ಭೂಮಿಯ ಮೇಲಿನ ಅತಿ ದೊಡ್ಡ ಪ್ರಶಸ್ತಿಗೆ ಪರಿಗಣಿಸಿರುವುದು ಸಂತಸದ ವಿಷಯ: 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ

ಸುದೀಪ್ ನಾಯಕನಾಗಿ ನಟಿಸಿ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಆಸ್ಕರ್ ರೇಸ್ ನಲ್ಲಿ  ಸ್ಥಾನ ಪಡೆದ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.
ವಿಕ್ರಾಂತ್ ರೋಣ ಸಸಿನಿಮಾ ಸ್ಟಿಲ್
ವಿಕ್ರಾಂತ್ ರೋಣ ಸಸಿನಿಮಾ ಸ್ಟಿಲ್

ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾ ಆಸ್ಕರ್‌ ರೇಸ್‌ಗೆ ಎಂಟ್ರಿ ಕೊಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸುದೀಪ್ ನಾಯಕನಾಗಿ ನಟಿಸಿ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಆಸ್ಕರ್ ರೇಸ್ ನಲ್ಲಿ  ಸ್ಥಾನ ಪಡೆದ ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.

2016ರಲ್ಲಿ ರಿಲೀಸ್ ಆಗಿದ್ದ ರಂಗಿತರಂಗ ಸಿನಿಮಾ ಕೂಡ ಆಸ್ಕರ್ ರೇಸ್‌ನಲ್ಲಿತ್ತು. ಇದೀಗ ಕಳೆದ ವರ್ಷ ರಿಲೀಸ್ ಆಗಿರುವ ವಿಕ್ರಾಂತ್ ರೋಣ ಕೂಡ ಅರ್ಹತೆ ಪಡೆದುಕೊಂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕವೂ ಸಂತಸ ಹಂಚಿಕೊಂಡಿದ್ದಾರೆ. 'ರಂಗಿತರಂಗ ಬಳಿಕ ಆಸ್ಕರ್ ಲಿಸ್ಟ್‌ನಲ್ಲಿ ವಿಕ್ರಾಂತ್ ರೋಣ ಸಿನಿಮಾವಿದೆ. ಕಾಂತಾರ ಸಿನಿಮಾ ಕೂಡ ಆಸ್ಕರ್ ರೇಸ್ ನಲ್ಲಿರುವುದು ಖುಷಿಯ ವಿಚಾರವಾಗಿದೆ. ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವಾಗುವುದೇ ದೊಡ್ಡ ವಿಷಯ, ಕನ್ನಡದ ಎರಡು ಸಿನಿಮಾಗಳಿವೆ. ಸಿನಿಮಾತಂಡಕ್ಕೆ ಅಭಿನಂದನೆ' ಎಂದು ಹೇಳಿದ್ದಾರೆ.

ವಿವಿಧ ಭಾಷೆ ಮತ್ತು ದೇಶಗಳಿಂದ ಬರುತ್ತಿರುವ 1000 ಚಿತ್ರಗಳ ಪಟ್ಟಿಯಲ್ಲಿ  ನಮ್ಮ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.ಒಟ್ಟು 301 ಚಿತ್ರಗಳ ಪೈಕಿ ವಿಕ್ರಾಂತ್ ರೋಣ ಚಿತ್ರಕ್ಕೂ ಅರ್ಹತೆ ಸಿಕ್ಕಿದೆ. ಪ್ರತಿ ಚಿತ್ರವು ಯಾವ ಮಾನದಂಡವನ್ನು ಅನುಸರಿಸುತ್ತದೆ ಎಂಬುದರ ಬಗ್ಗೆ ನನಗೆ ತಿಳಿದಿಲ್ಲವಾದರೂ, ಇದು ಭೂಮಿಯ ಮೇಲಿನ ಅತಿದೊಡ್ಡ ಪ್ರಶಸ್ತಿಯಾದ ಕಾರಣ ನಾನು ಖುಷಿಯಲ್ಲಿದ್ದೇನೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.

ಜನವರಿ 24 ರಂದು ಆಸ್ಕರ್​ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆಯಾಗಲಿದೆ. ಅವರ ವೆಬ್‌ಸೈಟ್‌ನಲ್ಲಿ ನಮ್ಮ ಚಲನಚಿತ್ರ, ಮತ್ತು ಅವತಾರ್‌ನಂತಹ ಚಲನಚಿತ್ರಗಳು ಪಟ್ಟಿಯಲ್ಲಿ ಸೇರಿವೆ ವಿಕ್ರಾಂತ್ ರೋಣ, ಮಂಜುನಾಥ್ ಗೌಡ ಅವರ ಶಾಲಿನಿ ಆರ್ಟ್ಸ್ ಬೆಂಬಲಿತ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಸುದೀಪ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ,  ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com