'ಕಾಂತಾರ' ತೆರೆಕಂಡು 100 ದಿನ, ಬೆಳಕು..!! ಆದರೆ ಇದು ಬೆಳಕಲ್ಲ ಶತದಿನ ದರ್ಶನ ಎಂದು ಚಿತ್ರತಂಡದ ಸಂಭ್ರಮ
ಕಾಂತಾರ(Kantara Movie) ಅಪ್ಪಟ ಕನ್ನಡ ಸಿನಿಮಾ. ಕನ್ನಡದಲ್ಲಿ ಬಿಡುಗಡೆಯಾಗಿ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಬ್ ಆಗಿ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿತು. ಕಳೆದ ಸೆಪ್ಟೆಂಬರ್-30 ರಂದು ತೆರೆಗೆ ಬಂದ ಕಾಂತಾರ ಸಿನೆಮಾ ಇಂದು ಜನವರಿ 7ಕ್ಕೆ 100 ದಿನವಾಗಿದೆ.
Published: 07th January 2023 01:30 PM | Last Updated: 07th January 2023 01:30 PM | A+A A-

ಕಾಂತಾರ ಪೋಸ್ಟರ್
ಕಾಂತಾರ(Kantara Movie) ಅಪ್ಪಟ ಕನ್ನಡ ಸಿನಿಮಾ. ಕನ್ನಡದಲ್ಲಿ ಬಿಡುಗಡೆಯಾಗಿ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಬ್ ಆಗಿ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿತು. ಕಳೆದ ಸೆಪ್ಟೆಂಬರ್-30 ರಂದು ತೆರೆಗೆ ಬಂದ ಕಾಂತಾರ ಸಿನೆಮಾ ಇಂದು ಜನವರಿ 7ಕ್ಕೆ 100 ದಿನವಾಗಿದೆ.
ರಿಲೀಸ್ ಆದ ಮರು ದಿನದಿಂದಲೇ ಕಾಂತಾರ (Kantara Craze) ಹೊಸ ಅಲೆಯನ್ನೆ ಎಬ್ಬಿಸಿತ್ತು. ಯಾವ ಥಿಯೇಟರ್ ನಲ್ಲಿ ನೋಡಿದರೂ ಹೌಸ್ ಫುಲ್ ಪ್ರದರ್ಶನ.
ರಿಷಬ್ ಶೆಟ್ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬಂದ ಕಾಂತಾರ ಚಿತ್ರ 400 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಚಿತ್ರ ಬಿಡುಗಡೆಯಾಗಿ ನೂರು ದಿನವಾದ ಸಂತೋಷವನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಬೆಳಕು..!! ಆದರೆ ಇದು ಬೆಳಕಲ್ಲ ೧೦೦ ದಿನದ ದರ್ಶನ
— Rishab Shetty (@shetty_rishab) January 7, 2023
Celebrating #DivineBlockbusterKantara 100 Days
A film we’ll always cherish, that took us back to our roots n made us fell in awe of our traditions. Kudos everyone who made it happen.#Kantara #100DaysOfKantara pic.twitter.com/uog4lsf6G6
ಕಾಂತಾರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಲೇ ಮುನ್ನುಗ್ಗಿತ್ತು. ಈಗಲೂ ರಾಜ್ಯದ ಹಲವಡೆ ಇನ್ನೂ ಥಿಯೇಟರ್ನಲ್ಲಿ ಕಾಂತಾರ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಒಟಿಟಿಯಲ್ಲಿ ಬಿಡುಗಡೆಯಾಗಿ ಇನ್ನು ಕೆಲವೇ ದಿನಗಳಲ್ಲಿ ಟಿವಿಯಲ್ಲಿ ಬರುತ್ತಿದೆ. ಜನ ಮತ್ತೆ ಮತ್ತೆ ಪರದೆ ಮೇಲೆ ಕಾಂತಾರ ನೋಡಲು ಇಷ್ಟಪಡುತ್ತಾರೆ.