ನೆಲ್ಸನ್ ನಿರ್ದೇಶನದ ರಜಿನಿಕಾಂತ್ ಅಭಿನಯದ 'ಜೈಲರ್' ಚಿತ್ರತಂಡಕ್ಕೆ ಮೋಹನ್ ಲಾಲ್ ಸೇರ್ಪಡೆ
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ 'ಜೈಲರ್'ನ ಭಾಗವಾಗಿದ್ದಾರೆ ಎಂಬ ಊಹಾಪೋಹಗಳು ಏಳುತ್ತಲೇ, ಚಿತ್ರತಂಡ ಬಹು ರಾಷ್ಟ್ರೀಯ ಪ್ರಶಸ್ತಿ ವಿಜೇತರ ತೆರೆಮರೆಯ ಸ್ಟಿಲ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದಲ್ಲಿ ಅವರ ಉಪಸ್ಥಿತಿಯನ್ನು ದೃಢಪಡಿಸಿದೆ.
Published: 09th January 2023 08:42 AM | Last Updated: 09th January 2023 08:42 AM | A+A A-

ಮೋಹನ್‌ಲಾಲ್ - ರಜಿನಿಕಾಂತ್
ಜೈಲರ್ ಸಿನಿಮಾದ ಪಾತ್ರವರ್ಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಸಾಗುತ್ತಿದೆ. ನೆಲ್ಸನ್ ನಿರ್ದೇಶನದ, ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ಈಗಾಗಲೇ ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್, ವಸಂತ್ ರವಿ ಮತ್ತು ಯೋಗಿ ಬಾಬು ಅವರಂತಹ ದೊಡ್ಡ ಪಾತ್ರವರ್ಗವನ್ನು ಹೊಂದಿದೆ.
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ 'ಜೈಲರ್'ನ ಭಾಗವಾಗಿದ್ದಾರೆ ಎಂಬ ಊಹಾಪೋಹಗಳು ಏಳುತ್ತಲೇ, ಚಿತ್ರತಂಡ ಬಹು ರಾಷ್ಟ್ರೀಯ ಪ್ರಶಸ್ತಿ ವಿಜೇತರ ತೆರೆಮರೆಯ ಸ್ಟಿಲ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದಲ್ಲಿ ಅವರ ಉಪಸ್ಥಿತಿಯನ್ನು ದೃಢಪಡಿಸಿದೆ.
ಹೈದರಾಬಾದ್‌ನಲ್ಲಿ ರಜಿನಿಕಾಂತ್ ಅವರು ಜೈಲರ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಮೋಹನ್‌ಲಾಲ್ ಕೂಡ ನಗರದಲ್ಲಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಜೈಲರ್ ಮಲಯಾಳಂ, ತಮಿಳು ಮತ್ತು ಕನ್ನಡ ಇಂಡಸ್ಟ್ರಿಯ ಮೂವರು ಪ್ರಮುಖ ನಟರನ್ನು ಒಳಗೊಂಡಿರಲಿದೆ.
ಇದನ್ನೂ ಓದಿ: ಜೈಲರ್ ಸಿನಿಮಾ ಸೆಟ್ ನಲ್ಲಿ ಶಿವಣ್ಣ, ಎಕ್ಸ್ಕ್ಲೂಸಿವ್ ಫೋಟೋ ರಿವೀಲ್!
ಉನ್ನೈ ಪೋಲ್ ಒರುವನ್ ಚಿತ್ರದಲ್ಲಿ ಮೋಹನ್ ಲಾಲ್ ಅವರು ಕಮಲ್ ಹಾಸನ್ ಜೊತೆ ಕೆಲಸ ಮಾಡಿದ್ದರೂ, ರಜಿನಿಕಾಂತ್ ಜೊತೆಗಿನ ಅವರ ಮೊದಲ ಸಿನಿಮಾ ಜೈಲರ್ ಆಗಿರಲಿದೆ. ರಜಿನಿಕಾಂತ್ ಈ ಹಿಂದೆ ಮಣಿರತ್ನಂ ಅವರ ದಳಪತಿಯಲ್ಲಿ ಮತ್ತೋರ್ವ ಮಲಯಾಳಂ ಸೂಪರ್‌ಸ್ಟಾರ್ ಮುಮ್ಮುಟ್ಟಿ ಅವರೊಂದಿಗೆ ಕೆಲಸ ಮಾಡಿದ್ದಾರೆ.
ಸನ್ ಪಿಕ್ಚರ್ಸ್ ಬೆಂಬಲಿತ ಜೈಲರ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ಇತ್ತೀಚೆಗೆ, ತಯಾರಕರು ಜೈಲರ್‌ನ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ರಜಿನಿಕಾಂತ್ ಅವರನ್ನು ಮುತ್ತುವೇಲ್ ಪಾಂಡಿಯನ್ ಎಂದು ಪರಿಚಯಿಸಲಾಗಿದೆ. ಈ ವರ್ಷದ ಬೇಸಿಗೆಯಲ್ಲಿ ಜೈಲರ್ ಹೊರಬರುವ ನಿರೀಕ್ಷೆಯಿದೆ.