'ಕೂರ್ಗ್ ವರ್ಷದ ವ್ಯಕ್ತಿ 2022' ಆಗಿ ನಟಿ ರಶ್ಮಿಕಾ ಮಂದಣ್ಣ ಆಯ್ಕೆ

ಕೊಡಗು ಮೂಲದ ನ್ಯೂಸ್ ಪೋರ್ಟಲ್ ಕೂರ್ಗ್ ಟೂರಿಸಂ ಇನ್ಫೋಂ' 2022ರ ವರ್ಷದ ಕೊಡಗಿನ ವ್ಯಕ್ತಿಯಾಗಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದೆ.
ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ

ಬೆಂಗಳೂರು: ಕೊಡಗು ಮೂಲದ ನ್ಯೂಸ್ ಪೋರ್ಟಲ್ ಕೂರ್ಗ್ ಟೂರಿಸಂ ಇನ್ಫೋಂ' 2022ರ ವರ್ಷದ ಕೊಡಗಿನ ವ್ಯಕ್ತಿಯಾಗಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದೆ.

ವಾರ್ಷಿಕ ಸಮೀಕ್ಷೆ ಮೂಲಕ ಸಮುದಾಯದ ಹೆಸರಾಂತ ನಾಯಕರ ಗುಣಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಲೇಖಕ ಪಿಟಿ ಬೊಪ್ಪಣ್ಣ ಅವರಿಂದ 2005ರಲ್ಲಿ ಆರಂಭವಾದ ಈ ಪೋರ್ಟಲ್ ಸ್ಥಾಪಿಸಿದರು.  ಇಂದಿನ ಯುವ ಪೀಳಿಗೆಯಲ್ಲಿ ಅನೇಕ ಉತ್ಸಾಹಿ, ತರುಣ ಜನರಿದ್ದು, ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಬೊಪಣ್ಣ ಹೇಳುತ್ತಾರೆ. 

2016ರಲ್ಲಿ ಕಿರಿಕ್ ಪಾರ್ಟಿ ಮೂಲಕ ಚೊಚ್ಚಲ ಬಾರಿಗೆ ಚಿತ್ರರಂಗ ಪ್ರವೇಶಿಸಿದ ವಿರಾಜ ಪೇಟೆಯ ರಶ್ಮಿಕಾ ಮಂದಣ್ಣ, ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹು ಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ರಕ್ಷಿತ್ ಶೆಟ್ಟಿ, ಪುನೀತ್ ರಾಜ್ ಕುಮಾರ್, ಅಮಿತಾಬ್ ಬಚ್ಚನ್, ಅಲ್ಲು ಅರ್ಜುನ್, ದಳಪತಿ ವಿಜಯ್ ಅವರಂತಹ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 

ಸಣ್ಣ ಸಮುದಾಯದಿಂದ ಬಂದ ರಶ್ಮಿಕಾ ಮಂದಣ್ಣ, ಪುರುಷ ಪ್ರಾಧ್ಯಾನತೆಯ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯಿಂದ ಮೇಲೆರಿದ್ದಾರೆ. ಆಕೆ ಕೊಡವರಿಗೆ ಮಾತ್ರವಲ್ಲ, ಇದೇ ಹಾದಿಯಲ್ಲಿರುವ ಎಲ್ಲಾ ಮಹಿಳೆಯರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಯಾರೊಬ್ಬರ ಬೆಂಬಲವಿಲ್ಲದೆ ಸ್ವಂತ ಬಲದಿಂದ ಇಷ್ಟೊಂದು ಸಾಧನೆ ಮಾಡಿರುವ ರಶ್ಮಿಕಾ ಮಂದಣ್ಣ, ತನ್ನ ಕಲೆಯ ಸಾಮರ್ಥ್ಯದಿಂದ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಬೊಪ್ಪಣ್ಣ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com