ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹೆಸರು ಮಾಡಬೇಕೆಂದು ಆಸೆಯಿದೆ: ಬಿಗ್ ಬಾಸ್ ಸೀಸನ್ 9 ವಿಜೇತ ರೂಪೇಶ್ ಶೆಟ್ಟಿ
ಬಿಗ್ ಬಾಸ್9 ನ ವಿಜೇತ ರೂಪೇಶ್ ಶೆಟ್ಟಿ ಕನ್ನಡ ಒಟಿಟಿ ಬಿಗ್ ಬಾಸ್ ಕನ್ನಡ ಸೀಸನ್ 1 ನಲ್ಲಿ ಕೂಡ ಗೆಲುವು ಕಂಡವರು. ಯುವ ನಟ ಮತ್ತು ಚಿತ್ರ ನಿರ್ಮಾಪಕ ತುಳು ಚಿತ್ರರಂಗದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ.
Published: 07th January 2023 02:27 PM | Last Updated: 07th January 2023 03:00 PM | A+A A-

ರೂಪೇಶ್ ಶೆಟ್ಟಿ
ಬಿಗ್ ಬಾಸ್9 ನ ವಿಜೇತ ರೂಪೇಶ್ ಶೆಟ್ಟಿ ಕನ್ನಡ ಒಟಿಟಿ ಬಿಗ್ ಬಾಸ್ ಕನ್ನಡ ಸೀಸನ್ 1 ನಲ್ಲಿ ಕೂಡ ಗೆಲುವು ಕಂಡವರು. ಯುವ ನಟ ಮತ್ತು ಚಿತ್ರ ನಿರ್ಮಾಪಕ ತುಳು ಚಿತ್ರರಂಗದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ.
ಬಿಗ್ ಬಾಸ್ ಗೆಲುವಿಗೆ ಕಾರಣವಾದ ಅಂಶವೇನು ಎಂದು ಅವರಲ್ಲಿ ಕೇಳಿದಾಗ "ನಾನು ಅಲ್ಲಿ ನನ್ನ ನಿಜವಾದ ವ್ಯಕ್ತಿತ್ವ ತೋರಿಸಿದ್ದೆ. ನಾನು ನನ್ನ ಹೃದಯದಿಂದ ಆಡಿದ್ದೇನೆ, ಇದರಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನನಗೆ ಸಹಾಯವಾಯಿತು. ಇದುವೇ ಬಹುಶಃ ಹೊರಗಿನ ಪ್ರೇಕ್ಷಕರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಲು ನನಗೆ ಸಹಾಯ ಮಾಡಿದೆ ಎಂದರು.
ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗುವ ಮೊದಲು ಈ ಹಿಂದಿನ ಶೋಗಳನ್ನು ನಿಗದಿತವಾಗಿ ರೂಪೇಶ್ ಶೆಟ್ಟಿ ನೋಡಿರಲಿಲ್ಲವಂತೆ. ಬಿಗ್ ಬಾಸ್ ಮನೆ ಸಂಪೂರ್ಣ ಹೊಸ ಪ್ರಪಂಚದಂತೆ ಭಾಸವಾಗುತ್ತಿತ್ತು. ಬಿಗ್ ಬಾಸ್ ನ್ನು ಸ್ಕ್ರಿಪ್ಟ್ ಮಾಡಲಾಗಿದೆ, ಸ್ಪರ್ಧಿಗಳಿಗೆ ಸ್ವಾತಂತ್ರ್ಯವಿದೆ ಎಂದು ನಾನು ಭಾವಿಸುತ್ತಿದ್ದೆ. ಆದರೆ ಒಮ್ಮೆ ನಾನು ಮನೆಗೆ ಪ್ರವೇಶಿಸಿದಾಗ, ಅದು ಎಷ್ಟು ಕಠಿಣವಾಗಿದೆ ಎಂದು ಅರಿತುಕೊಂಡೆ. ಸುಮಾರು 150 ದಿನಗಳ ಕಾಲ ನನಗೆ ಹೊರ ಪ್ರಪಂಚದ ಸಂಪರ್ಕವೇ ಇರಲಿಲ್ಲ. ಈ ವೇದಿಕೆಯು ನನಗೆ ಜೀವನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಿತು. ನನ್ನ ಸ್ವಂತ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಕಲಿಯಲು ನನಗೆ ಅವಕಾಶ ಮಾಡಿಕೊಟ್ಟಿತು, ಅಂತಿಮವಾಗಿ ನನ್ನ ಜೀವನದ ಪಾಠವಾಯಿತು ಎನ್ನುತ್ತಾರೆ.
