ಮಲಯಾಳಿ ನಟಿಯೊಂದಿಗೆ ಸಂಬಂಧ: 23 ವರ್ಷಗಳ ದಾಂಪತ್ಯದಲ್ಲಿ ಬಿರುಕು! ನಟ ವಿಜಯ್ -ಸಂಗೀತಾ ವಿಚ್ಛೇದನ?
ತಮಿಳು ನಟ ವಿಜಯ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಕಹಿ ಸುದ್ದಿ ಸಿಕ್ಕಿದೆ. ‘ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಮಧ್ಯೆ ಬಿರುಕು ಮೂಡಿದೆ. ಪರಿಣಾಮ ಇಬ್ಬರು ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರಂತೆ ಎಂಬ ವದಂತಿ ಹರಿದಾಡುತ್ತಿದೆ.
Published: 06th January 2023 09:28 AM | Last Updated: 06th January 2023 02:27 PM | A+A A-

ನಟ ವಿಜಯ್
ತಮಿಳು ನಟ ವಿಜಯ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಕಹಿ ಸುದ್ದಿ ಸಿಕ್ಕಿದೆ. ‘ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಮಧ್ಯೆ ಬಿರುಕು ಮೂಡಿದೆ. ಪರಿಣಾಮ ಇಬ್ಬರು ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರಂತೆ ಎಂಬ ವದಂತಿ ಹರಿದಾಡುತ್ತಿದೆ.
ನಟ ವಿಜಯ್ ಅಭಿನಯದ ಹೊಸ ಸಿನಿಮಾ ‘ವಾರಿಸು’. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಸಂಗೀತಾ ಬಂದಿರಲಿಲ್ಲ. ಅಟ್ಲಿ ಕುಮಾರ್ ಪತ್ನಿಯ ಸೀಮಂತ ಸಮಾರಂಭದಲ್ಲೂ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಅಂತೆ ಕಂತೆ ಶುರುವಾಯಿತು.
ವಿಕಿಪೀಡಿಯಾ ಪೇಜ್‌ನಲ್ಲಿ ‘ವಿಜಯ್ ಹಾಗೂ ಸಂಗೀತಾ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲಿದ್ದಾರೆ’ ಎಂದು ಪ್ರಕಟವಾಗಿದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸಿದರು. ಹೀಗಾಗಿ ವಿಜಯ್ - ಸಂಗೀತಾ ವಿಚ್ಛೇದನದ ಬಗ್ಗೆ ಗುಸು ಗುಸು ಹರಿದಾಡುತ್ತಿದೆ.
ವಿಕಿಪೀಡಿಯಾ ಮಾಹಿತಿಯನ್ನು ಎಡಿಟ್ ಮಾಡಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಈ ವದಂತಿಗೆ ಕಾರಣವಾಗಿದೆ. ಹರಿದಾಡುತ್ತಿರುವ ಫೋಟೋದಲ್ಲಿ ವಿಜಯ್ ಅವರ ಪತ್ನಿ ಕಾಲಂ ಮುಂದೆ ಸಂಗೀತಾ ಅವರ ಹೆಸರನ್ನು ಬರೆಯಲಾಗಿದೆ. ಅಲ್ಲದೆ, ಬ್ರಾಕೆಟ್ನಲ್ಲಿ 1999ರಲ್ಲಿ ಮದುವೆ, 2022ರಲ್ಲಿ ಡಿವೋರ್ಸ್ ಅಂತಾ ಬರೆಯಲಾಗಿದೆ.
ದಂಪತಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದು, ವಿಚ್ಛೇದನಕ್ಕೆ ಮಲಯಾಳಿ ನಟಿಯೊಂದಿಗಿನ ವಿಜಯ್ ಸಂಬಂಧವೇ ಕಾರಣ ಎಂಬ ಗಾಸಿಪ್ ಹಬ್ಬಿದೆ. ಆದರೆ, ಮಾಧ್ಯಮವೊಂದರ ವರದಿ ಪ್ರಕಾರ, ಇವೆಲ್ಲವೂ ಸುಳ್ಳು ಎಂದು ವಿಜಯ್ ಆಪ್ತ ಮೂಲಗಳು ತಿಳಿಸಿವೆ. ಸಂಗೀತಾ ಮತ್ತು ಅವರ ಮಕ್ಕಳು ಅಮೆರಿಕದಲ್ಲಿ ಇದ್ದುದರಿಂದ ವಿಜಯ್ ಜೊತೆ ಬಂದಿರಲಿಲ್ಲ. ಸದ್ಯದಲ್ಲೇ ಕುಟುಂಬದೊಂದಿಗೆ ಇರಲು ವಿಜಯ್ ಸಹ ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.