, ನಿಮ್ಮ ರಕ್ಷಕ, ನಿಮ್ಮ ಆಪ್ತಮಿತ್ರನಾಗಿರುತ್ತೇನೆ. ನಾನು ನಿಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತೇನೆ. ನಿಮ್ಮ ಮೇಲಿನ ನನ್ನ ಪ್ರೀತಿ ಯಾವಾಗಲೂ ಇರುತ್ತದೆ ಸಮಂತಾ ಮೇಡಂ' ಎಂದು ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅವರು, 'ಯಾವಾಗಲೂ ನನ್ನ ಬೆನ್ನೆಲುಬಾಗಿರುವುದಕ್ಕೆ ಧನ್ಯವಾದಗಳು.. ನನಗೆ ಇನ್ನೂ ಶಕ್ತಿ ಇರುವುದು ನಿಮ್ಮೆಲ್ಲರ ಪ್ರಾರ್ಥನೆಗಳಿಂದಾಗಿ' ಎಂದು ತಿಳಿಸಿದ್ದಾರೆ.

ಈಮಧ್ಯೆ, ಸಮಂತಾ ಅಭಿನಯದ 'ಶಾಕುಂತಲಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಫೆಬ್ರವರಿ 17 ರಂದು ಚಿತ್ರಮಂದಿರಗಳಿಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ. ಇದು ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com