ಯಾವುದೇ ನಿರೀಕ್ಷೆಗಳಿಲ್ಲದೆ ಹೋಗಿದ್ದೆ. ನಾನು ಮೊದಲ OTT ಬಿಗ್ ಬಾಸ್ ಸೀಸನ್ ನ ವಿಜೇತನಾಗಿದ್ದು ಸಂತೋಷ ತಂದಿತು. ಟಿವಿಗೆ ಬಂದಾಗ ಅರುಣ್ ಸಾಗರ್, ದೀಪಿಕಾ ದಾಸ್ ಮತ್ತು ಪ್ರಶಾಂತ್ ಸಂಬರ್ಗಿಯಂತಹ ಹಳೆಯ ಮತ್ತು ಅನುಭವಿ ಸ್ಪರ್ಧಿಗಳಿದ್ದರು. ಅಂತಹ ಪ್ರತಿಭಾವಂತರ ಮಧ್ಯೆ ಅಷ್ಟು ವಾರಗಳನ್ನು ಕಳೆದಿದ್ದೇ ಒಂದು ಅನುಭವ ಎಂದರು.
ಇದನ್ನೂ ಓದಿ: ನಟ ರೂಪೇಶ್ ಶೆಟ್ಟಿ ಮುಡಿಗೇರಿದ ಬಿಗ್ ಬಾಸ್ ಸೀಸನ್ 9 ಕಿರೀಟ; ರಾಕೇಶ್ ಅಡಿಗ ರನ್ನರ್ ಅಪ್
ರೂಪೇಶ್ ಶೆಟ್ಟಿ ಈಗ ತಮ್ಮ ಮುಂದಿನ ಚಿತ್ರ ಮಂಕು ಭಾಯ್ ಫಾಕ್ಸಿ ರಾಣಿ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಚಿತ್ರ ಜನವರಿ 13 ರಂದು ಬಿಡುಗಡೆಯಾಗಲಿದ್ದು, ಮೊನ್ನೆ ಗುರುವಾರ ಟ್ರೇಲರ್ ಲಾಂಚ್ ಆಗಿದೆ. “ನಾನು ತುಳು ನಟನಾಗಿ ಐದು ಕನ್ನಡ ಚಿತ್ರಗಳನ್ನು ಮಾಡಿದ್ದೇನೆ, ಇದು ಮೂರು ವರ್ಷಗಳ ಹಿಂದೆ ಮಾಡಿದ ಚಿತ್ರ, ಈಗ ಬಿಡುಗಡೆಯಾಗುತ್ತಿದೆ ಎಂದರು.
ಬಿಗ್ ಬಾಸ್‌ನಲ್ಲಿ ಅವರ ಗೆಲುವು ಅವರ ಮುಂಬರುವ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. “ಇದು ಹಳ್ಳಿಯಲ್ಲಿ ನಡೆಯುವ ಒಂದು ಉತ್ತಮ ಭಾವನೆಯ ಚಿತ್ರವಾಗಿದೆ. ನಾನು ಆ ಪ್ರದೇಶದ ಯುವಕನಾಗಿ ನಟಿಸಿದ್ದೇನೆ. ಚಿತ್ರದ ಕಥಾವಸ್ತು ಎಲ್ಲಾ ರೀತಿಯ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ ಎಂದು ರೂಪೇಶ್ ಹೇಳುತ್ತಾರೆ,
"ಬಿಗ್ ಬಾಸ್‌ನಿಂದ ನಿರ್ಗಮಿಸಿದ ನಂತರ, ಬೆರಳೆಣಿಕೆಯಷ್ಟು ನಿರ್ದೇಶಕರು ವಿವಿಧ ಸ್ಕ್ರಿಪ್ಟ್‌ಗಳೊಂದಿಗೆ ನನ್ನನ್ನು ಸಂಪರ್ಕಿಸಿದರು, ಶೀಘ್ರದಲ್ಲಿಯೇ ಹೊಸ ಚಿತ್ರ ಆರಂಭಿಸುತ್ತೇನೆ ಎಂದರು.
ತುಳುವಿನಲ್ಲಿ ನನ್ನ ನಿರ್ದೇಶನದ ಯೋಜನೆ ನನ್ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ನವೆಂಬರ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಬಿಗ್‌ಬಾಸ್‌ನಲ್ಲಿ ನಾನು ಇದ್ದಿದ್ದರಿಂದ ಬಿಡುಗಡೆ ತಡವಾಯಿತು. ಇದೀಗ ನಾನು ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ, ಫೆಬ್ರವರಿಯಲ್ಲಿ ಅದನ್ನು ಬಿಡುಗಡೆ ಮಾಡಲು ನಾನು ಎನ್ನುತ್ತಾರೆ.