ಟಿವಿಯಲ್ಲಿ 'ಕಾಂತಾರ' ಸಿನಿಮಾ ಪ್ರಸಾರ ಡೇಟ್ ಫಿಕ್ಸ್ : ಸ್ಟಾರ್ ಸುವರ್ಣ ಚಾನೆಲ್ ಗೆ ದಂತಕತೆ ಪ್ರಸಾರದ ಹಕ್ಕು!

ಇಡೀ ದೇಶವೇ ಕೊಂಡಾಡಿದ ಕನ್ನಡ ಸಿನಿಮಾ ‘ಕಾಂತಾರ ಸಿನಿಮಾ ಶೀಘ್ರದಲ್ಲೇ  ಟಿವಿಯಲ್ಲಿ ಪ್ರಸಾರವಾಗಲಿದೆ. ‘ಸ್ಟಾರ್​ ಸುವರ್ಣ’ ವಾಹಿನಿಯು ‘ಕಾಂತಾರ’ ಚಿತ್ರದ ಪ್ರಸಾರ ಹಕ್ಕುಗಳನ್ನು ಕೊಂಡುಕೊಂಡಿದೆ.
ಕಾಂತಾರ ಸಿನಿಮಾ ಸ್ಟಿಲ್
ಕಾಂತಾರ ಸಿನಿಮಾ ಸ್ಟಿಲ್

ಇಡೀ ದೇಶವೇ ಕೊಂಡಾಡಿದ ಕನ್ನಡ ಸಿನಿಮಾ ‘ಕಾಂತಾರ ಸಿನಿಮಾ ಶೀಘ್ರದಲ್ಲೇ  ಟಿವಿಯಲ್ಲಿ ಪ್ರಸಾರವಾಗಲಿದೆ. ಹೊಂಬಾಳೆ ಫಿಲ್ಮ್ಸ್​​ಬ್ಯಾನರ್​ ಅಡಿಯಲ್ಲಿ ಮೂಡಿಬಂದ ‘ಕಾಂತಾರ’ ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿಯಾದ ಕಂಬಳ, ಭೂತಕೋಲ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ.

ರಿಷಬ್​ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್​ ಕುಮಾರ್​, ಪ್ರಮೋದ್​​ ಶೆಟ್ಟಿ, ಕಿಶೋರ್​ ಮುಂತಾದವರು ಅಭಿನಯಿಸಿದ್ದಾರೆ.

‘ಸ್ಟಾರ್​ ಸುವರ್ಣ’ ವಾಹಿನಿಯು ‘ಕಾಂತಾರ’ ಚಿತ್ರದ ಪ್ರಸಾರ ಹಕ್ಕುಗಳನ್ನು ಕೊಂಡುಕೊಂಡಿದೆ. ಜನವರಿ 15 ರಂದು ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಪ್ರಸಾರವಾಗಲಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಚಿತ್ರ ಪ್ರಸಾರವಾಗಲಿದೆ.

ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ‘ಕಾಂತಾರ’ ಸಿನಿಮಾ ದಾಖಲೆ ಮಾಡಿದ್ದಾಗಿದೆ. ಈಗ ಟಿವಿಯಲ್ಲಿ ಪ್ರಸಾರವಾದರೆ ದಾಖಲೆ ಮಟ್ಟದ ಟಿಆರ್​ಪಿ ಸಿಗುವುದು ಗ್ಯಾರಂಟಿ ಎಂದು ರಿಷಬ್​ ಶೆಟ್ಟಿ ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com