ರಾಕಿಬಾಯ್ 37ನೇ ಹುಟ್ಟುಹಬ್ಬ: ಕೆವಿಎನ್ ಪ್ರೊಡಕ್ಷನ್ ಜೊತೆ ಯಶ್ ಮುಂದಿನ ಪ್ಯಾನ್ ಇಂಡಿಯಾ ಚಿತ್ರ, ಪುಷ್ಠಿ ನೀಡುತ್ತಿದೆ ಈ ಫೋಟೋ!
ಇಂದು ಜನವರಿ 8 ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಕೆಜಿಎಫ್ ಚಿತ್ರದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಯಶ್ ಮುಂದಿನ ಅವರ ಪ್ರಾಜೆಕ್ಟ್ ಯಾವುದು, ನಟಿಸುತ್ತಿರುವ ಚಿತ್ರ ಯಾವುದು ಎಂದು ಘೋಷಿಸಿಲ್ಲ.
Published: 08th January 2023 08:02 AM | Last Updated: 08th January 2023 01:13 PM | A+A A-

ನಿರ್ಮಾಪಕ ವೆಂಕಟ್ ಕೋಣಂಕಿ ನಾರಾಯಣ ಜೊತೆ ಯಶ್
ಇಂದು ಜನವರಿ 8 ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಕೆಜಿಎಫ್ ಚಿತ್ರದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಯಶ್ ಮುಂದಿನ ಅವರ ಪ್ರಾಜೆಕ್ಟ್ ಯಾವುದು, ನಟಿಸುತ್ತಿರುವ ಚಿತ್ರ ಯಾವುದು ಎಂದು ಘೋಷಿಸಿಲ್ಲ.
ಅವರ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬದ ದಿನ ಹೊಸ ಚಿತ್ರದ ಘೋಷಣೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು, ಸೋಷಿಯಲ್ ಮೀಡಿಯಾದಲ್ಲಿ Yash19 ಹ್ಯಾಶ್ ಟಾಗ್ ಟ್ರೆಂಡಿಯಾಗಿದೆ. ಆದರೆ ನಾನು ದೊಡ್ಡದಾದ ಪ್ರಾಜೆಕ್ಟ್ ತಯಾರಿಯಲ್ಲಿ ಪ್ರಾಮಾಣಿಕತೆಯಿಂದ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದು ಸ್ವಲ್ಪ ಸಮಯ ತಾಳ್ಮೆಯಿಂದ ಕಾಯಿರಿ, ಹೇಳುತ್ತೇನೆ ಎಂದು ಅಭಿಮಾನಿಗಳಿಗೆ ಪತ್ರ ಬರೆದು ಪತ್ನಿ, ಮಕ್ಕಳೊಂದಿಗೆ ಬರ್ತ್ ಡೇ ಸೆಲೆಬ್ರೇಷನ್ ಗೆ ದುಬೈಗೆ ಹಾರಿದ್ದಾರೆ ಯಶ್.
ಅಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿರುವ ಫೋಟೋಗಳನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಸಂಭ್ರಮಿಸುತ್ತಿದ್ದಾರೆ. ದುಬೈಯ ಫೋಟೋಗಳು ವೈರಲ್ ಆಗಿವೆ.
.#RockyBhai @TheNameIsYash, the #Rockingstar celebrates his birthday with family and friends in #Dubai #HBDYash #HappyBirthdayYash #yashbirthday pic.twitter.com/x8DVUsmVnw
— A Sharadhaa (@sharadasrinidhi) January 7, 2023
ಈ ನಡುವೆ ನಿರ್ಮಾಪಕ ವೆಂಕಟ್ ಕೋಣಂಕಿ ನಾರಾಯಣ ಜೊತೆ ಯಶ್ ತೆಗೆಸಿಕೊಂಡಿರುವ ಫೋಟೋ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಿನೆಮಾ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ. ಯಶ್ ಅವರು ಮುಂದಿನ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡುತ್ತಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಅದಕ್ಕೆ ಈ ಚಿತ್ರ ಪುಷ್ಠಿ ನೀಡುತ್ತಿದೆ.
ಯಶ್ ಅವರ 37ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಈ ಫೋಟೋ ಒಂದು ಸಿಹಿ ಉಡುಗೊರೆ ಎನ್ನಬಹುದು.
Rumours of @TheNameIsYash collaborating with @KvnProductions for his next #panIndia project has been doing the rounds, & this picture of #Rockingstar with Producer #VenkatKonankiNarayana gets a concrete answer. A treat to #Rockybhai fans on his #birthday #HBDYash @LohithNK01 pic.twitter.com/L1sulcNn6o
— A Sharadhaa (@sharadasrinidhi) January 7, 2023