ಹುಟ್ಟುಹಬ್ಬಕ್ಕೆ ಮುನ್ನ ಅಭಿಮಾನಿಗಳಿಗೆ ಪತ್ರ ಬರೆದ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?
ಜನವರಿ 8, ಕೆಜಿಎಫ್ ರಾಕಿಂಗ್ ಸ್ಟಾರ್ ಯಶ್ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬ್ಲಾಕ್ ಬಸ್ಟರ್ ಕೆಜಿಎಫ್ ಸರಣಿ ಚಿತ್ರದ ಬಳಿಕ ಯಶ್(Rocking star Yash) ಯಾವುದೇ ಸಿನೆಮಾವನ್ನು ಘೋಷಿಸಿಕೊಂಡಿಲ್ಲ. ಕೆಜಿಎಫ್ 2 ತೆರೆಗೆ ಬಂದು ಒಂದು ವರ್ಷವಾಗುತ್ತಾ ಬಂತು.
Published: 06th January 2023 08:12 AM | Last Updated: 06th January 2023 02:24 PM | A+A A-

ನಟ ಯಶ್
ಜನವರಿ 8, ಕೆಜಿಎಫ್ ರಾಕಿಂಗ್ ಸ್ಟಾರ್ ಯಶ್ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬ್ಲಾಕ್ ಬಸ್ಟರ್ ಕೆಜಿಎಫ್ ಸರಣಿ ಚಿತ್ರದ ಬಳಿಕ ಯಶ್(Rocking star Yash) ಯಾವುದೇ ಸಿನೆಮಾವನ್ನು ಘೋಷಿಸಿಕೊಂಡಿಲ್ಲ. ಕೆಜಿಎಫ್ 2 ತೆರೆಗೆ ಬಂದು ಒಂದು ವರ್ಷವಾಗುತ್ತಾ ಬಂತು. ಮುಂದಿನ ಅವರ ಚಿತ್ರ ಯಾವುದು, ಯಾವ ಸಿನೆಮಾ ಮಾಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
ಈ ಬಾರಿಯ ಹುಟ್ಟುಹಬ್ಬಕ್ಕೆ ಯಶ್ ಕಡೆಯಿಂದ ಅಭಿಮಾನಿಗಳಿಗೆ ದೊಡ್ಡ ಸಿಹಿಸುದ್ದಿ ಬರುತ್ತದೆ, ಹೊಸ ಯೋಜನೆಯನ್ನು ಘೋಷಿಸುತ್ತಾರೆ ಎಂದೇ ನಿರೀಕ್ಷೆ ಇತ್ತು. ಆದರೆ ಸದ್ಯಕ್ಕೆ ಅವರು ತಮ್ಮ ಹೊಸ ಯೋಜನೆಯನ್ನು ಬಹಿರಂಗಪಡಿಸುವಂತೆ ಕಾಣುತ್ತಿಲ್ಲ. ಹುಟ್ಟುಹಬ್ಬಕ್ಕೆ ಮುನ್ನ ಯಶ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ನಿರೀಕ್ಷೆಗಳಿಗೆ ತೆರೆ ಎಳೆದಿದ್ದಾರೆ.
ಯಶ್ ಅಭಿಮಾನಿಗಳಿಗೆ ಬರೆದಿರುವ ಪತ್ರದ ಸಾರಾಂಶ ಹೀಗಿದೆ: ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ.. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ನೀವು ನನ್ನ ದಿನವನ್ನ ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದೀರಿ ಎಂದು ಯಶ್ ಬರೆದುಕೊಂಡಿದ್ದಾರೆ.
ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮೆಲ್ಲರ ಜೊತೆ ಕಳೆಯಬೇಕು ಎನಿಸಿದರೂ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ. ಭಾರೀ ನಿರೀಕ್ಷೆಯಲ್ಲಿರುವ ನಿಮಗೆಲ್ಲಾ ವಿಭಿನ್ನವಾಗಿರುವ ಸಿಹಿಸುದ್ದಿಯನ್ನು ಖಂಡಿತಾ ನೀಡುತ್ತೇನೆ, ಸ್ವಲ್ಪ ಸಮಯ ಕಾಯಿರಿ, ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ, ಅಲ್ಲಿಯವರೆಗೂ ತಾಳ್ಮೆ ಮತ್ತು ಪ್ರೀತಿಯನ್ನು ನನ್ನ ಮೇಲೆ ತೋರಿಸಿ, ಅದಷ್ಟೇ ನಾನು ನನ್ನ ಹುಟ್ಟುಹಬ್ಬಕ್ಕೆ ನಿಮ್ಮಿಂದ ಕೇಳಿಕೊಳ್ಳುತ್ತಿರುವುದು ಎಂದು ಬರೆದುಕೊಂಡಿದ್ದಾರೆ.
ಈ ವರ್ಷದ ಹುಟ್ಟುಹಬ್ಬದಲ್ಲಿ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ, ಆದರೆ ಆದಷ್ಟು ಬೇಗ ನಿಮ್ಮ ಮುಂದೆ ಸಿಗುತ್ತೇನೆ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
To my fans,
— Yash (@TheNameIsYash) January 5, 2023
With love
Yash pic.twitter.com/8Tm4j0Ubzi